ಬಾಗಲಕೋಟೆ:
ಪ್ರಧಾನಿ ನರೇಂದ್ರ ಮೋದಿ, ಅಟಲ್ ಬಿಹಾರಿ ವಾಜಪೇಯಿವರು ಜನರ ಕಲ್ಯಾಣಕ್ಕಾಗಿ, ದೇಶದ ಹಿತಕ್ಕಾಗಿ ಸಂವಿಧಾನ ತಿದ್ದುಪಡಿ ಮಾಡಿದರೆ ಕಾಂಗ್ರೆಸ್ ಪಕ್ಷದ ನಾಯಕರು ದಲಿತರು, ಹಿಂದುಳಿದವರು ಪ್ರಧಾನಿಯಾಗಬಾರದು, ಇವರನ್ನು ಆಡಳಿತದಿಂದ ದೂರ ಇಡಬೇಕು ಎಂಬ ಕುಹಕ ಬುದ್ದಿಯನ್ನು ಉಪಯೋಗಿಸಿ ತಮ್ಮ ಸ್ವಾರ್ಥ ರಾಜಕಾರಣಕ್ಕೆ ಸಂವಿಧಾನವನ್ನು ತಿದ್ದುಪಡಿ ಮಾಡಿಕೊಂಡರು ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.
ತಮ್ಮ ನಿವಾಸದ ಆವರಣದಲ್ಲಿ ಆಯೋಜಿಸಿದ್ದ ಭೀಮ ಸಂಗಮ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಸವರ್ಧಿಕಾರಿಯಂತೆ ಆಡಳಿತ ನಡೆಸಲು ಹಾಗೂ ತಮ್ಮ ಕಪಿಮುಷ್ಠಿಯಿಂದ ಆಡಳಿತ ಬೇರೆಯವರ ಕೈಯಲ್ಲಿ ಹೋಗಬಾರದು ಎಂದು ನೆಹರು, ರಾಜೀವ್ ಗಾಂಧಿ,ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ತಮಗೆ ಇಷ್ಟಬಂದಂತೆ ಸಂವಿಧಾನವನ್ನು ತಿದ್ದುಪಡಿ ಮಾಡಿಸಿದ್ದಾರೆ ಹೀಗಾಗಿ ಡಾ.ಬಿ.ಆರ್.ಅಂಬೇಡ್ಕರ ಬರೆದ ಸಂವಿಧಾನವನ್ನು ಕಾಂಗ್ರೆಸ್ ಸ್ವಾರ್ಥ ರಾಜಕಾರಣಕ್ಕೆ ಹೆಚ್ಚು ಬಳಸಿಕೊಂಡಿದೆ ಎಂದರು.
ದೇಶದ ಜನರಿಗೆ ಸಹಾಯ ಮಾಡಲು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ ಬರೆದ ಸಂವಿಧಾನ ಎಲ್ಲರಿಗೂ ಅನ್ವಯವಾಗಬೇಕು ಎಂದು ಬಿಜೆಪಿ ಕೆಲಸ ಮಾಡುತ್ತಿದೆ. ಸ್ವಾರ್ಥ ರಾಜಕಾರಣಕ್ಕೆ ಬಿಜೆಪಿ ಆಡಳಿತದಲ್ಲಿ ಎಂದಿಗೂ ತಿದ್ದುಪಡಿ ಮಾಡಿಲ್ಲ. ಸಂವಿಧಾನ ಎತ್ತಿ ಹಿಡಿದವರು ಯಾರು ಎಂಬುದರ ಕುರಿತು ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಬಿಜೆಪಿಯಿಂದ ದೇಶದಲ್ಲಿ ಭೀಮಸಂಗಮ, ದಲಿತ, ತಾಂಡಾಗಳಲ್ಲಿ ಡಾ.ಅಂಬೇಡ್ಕರ ಬರೆದಿರುವ ಸಂವಿಧಾನ ಬಗ್ಗೆ ತಿಳಿಸುವುದು ಹಾಗೂ ಸಾರ್ವಜನಿಕ ಸಭೆಯ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರವರು ಸಂವಿಧಾನ ರಚನಾ ಮಂಡಳಿಯಲ್ಲಿದ್ದರೆ ನಮ್ಮ ಕೈಯಿಂದ ಸವರ್ಾಧಿಕಾರ ಆಡಳಿತ ಹೋಗಲಿದೆ ಎಂಬ ಹುನ್ನಾರದಿಂದ ನೆಹರು ಆದಿಯಾಗಿ ಅಂದಿನ ಕಾಂಗ್ರೆಸ್ ನಾಯಕರು ಡಾ.ಬಿ.ಆರ್.ಅಂಬೇಡ್ಕರವರನ್ನು ಸೋಲಿಸಿದರು. ಸಂವಿಧಾನ ರಚನಾ ಸಮಿತಿಗೆ ಬರದಂತೆ ನೋಡಿಕೊಳ್ಳುವ ದ್ರೋಹದ ಕೆಲಸವನ್ನು ಡಾ.ಅಂಬೇಡ್ಕರವರಿಗೆ ಕಾಂಗ್ರೆಸ್ ಮಾಡಿದೆ ಆದರೆ ಈಗ ಸಂವಿಧಾನ ಬುಕ್ ಹಿಡಿದು ಕಾಂಗ್ರೆಸ್ ನಾಯಕರು ದೊಡ್ಡ ಮಾತುಗಳನು ಹೇಳುತ್ತಿದ್ದರೆ ಹೀಗಾಗಿ ಜನ ಯಾರ ಕಾಲದಲ್ಲಿ ಹೆಚ್ಚು ಅಂಬೇಡ್ಕರಗೆ ಅವಮಾನ ಆಗಿದೆ ಎಂಬುದರ ಕುರಿತು ಅರಿತುಕೊಳ್ಳಬೇಕು ಎಂದು ಹೇಳಿದರು.
ದೇಶದಲ್ಲಿ ಕೋವಿಡ್, ವಿಪತ್ತುಗಳು ಸಂಭವಿಸಿದಾಗ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರ ರಕ್ಷಣೆಗೆ ನಿಂತು ಅನ್ನದ ಹಕ್ಕು ನೀಡಿದರು. ಪ್ರತಿಯೊಬ್ಬರಿಗೂ ಐದು ಕೆ.ಜಿ.ಅಕ್ಕಿಯನ್ನು ಉಚಿತವಾಗಿ ನೀಡಿದ್ದು ಪ್ರಧಾನಿ ಮೋದಿ. ಸಿದ್ಧರಾಮಯ್ಯನವರು ಅಕ್ಕಿಕೊಟ್ಟಿಲ್ಲ ಚೀಲ ಅವರದ್ದು ಅಕ್ಕಿ ಕೇಂದ್ರ ಸಕರ್ಾರದ್ದು. ದೇಶದಲ್ಲಿ ಬಿಜೆಪಿ ಜನಪರ ಕೆಲಸ ಮಾಡಿದ್ದನ್ನು ಜನರಿಗೆ ತಪ್ಪು ಸಂದೇಶ ನೀಡುವ ಮೂಲಕ ಕುತಂತ್ರ ರಾಜಕಾರಣ ಕಾಂಗ್ರೆಸ್ ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.
ಸ್ವಾತಂತ್ರ್ಯ ನಂತರ ದೇಶದಲ್ಲಿ ಬಹುಪಾಲ ಆಡಳಿತ ನಡೆಸಿದ ಕಾಂಗ್ರೆಸ್ ಪ್ರತಿಯೊಬ್ಬರನ್ನು ಸರಸಮಾನಾಗಿ ನೋಡಲಿಲ್ಲ. ಸಮ ಸಮಾಜ ನಿಮರ್ಾಣಕ್ಕೆ ಆದ್ಯತೆ ನೀಡಲಿಲ್ಲ. ಅಸ್ಪ್ರಶ್ಯತೆ ಜೀವಂತ ಉಳಿಯುವಂತೆ ಮಾಡಿದರು. ಆದರೆ ಪ್ರಧಾನಿ ಮೋದಿ ಹಾಗೂ ಅಟಲ್ ಬಿಹಾರ ವಾಜಪೇಯಿಯವರು ದೇಶದ ಜನರೆಲ್ಲ ಒಂದೇ ಎಂದು ಆಡಳಿತ ಮಾಡಿದ್ದಾರೆ ಎಂದರು.
ಪೌರಕಾರ್ಮಿಕರಾದ ದಿಲೀಪ್ ಡವಳೇಶ್ವರ, ಸದಾಶಿವ ಸಿಂಗ್ರೆ, ಶ್ರೀಮತಿ ರಾಧಾ ಚಲವಾದಿ, ಬಸವ್ವ ಹಾದಿಮನಿ, ಗೌರಮ್ಮ ಶೀಕ್ಕಲಗಾರ, ಇವರನ್ನು ಗೌರವಪೂರ್ಣವಾಗಿ ಸನ್ಮಾನಿಸಲಾಯಿತು,
ವೇದಿಕೆಯ ಮೇಲೆ ಶಂಭುಗೌಡ ಪಾಟೀಲ್, ಶೇಖರ್ ಮಾನೆ, ಬೊಮ್ಮಣ್ಣ ಮಾದರ, ಬೊಮ್ಮಣ್ಣ ಬಂಡಿವಡ್ಡರ್, ಲಚಮಪ್ಪ ಲಮಾಣಿ, ಸಂಗಣ್ಣ ಕುಪ್ಪಸ್ತ,
ಕಾರ್ಯಕ್ರಮದ ನಂತರ ಮಹಿಳೆಯರಿಗೆ ಸಹಭೋಜನ ಹಾಗೂ ಉಡಿತುಂಬುವ ಕಾರ್ಯಕ್ರಮ ಪಿ.ಎಚ್.ಪೂಜಾರ ನಿವಾಸದಲ್ಲಿ ನಡೆಯಿತು.
ಮುಖಂಡ ಶಂಭುಗೌಡ ಪಾಟೀಲ, ಡಾ.ಶೇಖರ ಮಾನೆ, ಸಂಗಣ್ಣ ಕುಪ್ಪಸ್ತ, ಇದಕ್ಕೂ ಮೊದಲು ರಾಘವೇಂದ್ರ ನಾಗೂರ ಪ್ರಸ್ತಾವಿಕ ಮಾತನಾಡಿದರು , ಅಪ್ಪನ ವಡ್ಡರಕಲ್ , ಚಂದ್ರಕಾಂತ ಕೇಸನೂರ, ವಿರುಪಾಕ್ಷ ಅಮ್ರುತಕರ ,ಕುಮಾರ ಗಿರಿಜಾ, ರಾಜು ಚಿತ್ತವಾಡಗಿ, ರಾಜು ಶ್ರೀರಾಮ,ಮಂಜು ಚವ್ಹಾಣ ,ರಾಜು ಲಮಾಣಿ, ಕಳಕಪ್ಪ ಬಾದವಾಡಗಿ, ಸಂಗಣ್ಣಗೌಡ ಗೌಡರ, ಬಸವರಾಜ್ ಚಲವಾದಿ, ಮುತ್ತಪ್ಪ ಪೂಜಾರಿ, ಶ್ರೀಮತಿ ಪ್ರಮೀಳಾ P. ಪೂಜಾರ ಶ್ರೀಮತಿ ಡಾಕ್ಟರ್ ವೈಶಾಲಿ ಶೇ ಮಾನೆ ,ಶಾರದಾ ಬೇವೂರ್, ಯಮನಪ್ಪ ಬೇವೂರು, ಯಶೋಧ ಚಲವಾದಿ, ಬಾಸು ಲಮಾಣಿ, ರಾಮಸಿಂಗ್ ಪವಾರ್, ವಾರಪ್ಪ ಚೌಹಾಣ್, ಡಾಕ್ಟರ್ ಕೃಷ್ಣಾ ಚೌದರಿ , ಹನುಮಗೌಡ ಪಾಟೀಲ್ ಡೊಮಿನಾಳ , ಶಂಕರ್ ಕಟ್ಟಿಮನಿ, ಶೇಖಪ್ಪ ಚಲವಾದಿ , ಈರಣ್ಣ ತಂಬಾಕದ, ಹನುಮಂತ ಕೊಣ್ಣೂರ, ಪ್ರಶಾಂತ ರಾಥೋಡ್, ರುಕ್ಮಾಬಾಯಿ ಲಮಾಣಿ, ಸುಮಿತ್ರ ಲಮಾಣಿ, ಉಮಾದೇವಿ ಗವಿಮಠ, ಶಾಂತಾಬಾಯಿ ಗೋಣಿ , ಗಂಗಾಬಾಯಿ ರಜಪೂತ ,ಅನು ಕೃಷ್ಣ ಚೌದರಿ ಹುಲಿಗೇಪ್ಪ ಗುರಿಕಾರ ,ಮಂಜು ಬಳೂರಗಿ, ಸೇರಿದಂತೆ ನೂರಾರು ಎಸ್ ಸಿ ಎಸ್ ಟಿ ಜನರು ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.