This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

100ಗ್ರಾಂ ತೂಕ ಹೆಚ್ಚಳ, ವಿನೇಶ ಪದಕದ ಕನಸು ನುಚ್ಚುನೂರು

100ಗ್ರಾಂ ತೂಕ ಹೆಚ್ಚಳ, ವಿನೇಶ ಪದಕದ ಕನಸು ನುಚ್ಚುನೂರು

ಹೊಸದಿಲ್ಲಿ: ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ಅಧಿಕ ತೂಕದ ಕಾರಣ ಮಹಿಳೆಯರ ಫ್ರೀ ಸ್ಟೈಲ್​ 50 ಕೆಜಿ ಕುಸ್ತಿ ಸ್ಪರ್ಧೆಯ ಚಿನ್ನದ ಪದಕದ ಪಂದ್ಯಕ್ಕೂ ಅನರ್ಹಗೊಂಡಿದ್ದು, ಅವರ ಕನಸು ಭಗ್ನಗೊಳಿಸಿದೆ.

ವಿನೇಶ್ ಫೋಗಟ್ ಅವರು ತಮ್ಮ ವಿಭಾಗದ​ 50ಕೆಜಿಗಿಂತ 100 ಗ್ರಾಂ ಅಧಿಕ ತೂಕ ಹೊಂದಿದ್ದಕ್ಕೆ ಅನರ್ಹಗೊಳಿಸಲಾಗಿದೆ. ಇದರೊಂದಿಗೆ ಭಾರತಕ್ಕೆ ಚಿನ್ನದ ಕನಸೊಂದು ನುಚ್ಚು ನೂರು ಮಾಡಿದೆ.

ಆದರೆ, ಆ 100 ಗ್ರಾಂ ತೂಕ ಇಳಿಸಲು ವಿನೇಶ್ ಅವರು ರಾತ್ರಿಯೆಲ್ಲಾ ಪ್ರಯತ್ನಿಸಿದ್ದರು. 2 ಕಿ.ಮೀ ಓಡಿದ್ದರು. ರಾತ್ರಿ ಜಾಗಿಂಗ್ ಮಾಡಿದ್ದರು. ಸ್ಕಿಪಿಂಗ್ ಮತ್ತು ಸೈಕ್ಲಿಂಗ್ ಕೂಡ ಮಾಡಿದ್ದರು. ಆದರೆ ಸಾಧ್ಯವಾಗಿಲ್ಲ.

ಇಡೀ ರಾತ್ರಿಯಲ್ಲಿ ಸಾಕಷ್ಟು ಪ್ರಯತ್ನ ಪಟ್ಟರೂ 100 ಗ್ರಾಂ ಇಳಿಸಲು ಸಾಧ್ಯವಾಗಲಿಲ್ಲ. ಆದರೆ ಕ್ವಾರ್ಟರ್​ ಫೈನಲ್ ಮತ್ತು ಸೆಮಿಫೈನಲ್​ನಲ್ಲಿ ತೂಕವನ್ನು ಯಶಸ್ವಿಯಾಗಿ ಕಾಯ್ದುಕೊಂಡಿದ್ದರು.

ವಿನೇಶ್ ಅನರ್ಹಗೊಂಡ ಬೆನ್ನಲ್ಲೇ ಫೈನಲ್​​​​ನ ಮತ್ತೊಬ್ಬ ಸ್ಪರ್ಧಿ ಅಮೆರಿಕದ ಸೆರಾ ಹಿಲ್ದಿಬ್ರೇಟ್‌ ಅವರನ್ನು ಚಿನ್ನದ ವಿಜೇತರೆಂದು ಘೋಷಿಸಲಾಗುತ್ತದೆ. ಆದರೆ, ಬೆಳ್ಳಿ ಪದಕಕ್ಕೆ ಯಾರೂ ಅರ್ಹರಾಗಿರುವುದಿಲ್ಲ.

ಈ ಬಾರಿ ಮಹಿಳೆಯರ 50 ಕೆಜಿ ಸ್ಪರ್ಧೆಯಲ್ಲಿ ಯಾವುದೇ ಬೆಳ್ಳಿ ಪದಕ ಇರುವುದಿಲ್ಲ. ಒಂದು ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ನೀಡಲಾಗುತ್ತದೆ. ಒಂದು ಕಂಚು ತನ್ನ ಸೆಮಿ-ಫೈನಲ್ ಪಂದ್ಯದಲ್ಲಿ ಸೋತ ಕುಸ್ತಿಪಟುಗಳಲ್ಲಿ ಒಬ್ಬರಿಗೆ ನೀಡಲಾಗುವುದು. ಇನ್ನೊಂದು ರೆಪ್ಚೇಜ್ ಸುತ್ತಿನಲ್ಲಿ ಗೆದ್ದ ಕುಸ್ತಿಪಟುಗಳಿಗೆ ನೀಡಲಾಗುವುದು.

ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿ ಹಾಗೂ ತಮ್ಮ ಎಕ್ಸ್ ಖಾತೆ‌ ಮೂಲಕ ವಿನೇಶಗೆ  ಸಾಂತ್ವನ‌ ಹೇಳಿದ್ದಾರೆ. ಮತ್ತೊಂದೆಡೆ ಅಸ್ವಸ್ಥಗೊಂಡ ವಿನೇಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

 

 

";