ನಿಮ್ಮ ಸುದ್ದಿ ಬಾಗಲಕೋಟೆ
ತೋವಿವಿಯಲ್ಲಿ 12ನೇ ಘಟಿಕೊತ್ಸವ | ರಾಜ್ಯಪಾಲರಿಂದ ಪದವಿ ಪ್ರಧಾನ
ಕಿರಾಣಿ ವ್ಯಾಪಾರಿ ಮಗಳು ಧರಣಿಗೆ 16 ಚಿನ್ನದ ಪದಕ
ತೋಟಗಾರಿಕೆ ವಿವಿಯಲ್ಲಿ ಶನಿವಾರ ನಡೆದ 12ನೇ ಘಟಿಕೋತ್ಸವದಲ್ಲಿ ಕಿರಾಣಿ ವ್ಯಾಪಾರಿ ಮಗಳಾದ ಧರಣಿಗೆ 16 ಚಿನ್ನದ ಪದಕಗಳು ಲಭಿಸಿದ್ದು, ರಾಜ್ಯದ ರಾಜ್ಯಪಾಲರು ಹಾಗೂ ತೋವಿವಿಯ ಕುಲಾಧಿಪತಿಗಳಾದ ಥಾವರ್‍ಚಂದ್ ಗೆಹ್ಲೋಟ್ ಅವರಿಂದ ಚಿನ್ನದ ಪದಕಗಳನ್ನು ಪಡೆದುಕೊಂಡರು.
ಕೋಲಾರ ಜಿಲ್ಲೆಯ ಸುಗಟೂರ ಗ್ರಾಮದವರಾದ ಧರಣಿಯವರು ನಾಗೇಂದ್ರ ಮತ್ತು ಸವಿತಾ ದಂಪತಿಗಳ ಮೊದಲ ಮಗಳಾಗಿದ್ದು, ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ 10ನೇ ತರಗತಿಯವರೆಗೆ, ಸಹ್ಯಾದ್ರಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾಬ್ಯಾಸ ಮಾಡಿದ್ದು, ಮುನಿರಾಬಾದ್ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಬಿಎಸ್‍ಸಿ (ಹಾನರ್ಸ್) ಪದವಿಯಲ್ಲಿ ವಿವಿಧ ವಿಭಾಗಗಳಲ್ಲಿ ಒಟ್ಟು 16 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.
ಬಾಗಲಕೋಟೆ ತೋವಿವಿಯಲ್ಲಿ 2019ರಲ್ಲಿ ನಡೆದ ಅಂತರ್ ವಿದ್ಯಾಲಯಗಳ ಪ್ರಬಂಧ ಸ್ಪರ್ಧೆ, 2021 ರಲ್ಲಿ ಮೈಸೂರಿನಲ್ಲಿ ನಡೆದ ಅಂತವಿದ್ಯಾಲಯಗಳ ಯುವ ಪ್ರತಿಬೋತ್ಸವದಲ್ಲಿ ಕೊಲಾಜ್ಮೇಕಿಂಗ್‍ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಚತ್ರಕಲೆ, ಕೋಲಾಜ್, ಅಡುಗೆಯಲ್ಲಿ ಹೊಸ ಪ್ರಯೋಗ ಮಾಡುವುದು ಹವ್ಯಾಸ ಹೊಂದಿದ್ದಾರೆ. ಸದ್ಯ ಪದವಿಯಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದು, ಮುಂದೆ ಯುಪಿಎಸ್‍ಸಿ ಪರೀಕ್ಷೆ ಹಾಗೂ ಸಿವಿಲ್‍ದಲ್ಲಿ ಹೆಚ್ಚಿನ ಒಲವು ಇರುವುದಾಗಿ ಮಾದ್ಯಮದವರಿಗೆ ತಿಳಿಸಿದರು.
ಬಿಎಸ್ಸಿ (ಹಾನರ್ಸ್) ಪದವಿಯಲ್ಲಿ ನಿಶ್ಚಿತ ಎನ್ 4 ಬಂಗಾರದ ಪದಕಗಳನ್ನು ಪಡೆದರೆ, ಸಚೀತನ ಮೋಡಗಿ, ಸರಸ್ವತಿ ಆರ್, ಪ್ರೀಯಾಂಕಾ ಎಚ್.ಎಲ್ ತಲಾ 3 ಬಂಗಾರದ ಪದಕ, ಎಸ್.ಪಿ.ಶೃತಿ, ಕುನೆ ಲಾವಣ್ಯ, ಎಚ್.ಎಸ್.ಹೇಮಂತ ಗೌಡಾ, ಭುವನೇಶ್ವರಿ ಖಡಕಿ ತಲಾ 2 ಬಂಗಾದ ಪದಕ ಮತ್ತು ಕಾವ್ಯಶ್ರೀ ಡಿ.ಸಿ, ವರ್ಷ ಮೋಜಿ, ದಿವ್ಯಭಾರತಿ, ಸುಷ್ಮಾ ಎನ್, ಶೀತಲ್ ಬಿ.ಆರ್, ಮಂಜುನಾಥ ಮೆಂದೋಳೆ, ಲಾವಣ್ಯ ವಾಯ್.ಎಸ್, ಅಮಲ್ ಕಿಸೋರ ತಲಾ ಒಂದು ಬಂಗಾರದ ಪದಕ ಪಡೆದರು.
ಪಿಎಚ್.ಡಿ ಪದವಿಯಲ್ಲಿ ಜಮುನಾರಾಣಿ ಜಿ.ಎನ್ ಪ್ರಥಮ ರ್ಯಾಂಕ್ ಪಡೆದು 2 ಚಿನ್ನದ ಪದಕ ಪಡೆದರೆ, ದ್ವೀತಿ ರ್ಯಾಂಕನ್ನು ರುಚಿತಾ ಟಿ 3 ಬಂಗಾರದ ಪದಕಗಳನ್ನು ಪಡೆದುಕೊಂಡರು. ಎಂ.ಎಸ್.ಸಿ (ತೋಟಗಾರಿಕೆಯಲ್ಲಿ) ಅನುಷಾ 6 ಚಿನ್ನದ ಪದಕ ಪಡೆದುಕೊಂಡರೆ, ಅಜೀತ್ ಕುಮಾರ 3 ಚಿನ್ನದ ಪದಕ, ಸ್ನೇಹಾ ಹೆಂಬಾಡೆ, ವಿದ್ಯಾ ತಲಾ ಎರಡು ಚಿನ್ನದ ಪದಕ, ಸಹನಾ ಜಿ.ಎಸ್, ಧನುಜಾ ಜಿ.ಎಸ್, ದಿವಾಕರ ಸಿ.ಜಿ, ಶಾಂತಾ ತಲಾ ಒಂದು ಚಿನ್ನದ ಪದಕಗಳನ್ನು ಪಡೆದುಕೊಂಡರು.