This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

State News

2011 ರಿಂದ 2023ರವರೆಗೆ 11.51 ಕೋಟಿ ರೂ. ಆಸ್ತಿ ತೆರಿಗೆ ಬ್ಯಾಲೆನ್ಸ್: ರಾಕ್​ಲೈನ್​ ಮಾಲ್​ಗೆ ಬೀಗಮುದ್ರೆ ಹಾಕಿದ ಬಿಬಿಎಂಪಿ

2011 ರಿಂದ 2023ರವರೆಗೆ 11.51 ಕೋಟಿ ರೂ. ಆಸ್ತಿ ತೆರಿಗೆ ಬ್ಯಾಲೆನ್ಸ್: ರಾಕ್​ಲೈನ್​ ಮಾಲ್​ಗೆ ಬೀಗಮುದ್ರೆ ಹಾಕಿದ ಬಿಬಿಎಂಪಿ

ಬೆಂಗಳೂರು: ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳ ವಿರುದ್ಧ ಪಾಲಿಕ ಕ್ರಮ ಕೈಗೊಳ್ಳುತ್ತಿದೆ. ಬಿಬಿಎಂಪಿ ಇಂದು ತೆರಿಗೆ ಬಾಕಿ ಉಳಿಸಿಕೊಂಡಿರುವ ರಾಕ್​ಲೈನ್ ಮಾಲ್​ಗೆ ಬೀಗಮುದ್ರೆ ಹಾಕಿದೆ. ನಟ, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ ಒಡೆತನದ ಟಿ.ದಾಸರಹಳ್ಳಿಯ ಪ್ರಶಾಂತ್ ನಗರದಲ್ಲಿರುವ ರಾಕ್​​ಲೈನ್​​ ಮಾಲ್​ 2011 ರಿಂದ 2023ರವರೆಗೆ 11.51 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂದು ಮಾಹಿತಿ ತಿಳಿದು ಬಂದಿದೆ.

ರಾಕ್ ಲೈನ್ ಮಾಲ್ ಮ್ಯಾನೇಜರ್ ಪ್ರಕಾಶ್ ಮಾತನಾಡಿ, ಮಂಗಳವಾರ (ಫೆ.13) ರಂದು ರಾತ್ರಿ 9:20 ಗಂಟೆಗೆ ಬಿಬಿಎಂಪಿ ಅಧಿಕಾರಿಗಳು ಬಂದಿದ್ದು, ನಮಗೆ ನೋಟಿಸ್ ಕೊಟ್ಟಿಲ್ಲ ಏನಿಲ್ಲ. ಸುಮ್ನೆ ನೋಟಿಸ್ ತೋರಿಸಿ ವಾಪಾಸ್ ಅವರೆ ಇಟ್ಟಿಕೊಂಡಿದ್ದಾರೆ. ಕೇಳಿದರೇ ನಮಗೆ ಒತ್ತಡ ಇದೆ ಮಾಲ್ ಸೀಜ್ ಮಾಡುತ್ತೇವೆ ಅಂತಾರೆ. ಹೈಕೋರ್ಟ್​ನಲ್ಲಿ ಒಂದು ವರ್ಷದ ಹಿಂದೆ ಇತ್ಯಾರ್ಥವಾಗಿದೆ.

ಬಿಬಿಎಂಟಿ ನೋಟಿಸ್ ನೀಡಿತ್ತು. ನೋಟಿಸ್​ ನೀಡಿದರೂ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ದಾಸರಹಳ್ಳಿಯ ಬಿಬಿಎಂಪಿ ಕಂದಾಯ ಅಧಿಕಾರಿಗಳು ಮಾಲ್​​ಗೆ ಬೀಗಮುದ್ರೆ ಹಾಕಿದ್ದಾರೆ.ಪ್ರಕರಣ ಸಂಬಂಧ ದಾಸರಹಳ್ಳಿ ವಲಯ ಅಪರ ಆಯುಕ್ತ ಬಾಲಶೇಖರ್ ಮಾತನಾಡಿ, 2011ರಿಂದ 11 ಕೋಟಿ 56 ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡಿದೆ. 11 ವರ್ಷದಿಂದ ತೆರಿಗೆ ಕಟ್ಟಿಲ್ಲ. ಒಮ್ಮೆ ಒಂದು ಬಾರಿ 1 ಕೋಟಿ 10 ಲಕ್ಷ ರೂ. ಕಟ್ಟಿದ್ದಾರೆ. 26 ಲಕ್ಷ ಚೆಕ್ ಕೊಟ್ಟಿದ್ದಾರೆ. ಈಗ ನೋಟಿಸ್ ಕೊಟ್ಟಿದ್ದೇವೆ ಆದರೂ ಕಟ್ಟಿಲ್ಲ. ಹೀಗಾಗಿ ಇವತ್ತು ಸೀಲ್ ಮಾಡಿದ್ದೇವೆ ಎಂದು ಹೇಳಿದರು.

2023 ರಲ್ಲಿ ಹೈಕೋರ್ಟ್ ಸೂಚನೆ ಮೇರೆ 1ಕೋಟಿ 56 ಲಕ್ಷ ಬಿಬಿಎಂಪಿಗೆ ಡೆಪಾಸಿಟ್ ಮಾಡಿದ್ದೇವೆ. ಅದಾದ ಬಳಿಕ ಏನಾದರು ತಕರಾರು ಇದ್ದರೆ ಅರ್ಜಿ ಹಾಕಿ ಅಂತ ಹೈಕೋರ್ಟ್ ಬಿಬಿಎಂಪಿಗೆ ಸೂಚನೆ ಕೊಟ್ಟಿದೆ. ಬಿಬಿಎಂಪಿ ಯಾವುದೇ ತಕರಾರು ಅರ್ಜಿ ಹಾಕಿಲ್ಲ. ಈಗ ಏಕಾ ಏಕಿ ಒತ್ತಡ ಇದೆ ಅಂತ ಸೀಲ್ ಮಾಡಿದ್ದಾರೆ ಎಂದರು.