ಬಾಗಲಕೋಟೆ
ಜಿಲ್ಲೆಯ ಅಮೀನಗಡ ಪಟ್ಟಣದಲ್ಲಿ ಕಳೆದ ಮೂರು ದಿನದಿಂದ ಸುರಿಯುತ್ತಿರುವ ಮಳೆ ಭಾನುವಾರ ರಾತ್ರಿ ಭರ್ಜರಿಯಾಗಿಯೇ ಸುರಿದಿದ್ದು 38.3 ಮಿ.ಮೀ. ದಾಖಲಾಗಿದೆ.
ಪಟ್ಟಣದ ಸೇರಿದಂತೆ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಮೂರು ದಿನದಿಂದ ರಾತ್ರಿ ವೇಳೆ ನಿರಂತರವಾಗಿ ಸುರಿಯುತ್ತಿರುವ ಮಳೆ ಭಾನುವಾರ ರಾತ್ರಿ 11ಕ್ಕೆ ಆರಂಭವಾಗಿ ಬೆಳಗ್ಗೆ 4 ರವರೆಗೆ ಭರ್ಜರಿಯಾಗಿಯೇ ಸುರಿಯಿತು.
ಮಳೆಯೊಂದಿಗೆ ಗುಡುಗು, ಭರ್ಜರಿ ಮಿಂಚು ಜತೆಗೆ ಸಿಡಿಲಿನ ಆರ್ಭಟವೂ ಜೋರಾಗಿತ್ತು. ರಾತ್ರಿ ವಿದ್ಯುತ್ ಕೈ ಕೊಟ್ಟಿತ್ತು. ಈ ಮಧ್ಯೆ ಸಿಡಿಲಿನ ಆರ್ಭಟಕ್ಕೆ ಮನೆಯಲ್ಲಿನ ಬಲ್ಟ್, ಯುಪಿಎಸ್, ಫ್ಯಾನ್, ಮೊಬೈಲ್ ಚಾರ್ಜರ್ ಸೇರಿದಂತೆ ಕೆಲ ಎಲೆಕ್ಟಾçನಿಕ್ ವಸ್ತುಗಳು ಹಾನಿಗೀಡಾದವು.
ಭಾರಿ ಮಳೆಯಿಂದಾಗಿ ಗುಡ್ಡದ ಪ್ರದೇಶದಿಂದ ತಗ್ಗು ಪ್ರದೇಶಕ್ಕೆ ಮಳೆ ನೀರು ಹರಿದು ಹಲವು ರಸ್ತೆಗಳಲ್ಲಿ ಕಲ್ಲು, ಮಣ್ಣು ಸಂಗ್ರಹಗೊAಡು ನಿವಾಸಿಗಳು ಪರದಾಡಿದರು. ರಾಜ್ಯ ಹೆದ್ದಾರಿಯಲ್ಲೂ ಮಣ್ಣು ಸಂಗ್ರಹವಾಗಿ ಸವಾರರು ತೊಂದರೆಪಟ್ಟರು.
ಸ್ಥಳೀಯ ಆಡಳಿತ ಸೋಮವಾರ ಬೆಳಗ್ಗೆಯಿಂದ ರಾಜ್ಯ ಹೆದ್ದಾರಿಯಲ್ಲಿನ ಮಣ್ಣು ಹಾಗೂ ಗುಡ್ಡದಿಂದ ಓಣಿ, ಓಣಿಗಳಲ್ಲಿ ಸಂಗ್ರಹಗೊAಡ ಕಲ್ಲು, ಮಣ್ಣು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿತ್ತು.