ನಿಮ್ಮ ಸುದ್ದಿ ಬಾಗಲಕೋಟೆ
ಕೋವಿಡ್ ಸೋಂಕಿತರಿಗೆ ಅಗತ್ಯವಾಗಿರುವ ಒಂದು ಕಂಟೇನರ್ ಆಕ್ಸಿಜನ್ನ್ನು ಕೊಂಡುಕೊಳ್ಳಲು ಜಿಲ್ಲಾಡಳಿತಕ್ಕೆ 3.60 ಲಕ್ಷ ರೂ.ಗಳ ಚೆಕನ್ನು ನೀಡುವುದರ ಮೂಲಕ ಅರಳಿಕಟ್ಟಿ ಫೌಂಡೇಷನ್ ಮಾನವೀಯತೆ ಮೆರೆದಿದ್ದಾರೆ.
ಬಾಗಲಕೋಟೆ ಪಿಡಬ್ಲೂಡಿ ಐಬಿ ಆವರಣದಲ್ಲಿ ಶನಿವಾರ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಚಕ್ ಹಸ್ತಾಂತರ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿಗಳು 3.60 ಲಕ್ಷ ರೂ.ಗಳನ್ನು ಆಕ್ಸಿಜನ್ ಕೊಳ್ಳಲು ನೀಡುವುದರ ಮೂಲಕ ಮುಧೋಳದ ಅರಳಿಕಟ್ಟಿ ಫೌಂಡೇಷನ್ ಸಂಕಷ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯವನ್ನು ಶ್ಲಾಘಿಸಿದರು.
ಈ ಫೌಂಡೇಷನ್ ನಗರದಲ್ಲಿ 5 ರೂ ಪಹಣಿ ಉತಾರೆ ನೀಡುವುದು, ಪ್ರವಾಹ ಬಂದಾಗ ಅನ್ನ ದಾಸೋಹ, ಸ್ಪರ್ಧಾತ್ಮ ಪರೀಕ್ಷೆ ತಯಾರಿ ವಿದ್ಯಾರ್ಥಿಗಳಿಗೆ ಹೈಟೆಕ್ ಗ್ರಂಥಾಲಯ, ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ ಹಾಗೂ ಕ್ರೀಡೆ ಸಂಸ್ಕøತಿಕ ಕಾರ್ಯ ಮಾಡುವುದರ ಮೂಲಕ ಮೆಚ್ಚುಗೆ ಪಾತ್ರವಾಗಿದೆ ಎಂದು ಹೇಳಿದರು.
ಚಕ್ ನೀಡಿದ ಸಂಸ್ಥೆಯ ಅಧ್ಯಕ್ಷೆ ಸವಿತಾ ಅರಳಿಕಟ್ಟಿ ಹಾಗೂ ಉಪಾಧ್ಯಕ್ಷೆ ರಾಜೇಶ್ವರಿ ಕೋಮಾರ ಮಾತನಾಡಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಬಿಡಿಸಿ ಬ್ಯಾಂಕ್ ನಿರ್ದೇಶಕ ರಾಮಣ್ಣ ತಳೇವಾಡ ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ ಸಾಗುತ್ತಿದ್ದೇವೆ ಎಂದು ಹೇಳಿದರು. ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಒ ಟಿ.ಭೂಬಾಲನ ಇದ್ದರು.