This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics NewsState News

ಇವತ್ತು ಅಥವಾ ನಾಳೆ ಕಾಂಗ್ರೆಸ್’ನ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಎರಡನೇ ಪಟ್ಟಿ ಬರಬಹುದು: ಸಚಿವ ದಿನೇಶ್ ಗುಂಡೂರಾವ್

ಇವತ್ತು ಅಥವಾ ನಾಳೆ ಕಾಂಗ್ರೆಸ್’ನ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಎರಡನೇ ಪಟ್ಟಿ ಬರಬಹುದು: ಸಚಿವ ದಿನೇಶ್ ಗುಂಡೂರಾವ್

ಹುಬ್ಬಳ್ಳಿ: ಇವತ್ತು ಅಥವಾ ನಾಳೆ ಕಾಂಗ್ರೆಸ್’ನ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಎರಡನೇ ಪಟ್ಟಿ ಬರಬಹುದು. ಸಿಇಸಿ ಮೀಟಿಂಗ್ ಆಗಬೇಕು ಹೀಗಾಗಿ ಸ್ವಲ್ಪ ತಡವಾಗ್ತಿದೆ. ಬಹುಶಃ ಮಾ. 18 ಕ್ಕೆ ಎರಡನೇ ಪಟ್ಟಿ ಬಿಡುಗಡೆ ಆಗಬಹುದು ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ತಿಳಿಸಿದರು.

ನಗರದಲ್ಲಿಂದು ಮಾತನಾಡಿದ ಅವರು, ಚುನಾವಣೆ ಆಯೋಗ ಎಷ್ಟರ ಮಟ್ಟಿಗೆ ನಿಷ್ಪಕ್ಷಪಾತ ಕೆಲಸ ಮಾಡ್ತಿದೆ ಅನ್ನೋದು ಪ್ರಶ್ನೆಯಾಗಿದೆ. ಚುನಾವಣಾ ಆಯೋಗದ ಅಧಿಕಾರಿ ರಾಜೀನಾಮೆ ನೀಡಿರೋದು ಇದಕ್ಕೆಲ್ಲ ಕಾರಣ,ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದ್ದು, 6 ಸಾವಿರ ಕೋಟಿಗೂ ಅಧಿಕ ಹಣ ಬಿಜೆಪಿಗೆ ದೇಣಿಗೆ ಹೋಗಿದೆ. ಬಿಜೆಪಿ ಪಕ್ಷಕ್ಕೆ ಅನೇಕ ದೊಡ್ಡ ದೊಡ್ಡ ಕಂಪನಿಗಳು ದೇಣಿಗೆ ಕೊಟ್ಟಿವೆ. ಇದರಿಂದ ಸ್ಪಷ್ಟವಾಗಿ ಗೊತ್ತಾಗತಿದೆ. ಅನೇಕ ಕಂಪನಿಗಳ ಬಿಜೆಪಿಗೆ ದೇಣಿಗೆ ಕೊಟ್ಟಿದ್ದಾರೆ ಎಂದರು.

ಇದು ಭ್ರಷ್ಟಾಚಾರದ ಪರಮಾವಾಧಿ. ಅತ್ಯಂತ ಭ್ರಷ್ಟ ವ್ಯವಸ್ಥೆ ದೇಶದಲ್ಲಿ ನಿರ್ಮಾಣವಾಗಿದ್ದು, ನಮ್ಮ‌ ಮುಂದೆ ಯಾರ ನಿಲ್ಲಬಾರದು ಅನ್ನೋದು ಇವರ ಉದ್ದೇಶ. ಪಕ್ಷಾಂತರ ಮಾಡಲು ಇಡಿ, ಐಟಿ ಉಪಯೋಗ ಮಾಡಿಕೊಳ್ತೀದ್ದು, ಇವರಿಗೆ ಮಾತಾಡೋಕೆ ನೈತಿಕತೆ ಇಲ್ಲ. ಎಲ್ಲ ಕಡೆ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ದಿನವೂ ಕಾಂಗ್ರೆಸ್ ನಾಯಕರ ಮನೆ ಮೇಲೆ ರೇಡ್ ಆಗುತ್ತಿದೆ. ಈ ತರಹದ ವ್ಯವಸ್ಥೆ ದೇಶದಲ್ಲಿ ನಿರ್ಮಾಣವಾಗಿದೆ. ಚುನಾವಣಾ ಬಾಂಡ್ ನಿಂದ ಅನೇಕ ವಿಚಾರ ಹೊರ ಬರತ್ತೆ. ಅದನ್ನುಮುಚ್ಚಿ ಹಾಕಲು ಮೋದಿ ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.

ಯಡಿಯೂರಪ್ಪ ಪೊಕ್ಸೋ ಕೇಸ್ ವಿಚಾರದ ಬಗ್ಗೆ ನಾನು ಹೆಚ್ಚು ಮಾತಾಡಲ್ಲ. ಕಾನೂನು ತನಿಖೆ ಆಗಬೇಕು. ದೂರು ದಾಖಲಾದ ಕೂಡಲೇ ದೋಷಿ ನಿರ್ದೋಷಿ ಅಂತಾ ಹೇಳೋಕೆ ಅಗಲ್ಲ. ನಾವು ಯಾರನ್ನೂ ತೇಜೋವಧೆ ಮಾಡಬಾರದು. ಸರಿಯಾದ ತನಿಖೆಯಾಗಬೇಕು ಎಂದು ಸೂಚಿಸಿದರು.

";