This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime NewsLocal NewsState News

ಬೈಕ್‌ನಲ್ಲಿಟ್ಟಿದ್ದ 2.5 ಲಕ್ಷ ಎಗರಿಸಿ ಪರಾರಿ

ಬೈಕ್‌ನಲ್ಲಿಟ್ಟಿದ್ದ 2.5 ಲಕ್ಷ ಎಗರಿಸಿ ಪರಾರಿ

ವಿಜಯಪುರ

ಬೈಕ್‌ನಲ್ಲಿಟ್ಟಿದ್ದ 2.5 ಲಕ್ಷ ರೂ. ನಗದು ದೋಚಿ ಪರಾರಿಯಾದ ಘಟನೆ ನಿಡಗುಂದಿ ಪಟ್ಟಣದ ಕಾಲೇಜ್ ರಸ್ತೆಯ ವಾಣಿಜ್ಯ ಸಂಕೀರ್ಣದ ಬಳಿ ಮಂಗಳವಾರ ನಡೆದಿದೆ.

ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಮದ ಹೊಳೆಬಸು ಸಿದ್ರಾಮಪ್ಪ ಹೋಗೋಡಿ ಹಣ ಕಳೆದುಕೊಂಡ ವ್ಯಕ್ತಿ.

ಈತ ಪಟ್ಟಣದ ಯೂನಿಯನ್ ಬ್ಯಾಂಕ್‌ನಿಂದ 2.5 ಲಕ್ಷ ರೂ. ಹಣ ಡ್ರಾ ಮಾಡಿಕೊಂಡು, ಅವುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಬೈಕ್‌ನಲ್ಲಿಟ್ಟಿದ್ದ. ಆದರೆ ಮೊಬೈಲ್ ದುರಸ್ತಿಗೆಂದು ಬೇರೆ ಅಂಗಡಿಗೆ ತೆರಳಿದ್ದೇ ತಡ. ಇದನ್ನು ಬಂಡವಾಳ ಮಾಡಿಕೊಂಡ ಆಗುಂತಕರು ಹಣವಿದ್ದ ಪ್ಲಾಸ್ಟಿಕ್ ಚೀಲ ಎತ್ತಿಕೊಂಡು ಪರಾರಿಯಾಗಿದ್ದಾರೆ.

ಬಳಿಕ ಹೊಳೆಬಸು ಬೈಕ್ ಬಳಿ ಬಂದು ನೋಡಿದಾಗ ಬೈಕ್‌ನಲ್ಲಿದ್ದ ಹಣ ಕಳ್ಳತನವಾಗಿದೆ ಎಂಬುದು ಗಮನಕ್ಕೆ ಬಂದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹೊಳೆಬಸು ಅವರನ್ನು ಬ್ಯಾಂಕ್‌ನಿಂದಲೇ ಗಮನಿಸುತ್ತಿರುವ ಕಳ್ಳತ ಈ ಕೃತ್ಯ ಎಸಗಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ನಿಡಗುಂದಿ ಠಾಣೆ ಪೊಲೀಸರು ತಿಳಿಸಿದ್ದಾರೆ.

Nimma Suddi
";