ತೋವಿವಿಯಲ್ಲಿ 13ನೇ ಘಟಿಕೋತ್ಸವ | ಸಚಿವರಿಂದ ಪದಕ ಪ್ರಧಾನ
ಬಾಗಲಕೋಟೆ:
ತೋಟಗಾರಿಕೆ ವಿವಿಯಲ್ಲಿ ಸೋಮವಾರ ನಡೆದ 13ನೇ ಘಟಿಕೋತ್ಸವದಲ್ಲಿ ಬೀದರನ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಮಗಳಾದ ಅಮೂಲ್ಯ ಪಾಟೀಲಗೆ ಬಿ.ಎಸ್.ಸಿ ಪದವಿಯಲ್ಲಿ 16 ಚಿನ್ನದ ಪಕದ ಲಭಿಸಿದ್ದು, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಚಿನ್ನದ ಪದಕಗಳನ್ನು ಪ್ರಧಾನ ಮಾಡಿದರು.
ಚಿನ್ನದ ಪದಕ ಪಡೆದ ಅಮೂಲ್ಯ ಅವರು ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸಂಗಪ್ಪ ಪಾಟೀಲ ಅವರ ಹಿರಿಯ ಮಗಳಾಗಿದ್ದು, ತಾಯಿ ಬೀದರ ಜಿಲ್ಲೆ ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾದ್ಯಾಪಕರಾಗಿದ್ದಾರೆ. ಅಮೂಲ್ಯ ಹುಬ್ಬಳ್ಳಿಯ ಠಕ್ಕರ್ ಪ್ರೌಢಶಾಲೆಯಲ್ಲಿ 10ನೇ ತರಗತಿವರೆಗೆ, ಪಿಯುಸಿ ತರಗತಿಯನ್ನು ಬೆಂಗಳೂರಿನ ಎಂಇಎಸ್ ಪ್ರೊ.ಸುಬ್ಬರಾವ್ ಪಿಯು ಮಹಾವಿದ್ಯಾಲಯದಲ್ಲಿ ಕಲಿತಿದ್ದು, ಸ್ನಾತಕ ತೋಟಗಾರಿಕೆ ಪದವಿಯನ್ನು ಬೀದರನಲ್ಲಿ ವಿದ್ಯಾಬ್ಯಾಸ ಮಾಡಿದ್ದಾರೆ.
ಬಿಎಸ್‍ಸಿ ಪದವಿಯ ವಿವಿಧ ವಿಭಾಗದಲ್ಲಿ ಒಟ್ಟು 16 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ತಂದೆ-ತಾಯಿಯರ ಪ್ರೋತ್ಸಾಹ, ಓದಿಲ್ಲದೇ ಜೀವನವಿಲ್ಲ. ಓದಿದರೆ ಮಾತ್ರ ಮುಂದೆ ಬರಲು ಸಾಧ್ಯವೆಂಬುದನ್ನು ತಿಳಿದಿರುವುದಾಗಿ ಅಮೂಲ್ಯ ಹೇಳುತ್ತಾರೆ.
ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಪರಿಶ್ರಮ ಮುಖ್ಯವಾಗಿದೆ. ನನ್ನ ತಂಗಿ ಮತ್ತು ಅಜ್ಜ-ಅಜ್ಜಿಯರು ನನಗೆ ಸ್ಪೂರ್ತಿಯಾಗಿದ್ದರು. ಮುಂದೆ ಎಂ.ಎಸ್.ಸಿಯಲ್ಲಿ ಸ್ನಾತಕೋತ್ತರ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಬಿಎಸ್‍ಸಿ ಆಹಾರ ತಂತ್ರಜ್ಞಾನದಲ್ಲಿ ಸ್ಮಿತಾ ಎನ್ 5 ಚಿನ್ನದ ಪದಕ ಪಡೆದರೆ, ಗಾಯತ್ರಿ ಎಸ್.ಆರ್ 4, ಅನಿನ್ ಕುಮಾರ ಆರ್ ಮತ್ತು ಗಗನ್‍ಗೌಡ ಎಂ.ಬಿ ತಲಾ 3, ಸಂತೋಷ ಕಾಚಿ ಮತ್ತು ಗೋವಿಂದ ಕುಮಾರ ತಲಾ 2, ಯಾಸ್‍ಮಿನ್ ಪಿ.ಪಿ, ವಿದ್ಯಾಶ್ರೀ ಗುಂಡಾಳೆ, ಅಶ್ವಥಿ ಸುರೇಶ, ಚಿನ್ಮಯ ಅರುಣ್ ಕೋಪರ್ಡೆ, ಜ್ಯೋತಿ ಜಗ್ಗಲ, ಕೃಷ್ಣಾ ಹೂಗಾರ, ಚಂದ್ರುಶ್ರೀ ಎಸ್, ಅಂಜೀನಯ್ಯ, ಪ್ರವೀಣ ರಾಚೋಳಿ, ತೇಜ ಸಿ.ಆರ್, ಅನನ್ಯ ಎಸ್.ಎಸ್, ಪ್ರಿಯಾಂಕ ಪಿ, ಲಾವಣ್ಯ ಎಸ್.ಎನ್. ಹಾಗೂ ಪ್ರತ್ಯಕ್ಷ ಮೊಗ್ರ ತಲಾ ಒಂದು ಚಿನ್ನದ ಪದಕ ಪಡೆದುಕೊಂಡರು.
ಪಿ.ಎಚ್.ಡಿ ಪದವಿಯಲ್ಲಿ ಅಂಜಲಿ ವಿ.ಎ 4 ಚಿನ್ನದ ಪಡೆದುಕೊಂಡರೆ, ಇಂಪ ಎಚ್.ಆರ್ ಮತ್ತು ಬಸವರಾಜ ಪಡಶೆಟ್ಟಿ ತಲಾ 2 ಹಾಗೂ ಗೌತಮ ವೈ ಮತ್ತು ಸನ್ನತಿ ನಾಯಕ ತಲಾ ಒಂದು ಚಿನ್ನದ ಪದಕ ಪಡೆದರು. ಎಂ.ಎಸ್.ಸ್ಸಿ ತೋಟಗಾರಿಕೆಯಲ್ಲಿ ತಾನ್ಯ ಗೌಡ ಮತ್ತು ಸೋನಿಕಾ ಎ.ಎಸ್ 4 ಚಿನ್ನದ ಪದಕ ಪಡೆದುಕೊಂಡರೆ, ಸಿಂಚನ ಎ.ಎಚ್ 3 ಪದಕ, ಕೀರ್ತನ ವಿ, ಭೂಮಿಕ ವೈ.ಪಿ ಕಿಶೋರ ಕುಮಾರ ತಲಾ 2, ಮೇಘನ ಎಸ್, ಅಕ್ಷತಾ ಕೊಪ್ಪದ, ಲಕ್ಷ್ಮೀ ಗಂಗಲ್, ರಾಜಶ್ರೀ ತಲಾ 1 ಚಿನ್ನದ ಪದಕಗಳನ್ನು ಪಡೆದುಕೊಂಡರು.