ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯಲ್ಲಿ ಕೋವಿಡ್‌ನಿಂದ ೩೦ ಜನ ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಹೊಸದಾಗಿ ೨ ಕೊರೊನಾ ಪ್ರಕರಣಗಳು ಸೋಮವಾರ ದೃಡಪಟ್ಟಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು ೩೫೦೨೦ ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು ೩೪೫೨೬ ಜನ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ೨೦೬೬ ಸ್ಯಾಂಪಲ್‌ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು ೭೦೦೯೦೬ ಸ್ಯಾಂಪಲ್ ಪರೀಕ್ಷಿಸಲಾಗಿದ್ದು. ಅದರಲ್ಲಿ ೬೬೩೨೨೦ ನೆಗಟಿವ್ ಪ್ರಕರಣ, ಹಾಗೂ ೩೧೭ ಮೃತ ಪ್ರಕರಣಗಳು ವರದಿಯಾಗಿರುತ್ತದೆ. ಇನ್ನು ೧೭೭ ಮಾತ್ರ ಸಕ್ರಿಯ ಪ್ರಕರಣಗಳು ಇದ್ದು, ಇಲ್ಲಿವರೆಗೆ ಒಟ್ಟು ೪೯೮ ಸ್ಯಾಂಪಲ್‌ಗಳು ಮಾತ್ರ ರಿಜೆಕ್ಟ ಆಗಿರುತ್ತವೆ.
ಹೊಸದಾಗಿ ಬಾಗಲಕೋಟೆ ತಾಲೂಕಿನಲ್ಲಿ ೮೩೬ ಸ್ಯಾಪಲ್ ಪರೀಕ್ಷೆಯಿಂದ ೦, ಬಾದಾಮಿ ೩೫೫ ಪರೀಕ್ಷೆಯಿಂದ ೦, ಬೀಳಗಿ ೧೯೭ ಸ್ಯಾಂಪಲ್ ಪರೀಕ್ಷೆಯಿಂದ ೧, ಜಮಖಂಡಿ ೫೬೪ ಪರೀಕ್ಷೆಯಿಂದ ೧, ಮುಧೋಳದಲ್ಲಿ ೨೨೯ ಜನರ ಪರೀಕ್ಷೆಯಿಂದ ೦ ಹಾಗೂ ಹುನಗುಂದಲ್ಲಿ ೪೭೭ ಸ್ಯಾಂಪಲ್ ಪರೀಕ್ಷೆಯಿಂದ ೧ ಜನರಲ್ಲಿ ಸೋಂಕು ದೃಡಪಟ್ಟಿವೆ. ಪಾಜಿಟಿವಿಟಿ ಪ್ರಮಾಣ ಶೇ ೦.೦೮ ಇರುತ್ತದೆ.
ಹೊಸದಾಗಿ ದೃಡಪಟ್ಟ ೨ ಕೋವಿಡ್ ಪ್ರಕರಣಗಳಲ್ಲಿ ೨ ಜನ ಹೋಮ್ ಐಸೋಲೇಷನದಲ್ಲಿ ಇದ್ದಾರೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಬೀಳಗಿ ತಾಲೂಕಿನಲ್ಲಿ ಶೇ. ೦.೨೫ ರಷ್ಟು ಕಂಡುಬAದರೆ ಅತೀ ಕಡಿಮೆ ಶೇ.೦ ರಷ್ಟು ಬಾಗಲಕೋಟೆ, ಬಾದಾಮಿ, ಹುನಗುಂದ, ಮುಧೋಳ ತಾಲೂಕಿನಲ್ಲಿ ಕಂಡುಬAದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.