ಬಾಗಲಕೋಟೆ:
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಕಚೇರಿ ಸಮಯದಲ್ಲಿ ಪೌರಾಯುಕ್ತರು, ಮುಖ್ಯಾಧಿಕಾರಿಗಳು ಲಭ್ಯವಿರದ ಕುರಿತು ಸಾಕಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ ಮುಂಜಾನೆ ಸಮಯದಲ್ಲಿ ವಾರ್ಡಗಳಲ್ಲಿ ಸ್ವಚ್ಚತೆ ಕುರಿತು ಭೇಟಿ ನೀಡಿದ ನಂತರ ಕಚೇರಿಯಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ವರೆಗೆ ಸ್ಥಳೀಯವಾಗಿ ಲಭ್ಯ ಇತರಕ್ಕದ್ದೆಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಸುತ್ತೋಲೆ ಹೊರಡಿಸಿದ್ದಾರೆ.
ಸಾರ್ವಜನಿಕರು ನೀಡಿದ ಕುಂದು ಕೊರತೆಗಳನ್ನು ಆಲಿಸಿ ಸ್ಥಳದಲ್ಲಿಯೇ ಇತ್ಯರ್ಥಪಡಿಸತಕ್ಕದ್ದು. ಅನಾವಶ್ಯಕವಾಗಿ ಈ ಕಚೇರಿಗೆ ಯಾವುದೇ ದೂರುಗಳು ಸ್ವೀಕೃತವಾಗದಂತೆ ಕ್ರಮವಹಿಸಬೇಕು.
ಊಟದ ಸಮಯದಲ್ಲಿ ನಂತರ ಸ್ಥಾನಿಕ ಭೇಟಿ, ಚೌಕಾಸಿ ಇದ್ದ ಪ್ರಕರಣಗಳಲ್ಲಿ ಕ್ರಮಕೈಗೊಳ್ಳಬೇಕು. ತದನಂತರ ಕಚೇರಿಯಲ್ಲಿಯೇ ಉಪಸ್ಥಿತರಿದ್ದು, ಮೇಲಾಧಿಕಾರಿಗಳ ಸಭೆ, ನ್ಯಾಯಾಲಯದ ಪ್ರಕರಣಗಳಿಗೆ ಹಾಜರಾಗಬೇಕಾದಲ್ಲಿ ಪೂರ್ವಭಾವಿಯಾಗಿ ಅನುಮತಿ ಪಡೆಯಬೇಕು.
ಸ್ಥಳೀಯವಾಗಿ ನೀವು ಲಭ್ಯ ಇರದೆಯಿರುವ ಸಮಯದಲ್ಲಿ ಸಾರ್ವಜನಿಕರಿಗೆ ತಮ್ಮ ಕಾರ್ಯಾಲಯದ ಸೂಚನಾ ಫಲಕದ ಮೇಲೆ ಕಾರಣದೊಂದಿಗೆ ಪ್ರಕಟಿಸಬೇಕು.
ಸಕಾರಣ ಇಲ್ಲದೇ, ಪೂರ್ವಾನುಮತಿ ಇಲ್ಲದೇ ಕೇಂದ್ರಸ್ಥಾನದಲ್ಲಿ ಲಭ್ಯ ಇರದೇ ಇದ್ದಲ್ಲಿ ಗಂಭಿರವಾಗಿ ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.