This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

ಹೂಮಳೆಗೈದ ಜನ:೧೦೮ ಅಡಿ ಮಲ್ಲಯ್ಯನ ಧ್ವಜದ ಪಥ ಸಂಚಲನ

ಅತಿ ದೊಡ್ಡ ಮಾಸ್ಕ್ ಅನಾವರಣ

ನಿಮ್ಮ ಸುದ್ದಿ ಬಾಗಲಕೋಟೆ

ಶ್ರೀಶೈಲಕ್ಕೆ ತೆರಳುವ ಪಾದಯಾತ್ರಿಗಳಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಭಕ್ತರು ಪಾದಯಾತ್ರೆಯುದ್ದಕ್ಕೂ ೧೦೮ ಅಡಿ ಉದ್ದದ ಧ್ವಜದೊಂದಿಗೆ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿದರು.

ಸ್ಥಳೀಯ ಶ್ರೀಶೈಲ ಪಾದಯಾತ್ರೆ ಭಕ್ತ ಮಂಡಳಿ ಹಾಗೂ ಬೆಂಗಳೂರಿನ ಅಮ್ಮಾ ಫೌಂಡೇಶನ್ ವತಿಯಿಂದ ಈ ಕಾರ್ಯ ಹಮ್ಮಿಕೊಂಡಿದ್ದು ಸೋಮವಾರ ಸಂಜೆ ಇಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿ ದೇಶದ ಅತಿ ದೊಡ್ಡ ಮಾಸ್ಕ್ನ್ನು ಅನಾವರಣಗೊಳಿಸಲಾಯಿತು.

ಬಸವೇಶ್ವರ ದೇವಸ್ಥಾನದಿಂದ ಹೊರಟ ಧ್ವಜ ಹಾಗೂ ಮಾಸ್ಕ್ ಪಥ ಸಂಚಲನ ಎಂ.ಜಿ.ರಸ್ತೆ, ರಾಜ್ಯ ಹೆದ್ದಾರಿಯಲ್ಲಿ ಬನಶಂಕರಿ ದೇವಸ್ಥಾನ, ಪಟ್ಟಣ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಕಾಳಿಕಾಂಬಾ ದೇವಸ್ಥಾನದವರೆಗೆ ಸಾಗಿತು.

ಪ್ರತಿ ವರ್ಷ ಶ್ರೀಶೈಲಕ್ಕೆ ತೆರಳುವ ಪಟ್ಟಣದ ಪಾದಯಾತ್ರಿಗಳೊಂದಿಗೆ ಬೆಂಗಳೂರಿನ ಪಾದಯಾತ್ರಿಗಳ ನಂಟು ಬೆಸೆದ ಪಟ್ಟಣದ ಯುವ ಉದ್ಯಮಿ ಮಂಜುನಾಥ ಬಂಡಿ ಹಾಗೂ ಅವರ ಗೆಳೆಯರ ಬಳಗದಿಂದ ಕೊರೊನಾ ಜಾಗೃತಿಗಾಗಿ ತಯಾರಾದ ದೇಶದ ಅತಿ ದೊಡ್ಡ ೮ ಫೂಟ್ ಉದ್ದ ಹಾಗೂ ೬ ಫೂಟ್ ಅಗಲದ ಮಾಸ್ಕ್ ಹಾಗೂ ಜನರಲ್ಲಿ ದೈವದ ಅಂಶ ಬಿತ್ತುವ ಸಲುವಾಗಿ ೧೦೮ ಅಡಿ ಉದ್ದದ ಧ್ವಜವನ್ನು ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅನಾವರಣಗೊಳಿಸಲಾಯಿತು.

ಕಾರ್ಯಕ್ರಮದ ರೂವಾರಿ ಮಂಜುನಾಥ ಬಂಡಿ ಮಾತನಾಡಿ, ತಾಯಿ ಹಾಗೂ ತಾಯ್ನಾಡಿನ ಸೇವೆಗೆ ಎಲ್ಲರೂ ಮುಂದಾಗಬೇಕು. ಅವಕಾಶ ದೊರೆತಾಗಲೆಲ್ಲ ಹಿಂಜರಿಯದೇ ನಿಸ್ವಾರ್ಥ ಭಾವನೆಯೊಂದಿಗೆ ಸೇವೆಗೆ ಮುನ್ನುಗ್ಗಿ. ನಾಡು ನಮಗೇನು ಕೊಟ್ಟಿದೆ ಎಂಬುದರ ಬದಲಾಗಿ ನಾಡಿಗಾಗಿ ನಾವೇನು ಕೊಟ್ಟಿದ್ದೇವೆ ಎಂಬ ಮನೋಭಾವ ಇರಲಿ ಎಂದರು.

ಸಂಪನ್ಮೂಲ ವ್ಯಕ್ತಿ ರಮೇಶ ಉಮ್ರಾಣಿ ಮಾತನಾಡಿ, ಧರ್ಮದ ಬಗ್ಗೆ ಸರಿಯಾದ ತಿಳಿವಳಿಕೆ ಅಗತ್ಯ. ಧರ್ಮದ ಹೆಸರಲ್ಲಿ ಮೌಢ್ಯತೆ ನಡೆಯಬಾರದು. ನಮ್ಮಲ್ಲಿನ ದೈವತ್ವ ಪಾದಯಾತ್ರೆಗೆ ಮಾತ್ರ ಸೀಮಿತವಾಗದೆ ಜೀವನದುದ್ದಕ್ಕೂ ಸಾಗಬೇಕು. ಶಾಲೆಯಲ್ಲಿ ಅಗತ್ಯ ಶಿಕ್ಷಣ ದೊರೆತರೆ ಪಾಲಕರು ಮಕ್ಕಳಲ್ಲಿ ಧರ್ಮದ ಶಿಕ್ಷಣ ಬಿತ್ತಬೇಕು ಎಂದರು.

ಸ್ಥಳೀಯ ಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ, ಶ್ರೀಶೈಲ ಜಗದ್ಗುರು ಪೀಠದ ಶಾಖಾಮಠ ಬಳ್ಳಾರಿ ಜಿಲ್ಲೆಯ ಡಿ.ಅಂತಾಪುರದ ಕುಮಾರ ಪಂಡಿತಾರಾಧ್ಯ ಸ್ವಾಮೀಜಿ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.

ತಾಲೂಕು ವೈದ್ಯಾಕಾರಿ ಡಾ.ಪ್ರಶಾಂತ ತುಂಬಗಿ, ಕಂದಾಯ ನಿರೀಕ್ಷಕ ಜಂಬುನಾಥ ಚಿನಿವಾಲರ, ಜೆಎಚ್‌ಐ ಸಂತೋಷ ವ್ಯಾಪಾರಿಮಠ, ಮಲ್ಲೇಶಪ್ಪ ಹೊದ್ಲೂರ, ಬೆಂಗಳೂರು ನಾಗಾರ್ಜುನ ವಿವಿಯ ಡೈರೆಕ್ಟರ್ ಮನೋಹರ್ ನರೋಜಿ, ರಾಷ್ಟ್ರೀಯ ವಾಲಿಬಾಲ್ ಮಾಜಿ ಆಟಗಾರ ರೋಹಿತ್ ಕೆಂಪೇಗೌಡ, ರಾಷ್ಟ್ರೀಯ ಓಟಗಾರ್ತಿ ಪ್ರಮೀಳಾ ಗಟ್ಟಿ, ಸಂಪನ್ಮೂಲ ವ್ಯಕ್ತಿ ರಮೇಶ್ ಉಮ್ರಾಣಿ, ಜ್ಞಾನಜ್ಯೋತಿ ಕಾಲೇಜ್ ಪ್ರಾಚಾರ್ಯ ರಮೇಶ, ಸುರೇಶ ಕಾಯಿ, ಸಿದ್ದು ಸಜ್ಜನ, ರವಿ ಬಂಡಿ ಇತರರು ಇದ್ದರು.

ಆಕರ್ಷಕ ಪಥ ಸಂಚಲನ
ಬಸವೇಶ್ವರ ದೇವಸ್ಥಾನದಿಂದ ಆರಂಭವಾದ ಮಾಸ್ಕ್ ಹಾಗೂ ಧ್ವಜದ ಪಥ ಸಂಚಲನ ಪಟ್ಟಣದ ರಾಜ್ಯ ಹೆದ್ದಾರಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ. ಪಾದಯಾತ್ರೆಯುದ್ದಕ್ಕೂ ಪಟ್ಟಣದ ಜನತೆ ಧ್ವಜಕ್ಕೆ ೧೫೦ ಕೆಜಿ ಹೂಮಳೆಗೈದು ಭಕ್ತಿಯ ಪಾರಮ್ಯ ಮೆರೆದರು. ಕಲಾದವಿ ಅಸ್ಲಾಂ ಕಲಾದಗಿ ಹಾಗೂ ಕೊರೊನಾ ವಾರಿರ‍್ಸ್ಗಳನ್ನು ಸನ್ಮಾನಿಸಲಾಯಿತು. ದಾರಿಯುದ್ದಕ್ಕೂ ಧಾರ್ಮಿಕ ಘೋಷಣೆ ಕೂಗಲಾಯಿತು.

Nimma Suddi
";