ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯಲ್ಲಿ ೬ ಜನ ಕೋವಿಡ್‌ನಿಂದ ಗುಣಮುಖರಾಗಿ ನಿಗದಿತ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಹೊಸದಾಗಿ ೩೭ ಕೊರೊನಾ ಪ್ರಕರಣಗಳು ಶುಕ್ರವಾರ ದೃಡಪಟ್ಟಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು ೧೪೦೮೩ ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು ೧೩೭೭೦ ಜನ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.
ಹೊಸದಾಗಿ ದೃಡಪಟ್ಟವರಲ್ಲಿ ಬಾದಾಮಿ ೧೧, ಬಾಗಲಕೋಟೆ ೧೦, ಹುನಗುಂದ ೭, ಮುಧೋಳ ೬, ಜಮಖಂಡಿ ತಾಲೂಕಿನಲ್ಲಿ ಮೂವರಲ್ಲಿ ಸೋಂಕು ದೃಡಪಟ್ಟಿದ್ದು, ಅವರನ್ನು ಸರಕಾರಿ, ಖಾಸಗಿ ಹಾಗೂ ಹೋಮ್ ಐಸೋಲೇಷನ್‌ದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲಾ ಕೋವಿಡ್ ಲ್ಯಾಬ್‌ನಲ್ಲಿ ಪರಿಕ್ಷಿಸಲಾಗುತ್ತಿದ್ದ ೪೦೦೮ ಸ್ಯಾಂಪಲ್‌ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು ೪೮೨೯೮೧ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ ೪೬೪೩೨೬ ನೆಗಟಿವ್ ಪ್ರಕರಣ ೧೩೬ ಮೃತ ಪ್ರಕರಣ ವರದಿಯಾಗಿರುತ್ತದೆ.
ಇನ್ನು ೧೭೭ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿವರೆಗೆ ಒಟ್ಟು ೪೬೨ ಸ್ಯಾಂಪಲ್‌ಗಳು ಮಾತ್ರ ರಿಜೆಕ್ಟ ಆಗಿರುತ್ತವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.