This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Education NewsLocal NewsSports NewsState News

ಅಮೀನಗಡದಲ್ಲಿ ೧೧೧ ಅಡಿ ಉದ್ದನೇಯ ಮಲ್ಲಯ್ಯ ಧ್ವಜ

ಅಮೀನಗಡದಲ್ಲಿ ೧೧೧ ಅಡಿ ಉದ್ದನೇಯ ಮಲ್ಲಯ್ಯ ಧ್ವಜ

ನಿಮ್ಮ ಸುದ್ದಿ ಬಾಗಲಕೋಟೆ

ಶ್ರೀಶೈಲ್ ಮಲ್ಲಯ್ಯನ ಪಾದಯಾತ್ರೆ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ಬಾಗಲಕೋಟ ಜಿಲ್ಲೆಯ ಮಲ್ಲಯ್ಯನ ಪ್ರಮುಖ ಶೃದ್ಧಾ ಕೇಂದ್ರವಾದ ಅಮೀನಗಡ ಮತ್ತೊಮ್ಮೆ ರಾಷ್ಟ್ರ ಮಟ್ಟದ ಗಮನವನ್ನು ತನ್ನತ್ತ ಸೆಳೆಯಲು ಸನ್ನದ್ಧವಾಗಿದೆ.

ಬೆಂಗಳೂರಿನಲ್ಲಿ ನೆಲೆ ನಿಂತಿರುವ ಯುವ ಉದ್ಯಮಿ ಹಾಗೂ ಹಿರಿಯ ಪತ್ರಕರ್ತ ಮಂಜುನಾಥ ಬಂಡಿ, ಕಳೆದ ೯ ವರ್ಷಗಳ ಹಿಂದೆ ಬೆಂಗಳೂರು ಗೆಳೆಯರ ಬಳಗವನ್ನು ಕರೆದುಕೊಂಡು ಬಂದು ಶ್ರೀಶೈಲ್ ಪಾದಯಾತ್ರೆ ಆರಂಭಿಸಿದ್ದು ಇತಿಹಾಸ.

೨೦೨೧ರಲ್ಲಿ ೧೦೮ ಅಡಿ ಉದ್ದನೆಯ ಮಲ್ಲಯ್ಯನ ಧ್ವಜದ ಜೊತೆಗೆ ದೇಶದ ಅತಿ ದೊಡ್ಡ ಮಾಸ್ಕ್ ಅನಾವರಣಗೊಳಿಸುವ ಮೂಲಕ ಸಾಮಾಜಿಕ ಮತ್ತು ಆಧ್ಯಾತ್ಮಿಕ ಜಾಗೃತಿ ಮೂಡಿಸುವಲ್ಲಿ ಸಫಲರಾಗಿದ್ದರು.

10ನೇ ಬಾರಿಗೆ ಪಾದಯಾತ್ರೆ ಕೈಗೊಳ್ಳಲಿರುವ ಈ ತಂಡ ಇದೀಗ ಮಾರ್ಚ್ ೨೬ರಂದು ಅಮೀನಗಡದಲ್ಲಿ ಮತ್ತೊಮ್ಮೆ ಬೃಹತ್ ಪ್ರಮಾಣದಲ್ಲಿ ಬೆಂಗಳೂರಿನ ‘ಅಮ್ಮ ಫೌಂಡೇಶನ್-ಹೇಲ್ಪ್ ಆಂಡ್ ಗ್ರೋ’ ನ ರೋಹಿತ್ ಕೆಂಪೇಗೌಡ ನೇತೃತ್ವದಲ್ಲಿ ಮತ್ತೊಮ್ಮೆ ಮಲ್ಲಯ್ಯನ ಭಕ್ತರ ಕೋರಿಕೆಯ ಮೇರೆಗೆ ೧೧೧ ಅಡಿ ಮಲ್ಲಯ್ಯನ ಧ್ವಜದ ಮೂಲಕ ಆಧ್ಯಾತ್ಮಿಕ ಜಾಗೃತಿ ಹಾಗೂ ಮುಂಬರುವ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯ ಎನ್ನುವ ಸಾಮಾಜಿಕ ಸಂದೇಶ ಜಾಗೃತಿ ಕಾರ್ಯಕ್ಕೆ ಮುಂದಾಗಿದ್ದಾರೆ.

೨೦೨೪ರ ಪಾದಯಾತ್ರೆಯ ವಿಶೇಷತೆಗಳು :
೧೧೧ ಅಡಿ ಉದ್ದನೆಯ ಮಲ್ಲಯ್ಯ ಧ್ವಜ ಹಾಗೂ ೮ ಅಡಿಯ ಮಾದರಿ ಮತಯಂತ್ರ:

ಬೆಂಗಳೂರು ಟೀಮ್ ಮಲ್ಲಯ್ಯ ತಂಡದವರು ಈ ಬಾರಿ ೧೦ನೇ ವರ್ಷದ ಪಾದಯಾತ್ರೆ ಅಂಗವಾಗಿ ೧೧೧ ಅಡಿ ಉದ್ದನೇಯ ಮಲ್ಲಯ್ಯ ಧ್ವಜ ಹಾಗೂ ದೇಶದ ಅತಿ ದೊಡ್ಡ ಮಾದರಿ ಮತಪತ್ರ ತಯಾರಿಸಿ, ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ಕೆ ಭರದ ಸಿದ್ಧತೆ ನಡೆಸಿದ್ದಾರೆ.

ಅಮೀನಗಡದ ಕಲಾವಿದ ರವಿ ಬಂಡಿ ಹಾಗೂ ಬಾಗಲಕೋಟೆಯ ಖ್ಯಾತ ಕಲಾವಿದ ಅಸ್ಲಾಂ ಕಲಾದಗಿ ಅವರು ಬಿಡಿಸಿರುವ ಚಿತ್ತಾಕರ್ಷಕ ಮಲ್ಲಯ್ಯನ ಭಾವಚಿತ್ರವಿರುವ ಧ್ವಜ ಹಾಗೂ ಮತದಾನ ಯಂತ್ರದ ತಯಾರಿ ಭರದಿಂದ ಸಾಗಿದೆ.

ಇದು ಅಮೀನಗಡದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನದ ಮೂಲಕ ಜನರಲ್ಲಿ ಆದ್ಯಾತ್ಮಿಕ ಮತ್ತು ಸಾಮಾಜಿಕ ಜಾಗೃತಿ ಮೂಡಿಸಲಿವೆ. ಈ ಸಂದರ್ಭದಲ್ಲಿ ನಗರದ ಆಯಕಟ್ಟಿನ ಜಾಗದಲ್ಲಿ ಜೆ.ಸಿ.ಬಿ ಮೂಲಕ ೧ ಕ್ವಿಂಟಾಲ್‌ಗೂ ಹೆಚ್ಚು ಹೂಗಳ ಸುರಿಮಳೆಗೈಯಲಾಗುವುದೆಂದು ಆಯೋಜಕ ಮಂಜುನಾಥ ಬಂಡಿ ತಿಳಿಸಿದ್ದಾರೆ.

ತಾರಾ ಮೆರಗು :

ಈಗಾಗಲೇ ರಾಷ್ಟ್ರೀಯ ಓಟಗಾರ್ತಿ ಮತ್ತು ಖ್ಯಾತ ವಾಲಿಬಾಲ್ ಆಟಗಾರ ಸೇರಿದಂತೆ ಕಳೆದ ೯ ವರ್ಷಗಳಲ್ಲಿ ಬೆಂಗಳೂರಿನ ಅನೇಕ ವಿವಿಧ ಕ್ಷೇತ್ರದ ಗಣ್ಯರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಈ ಬಾರಿಯ ಪಾದಯಾತ್ರೆಗೆ ಬೆಂಗಳೂರು ಟೀಮ್ ಮಲ್ಲಯ್ಯ ತಂಡಕ್ಕೆ ತಾರಾ ಮೆರಗು ಬಂದಿದ್ದು, ಶಿವರಾಜ ಕುಮಾರ್ ನಾಯಕತ್ವದ ಟಗರು ಚಿತ್ರದ ಪ್ರಮುಖ ವಿಲನ್ ಡಾಲಿ ಧನಂಜಯ್ ಅಂಕಲ್ ರೋಲ್ ಮಾಡಿದ ಮೈಸೂರಿನ ಸಚ್ಚಿ ದಾನಂದ(ಡಾಲಿ ಧನಂಜಯ ಗುರು ಪಾತ್ರ ) ಹಾಗೂ ಕಾಮಿಡಿ ಕಿಲಾಡಿ ಸೀಸನ್ 1 ರನ್ನರ್ ಅಪ್ ಹಾಗೂ ಬಿಗ್‌ಬಾಸ್ ಖ್ಯಾತಿಯ ಲೋಕೇಶ್ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ನ ಯುವಕರು ಪಾದಯಾತ್ರೆಯಲ್ಲಿ ಪಾಲ್ಗೊಂಡು ೧೦ ದಿನ ನಡೆಯಲಿದ್ದಾರೆ.

ಜೊತೆಗೆ ಕನ್ನಡ ಚಲನಚಿತ್ರದ ಬಾಲನಟಿ ಹಾಗೂ ಹಾಲಿ ಖ್ಯಾತ ಅಂತಾರಾಷ್ಟ್ರೀಯ ನೃತ್ಯಪಟು ಗುರು ರೂಪಾ ರವೀಂದ್ರನ್ ಅವರು ತಂಡದ ಪ್ರಮುಖ ಆಕರ್ಷಣೆ.

೫ ವರ್ಷದ ಪೋರಿಯಿಂದ ಪಾದಯಾತ್ರೆ :ಈ ಬಾರಿಯ ಮತ್ತೊಂದು ವಿಶೇಷ ಎಂದರೆ, ೫ ವರ್ಷದ ಪುಟಾಣಿ ಅಥ್ಲೀಟ್, ಬೆಂಗಳೂರಿನ್ ದ್ರಾವಿಡ್ -ಪಡುಕೋಣೆ ಅಕಾಡೆಮಿಯಲ್ಲಿ ಟೆನಿಸ್‌ನಲ್ಲಿ ಮಿಂಚಿನ ಸಂಚಾರ ಹರಿಸುತ್ತಿರುವ ಕುಮಾರಿ ಪದ್ಮಾವತಿ ಡಿ.ಆರ್ ಈ ಬಾರಿ ಪಾದಯಾತ್ರೆ ಕೈಗೊಳ್ಳಲಿರುವ ಅತ್ಯಂತ ಕಿರಿಯ ವಯಸ್ಸಿನ ಪಾದಯತ್ರಾರ್ಥಿ.

ಈಗಾಗಲೇ ಬೀಹಾರ್ ಜಾರ್ಖಂಡ್ ಮಧ್ಯೆ ೨ ಬಾರಿ ೧೫೦ ಕಿಲೋಮೀಟರ್ ಬಾಬಾ ಬೈದ್ಯನಾಥ ಯಾತ್ರಾ ಸ್ಥಳಕ್ಕೆ ಮತ್ತು ಕಳೆದ ಜನವರಿಯಲ್ಲಿ ಬೀಳಗಿಯಿಂದ ಗುಡ್ಡಾಪುರದ ೧೨೦ ಕಿಲೋಮೀಟರ್ ಪಾದಯಾತ್ರೆ ಯಶಸ್ವಿಗೊಳಿಸಿ ಬೇಷ್ ಎನ್ನಿಸಿಕೊಂಡಿದ್ದು, ಈ ಪಾದಯಾತ್ರೆಯನ್ನು ಎದುರು ನೋಡುತ್ತಿದ್ದಾಳೆ.

ಶರಣ ದಾಸೋಹ ರತ್ನ ಪ್ರಶಸ್ತಿ; ಕಳೆದ ವರ್ಷದಿಂದ ಬೆಂಗಳೂರಿನ ಅಮ್ಮ ಪೌಂಡೇಶನ್ ಆರಂಭಿಸಿರುವ ‘ಶರಣ ದಾಸೋಹ ರತ್ನ’ ಪ್ರಶಸ್ತಿಯನ್ನು ಈ ಬಾರಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ತಲಾ ಒಬ್ಬೊಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸಲು ಅಮ್ಮ ಫೌಂಡೇಶನ್ ಸಮಿತಿ ನಿರ್ಧರಿಸಿದೆ.

ಕರ್ನಾಟಕದ ‘ಶ್ರೀ ಮಲ್ಲಿಕಾರ್ಜುನ ಸೇವಾ ಸಮಿತಿ’ ಕಂಕಣವಾಡಿ, ಮಹಾರಾಷ್ಟ್ರ ಇಚ್ಚಲಕರಂಜಿಯ ‘ಗುರುದೇವ ಭ್ರಮರಾಂಭ-ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್’ ಹಾಗೂ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆಲವಿಯ ಶ್ರೀ ಶಾಂತವೀರಪ್ಪ ಸಜ್ಜನ್ ಅವರಿಗೆ ಪ್ರಶಸ್ತಿ ಪತ್ರ, ಆಕರ್ಷಕ ಸ್ಮರಣಿಕೆ ಮತ್ತು ತಲಾ ೨೫,೦೦೦/- (೨೫ ಸಾವಿರ ರೂಪಾಯಿಗಳ)ರೂಪಾಯಿಗಳ ನಗದು ಹಣವನ್ನು ನೀಡಿ ಗೌರವಿಸಲಾಗುವುದೆಂದು ಫೌಂಡೇಶನ್ ಸಂಸ್ಥಾಪಕ ರೋಹಿತ್ ವಿ.ಕೆ ತಿಳಿಸಿದರು.

ಮರಗಾಲು ಮತ್ತು ಕಂಬಿ ಮಲಯ್ಯನವರಿಗೆ ವಿಶೇಷ ಸನ್ಮಾನ : ಬೆಂಗಳೂರು ಟೀಮ್ ಮಲ್ಲಯ್ಯ ತಂಡದ ೧೦ನೇ ಪಾದಯಾತ್ರೆಯ ಸವಿನೆನಪಿಗಾಗಿ ಮರಗಾಲು ಕಟ್ಟಿಕೊಂಡು ಪಾದಯಾತ್ರೆ ಮಾಡುವ ಮಲ್ಲಯ್ಯ ಭಕ್ತರಿಗೆ ಮತ್ತು ಕಂಬಿ ಹೊತ್ತು ಸಾಗುವ ಮಲ್ಲಯ್ಯನ ಭಕ್ತರಿಗೆ ಪಟ್ಟಣದ ಶ್ರೀ ನೀಲಕಂಠೇಶ್ವರ ಎಂಟರ್‌ಪ್ರೈಸೆಸ್ ಗಚ್ಚಿನಮಠದ ಎದುರಿಗೆ ಈ ಬಾರಿ ವಿಶೇಷವಾಗಿ ಗೌರವಿಸಿ ಸನ್ಮಾನ ಮಾಡಲಾಗುವುದು ಹಾಗೂ ಇದೇ ಸಂದರ್ಭದಲ್ಲಿ ಅಮೀನಗಡದಿಂದ ಶ್ರೀಶೈಲ ತಲುಪುವವರೆಗೂ ದಾರಿಯೂದ್ದಕ್ಕೂ ದಾಸೋಹ ಸೇವೆ ಮಾಡುತ್ತಿರುವವರಿಗೆಲ್ಲ ಗೌರವ ಸನ್ಮಾನ ಮತ್ತು ನೆನಪಿನ ಕಾಣಿಕೆ ನೀಡಲಾಗುವದೆಂದು ಅಮ್ಮ ಪೌಂಡೇಶನ್‌ನ ಸಂಸ್ಥಾಪಕರಾದ ಶ್ರೀ ರೋಹಿತ್ ಕೆಂಪೇಗೌಡ ತಿಳಿಸಿದ್ದಾರೆ.

“೧೦ ವರ್ಷಗಳಿಂದ ಶ್ರೀಶೈಲ ಪಾದಯಾತ್ರೆ ಕೈಗೊಳ್ಳುತ್ತಿದ್ದು, ನಮ್ಮ ಬದುಕಿನಲ್ಲಿ ಸರ್ವಾಂಗೀಣ ಅಭಿವೃದ್ಧಿಆಗಿದೆ. ಈ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದು, ನಮ್ಮ ತಂಡಕ್ಕೆ ತವರು ಮನೆಯಂತೆ ಇರುವ ಅಮೀನಗಡದಲ್ಲಿ ಕಳೆದ ೧೬ ವರ್ಷಗಳಿಂದ ೩ ದಿನಗಳ ಕಾಲ ಪಾದಯಾತ್ರಾರ್ಥಿಗಳಿಗೆ ಉಚಿತ ಕಬ್ಬಿನ ಹಾಲು ನೀಡುತ್ತಿರುವ ಶ್ರೀಮತಿ ಮಂಗಳಮ್ಮ ಹನುಮಾರ್ ಅವರ ಸುಸ್ಥಿರ ಬದುಕಿಗೆ ಅನಕೂಲವಾಗುವ ನಿಟ್ಟಿನಲ್ಲಿ ಧನ ಸಹಾಯ ಮಾಡಲಾಗುವುದು.

ರೋಹಿತ್ ವಿ.ಕೆ. ಸಂಸ್ಥಾಪಕರು, ‘ಅಮ್ಮ ಫೌಂಡೇಶನ್-ಹೆಲ್ಫ್ ಅಂಡ್ ಗ್ರೋ’ ಬೆಂಗಳೂರು.

 

ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಸ್ಥಳೀಯರು ಹಾಗೂ ರೈತ ಸಂಘಟನೆಯ ಸದಸ್ಯರು ದಿಢೀರ್ ಚಳವಳಿ

ಗುಳೆದಗುಡ್ಡ ತಾಂಡಾದ ಯುವ ಕ್ರಿಕೆಟಿಗ ರವಿ ರಾಠೋಡ್ ಬೆಂಗಳೂರಿನ ರಾಹುಲ್ ದ್ರಾವಿಡ್ ಕ್ರಿಕೆಟ್ ಅಕ್ಯಾಡೆಮಿಗೆ ಆಯ್ಕೆಯಾಗಿದ್ದು, ಅಮೀನಗಡದ ಚಿನ್ಮಯ್-ಚಿನ್ನಾದ್ ಫೌಂಡೇಶನ್ ವತಿಯಿಂದ ಯುವ ಕ್ರಿಕೆಟಿಗನಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಧನ ಸಹಾಯ ಮಾಡುತ್ತಿದ್ದು, ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ನಿರಂತರವಾಗಿ ಮುಂದುವರೆಯುತ್ತದೆ.
ಮಂಜುನಾಥ್ ಬಂಡಿ,
ಸಂಸ್ಥಾಪಕರು, ಚಿನ್ಮಯ್-ಚಿನ್ನಾದ್ ಫೌಂಡೇಶನ್ ಅಮೀನಗಡ

Nimma Suddi
";