ರಾಜ್ಯ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆಸುವ ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ 2019ನೇ ಸಾಲಿನಲ್ಲಿ ಅಧಿಸೂಚಿಸಿದ್ದ ವಿವಿಧ ಇಲಾಖೆಗಳ ಸಹಾಯಕರು / ಪ್ರಥಮ ದರ್ಜೆ ಸಹಾಯಕರು ಹುದ್ದೆಗಳ ನೇಮಕಾತಿಗೆ ಸಂಬಂಧ, ಇದೀಗ 2ನೇ ಹೆಚ್ಚುವರಿ ಆಯ್ಕೆಪಟ್ಟಿ ಬಿಡುಗಡೆ ಮಾಡಿದೆ. ಈ ಮೊದಲು 17-02-2023 ರಂದು ಮೊದಲ ಹೆಚ್ಚುವರಿ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿತ್ತು ಎಂದು ಮಾಹಿತಿ ತಿಳಿದು ಬಂದಿದೆ.
ಹೈದ್ರಾಬಾದ್ ಕರ್ನಾಟಕ ವೃಂದದ 2 ಇಲಾಖೆಗಳು ಹೆಚ್ಚುವರಿ ಪಟ್ಟಿಗಾಗಿ ಪ್ರಸ್ತಾವನೆ ಸಲ್ಲಿಸಿದ್ದವು. ಆದ್ದರಿಂದ ಈ ಇಲಾಖೆಗಳಿಗೆ 6 ಅಭ್ಯರ್ಥಿಗಳ ಹೆಸರನ್ನು ಹೆಚ್‌ಕೆ ವೃಂದದಡಿ ಪ್ರಕಟಿಸಲಾಗಿದೆ. ಹಾಗೆಯೇ ಉಳಿಕೆ ಮೂಲ ವೃಂದದ 6 ವಿವಿಧ ಇಲಾಖೆಗಳು ಸಹ ಹೆಚ್ಚುವರಿ ಅರ್ಹತಾ ಪಟ್ಟಿಗೆ ಪ್ರಸ್ತಾವನೆ ಸಲ್ಲಿಸಲಾದ ಹಿನ್ನೆಲೆಯಲ್ಲಿ ಬರೋಬರಿ 65 ಅಭ್ಯರ್ಥಿಗಳ ಹೆಸರನ್ನು ಈಗ ಸಹಾಯಕರು / ಪ್ರಥಮ ದರ್ಜೆ ಸಹಾಯಕರು ಹುದ್ದೆಗಳಿಗೆ ಪ್ರಕಟಿಸಲಾಗಿದೆ.
2019ನೇ ಸಾಲಿನ ಎಫ್‌ಡಿಎ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರು ಪಡೆದಿದ್ದ ಅಭ್ಯರ್ಥಿಗಳು ಮಿಸ್ ಮಾಡದೇ ಈಗ ಈ ಎರಡನೇ ಹೆಚ್ಚುವರಿ ಅರ್ಹತಾ ಪಟ್ಟಿ ಚೆಕ್ ಮಾಡಿಕೊಳ್ಳಿ.
– ಆಯೋಗದ ಅಧಿಕೃತ ವೆಬ್ ಪೋರ್ಟಲ್ https://www.kpsc.kar.nic.in/ ಗೆ ಭೇಟಿ ನೀಡಿ.
– ಓಪನ್ ಆದ ವೆಬ್‌ಪೇಜ್‌ನಲ್ಲಿ ಪಟ್ಟಿಗಳು>> ಆಯ್ಕೆಪಟ್ಟಿ>> ಹೆಚ್ಚುವರಿ ಪಟ್ಟಿ’ ಆಯ್ಕೆ ಮಾಡಿ ಕ್ಲಿಕ್ ಮಾಡಿ.
– ನಂತರ ಓಪನ್ ಆಗುವ ವೆಬ್‌ಪೇಜ್‌ನಲ್ಲಿ ‘2nd Additional Select For The Post Of FDA (RPC) 2019 / FDA (HK) 2019’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ನಿಮ್ಮ ಹೆಸರು, ರಿಜಿಸ್ಟರ್ ನಂಬರ್ ಪ್ರಕಾರ ಪರಿಶೀಲನೆ ಮಾಡಿಕೊಳ್ಳಿ.
ಕೆಪಿಎಸ್‌ಸಿ ಈಗ ಹೆಚ್‌ಕೆ ಹಾಗೂ ಉಳಿಕೆ ಮೂಲ ವೃಂದ ಎರಡಕ್ಕು ಸೇರಿ ಒಟ್ಟು 71 ಅಭ್ಯರ್ಥಿಗಳ ಹೆಸರನ್ನು ಈ ಹುದ್ದೆಗಳಿಗೆ ಅರ್ಹತಾ ಪಟ್ಟಿಯಲ್ಲಿ ಪ್ರಕಟಿಸಿದೆ. ಅಭ್ಯರ್ಥಿಗಳ ಹೆಸರು, ವಿಳಾಸ, ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು, ಆಯ್ಕೆಯಾದ ವರ್ಗ ಇತರೆ ಮಾಹಿತಿಗಳು ಅರ್ಹತಾ ಪಟ್ಟಿಯಲ್ಲಿವೆ.