This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsNational NewsState News

38ನೇ ರೇಡಿಯಾಲಜಿ- ಐ ಆರ್ ಐ ಎ ಸಮ್ಮೇಳನ

38ನೇ ರೇಡಿಯಾಲಜಿ- ಐ ಆರ್ ಐ ಎ ಸಮ್ಮೇಳನ

ವಿಜಯಪುರ,

ರೇಡಿಯಾಲಾಜಿಸ್ಟ್ ಗಳ ಸಮಸ್ಯೆಗಳ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ, ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಭರವಸೆ ನೀಡಿದ್ದಾರೆ.

ನಗರದ ಬಿ. ಎಲ್. ಡಿ. ವೈದ್ಯಕೀಯ ಕಾಲೇಜಿನ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ರಾಜ್ಯ 38ನೇ ರೇಡಿಯಾಲಜಿ- ಐ ಆರ್ ಐ ಎ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ರೇಡಿಯಾಲಾಜಿಸ್ಚ್ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈ ಸಂಘಟನೆಯವರು ಮಾಡಿರುವ ಮನವಿಯ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.

ಜನರಿಗೆ ಕೈಗೆಟಕುವಂತೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ವೈದ್ಯರ ಸತತವಾಗಿ ನಡೆಸುತ್ತಿರುವ ಪ್ರಯತ್ನ ಗಮನಾರ್ಹವಾಗಿದೆ. ರೇಡಿಯಾಲಜಿ ವೈದ್ಯಕೀಯ ಕ್ಷೇತ್ರದ ಅವಿಭಾಜ್ಯ ಅಂಗವಾಗಿದೆ. ಇಂಟರವೆನ್ಶನಲ್ ರೇಡಿಯಾಲಜಿ ಶಸ್ತಚಿಕಿತ್ಸೆಗಳಲ್ಲಿ ಕ್ರಾಂತಿಕಾರಿ ತಂದಿದೆ. ಈ ಕ್ಷೇತ್ರದ ಸಾಧಿಸಲಾಗುತ್ತಿರುವ ಪ್ರಗತಿಯಿಂದಾಗಿ ರೋಗಗಳನ್ನು ಆರಂಭದಲ್ಲಿಯೇ ಪತ್ತೆ ಮಾಡಲು ಮತ್ತು ಈ ಮೂಲಕ ಶಸ್ತ್ರಚಿಕಿತ್ಸೆಗಳ ಅವಧಿ ಮತ್ತು ರೋಗಿ ಎದುರಿಸುವ ನೋವಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಜೊತೆಗೆ, ರೋಗಿಗಳು ಆಸ್ಪತ್ರೆಯಲ್ಲಿರಬೇಕಾದ ಅವಧಿ ಹಾಗೂ ಶಸ್ತ್ರಚಿಕಿತ್ಸಾ ವೆಚ್ಚವೂ ಗಣನೀಯವಾಗಿ ಕಡಿಮೆಯಾಗುತ್ತಿದೆ. ಈಗ ಹೊಸದಾಗಿ ಬಂದಿರುವ ಕೃತಕ ಬುದ್ದಿಮತ್ತೆಯಿಂದ ರೇಡಿಯಾಲಜಿ ಕ್ಷೇತ್ರದಲ್ಲಿ ಮತ್ತಷ್ಟು ಪ್ರಗತಿಯಾಗಲಿದೆ. ಇದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಹೊಂದಿರುವ ತಿಕಿತ್ಸೆ ಎಲ್ಲರಿಗೂ ಅನುಕೂಲ ಕಲ್ಪಿಸುವುದು ಕೂಡ ಅಗತ್ಯವಾಗಿದೆ ಎಂದು ಅವರು ಹೇಳಿದರು.

ವೈದ್ಯಕೀಯ ಸಲಕರಣೆ ಉದ್ಯಮ ಸ್ಥಾಪನೆಗೆ ಸಕಲ ನೆರವು

ಇದೇ ವೇಳೆ, ರಾಜ್ಯದಲ್ಲಿ ವೈದ್ಯಕೀಯ ಸಲಕರಣೆ ತಯಾರಿಕೆ ಘಟಕ ಸ್ಥಾಪಿಸಲು ಮುಂದಾಗುವ ಉದ್ಯಮಿಗಳಿಗೆ ರಾಜ್ಯ ಸರಕಾರ ಸಕಲ ಮೂಲಭೂತ ಸೌಲಭ್ಯ ಒದಗಿಸಿ ಸಂಪೂರ್ಣ ಸಹಕಾರ ನೀಡಲಿದೆ. ವಿಜಯಪುರ ಜಿಲ್ಲೆಯಲ್ಲಿ ಜಲಸಂಪನ್ಮೂಲ ಹೇರಳವಾಗಿದ್ದು, ಮುಂಬರುವ ದಿನಗಳಲ್ಲಿ ಕೈಗಾರಿಕೆಗಳಿಗೂ ಹೆಚ್ಚು ಅನುಕೂಲ ಸಿಗಲಿದೆ. ಆರೋಗ್ಯ ಕ್ಷೇತ್ರದಲ್ಲಿ ರೆಡಿಯೋಥೆರಪಿ ಮಹತ್ವದ್ದಾಗಿದ್ದು, ಈ ಸಮ್ಮೇಳನದಲ್ಲಿ 500 ವೈದ್ಯಕೀಯ ಪ್ರತಿನಿಧಿಗಳು ಪಾಲ್ಗೋಂಡು 400 ಸಂಶೋಧನೆಗಳನ್ನು ಮಂಡಿಸುತ್ತಿರುವುದು ರೇಡಿಯಾಲಜಿ ಕ್ಷೇತ್ರದ ಜನಪ್ರೀಯತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ವಿಜಯಪುರದಲ್ಲಿ ಮೂರ್ನಾಲ್ಕು ತಿಂಗಳಲ್ಲಿ ವಿಮಾನ ಸಂಚಾರ ಪ್ರಾರಂಭವಾಗಲಿದೆ, ಇದರಿಂದ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ಸಿಗಲಿದೆ. ಇದರಿಂದ ಈ ಭಾಗದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೂ ನೆರವಾಗಲಿದೆ ಎಂದು ಸಚಿವ ಎಂ. ಬಿ. ಪಾಟೀಲ ತಿಳಿಸಿದರು.

ಐ ಆರ್ ಐ ಎ ರಾಜ್ಯಾಧ್ಯಕ್ಷ ಡಾ. ಪಿ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ಈ ಬಾರಿಯ ಸಮ್ಮೇಳದಲ್ಲಿ ಅತೀ ಹೆಚ್ಚು ಪ್ರತಿನಿಧಿಗಳು ಪಾಲ್ಗೋಂಡಿರುವುದು ಸಮ್ಮೇಳನದ ಯಶಸ್ಸಿಗೆ ಸಾಕ್ಷಿಯಾಗಿದೆ. ಈ ಭಾಗದದಲ್ಲಿ ಸಚಿವ ಎಂ. ಬಿ. ಪಾಟೀಲ ಅವರು ಮಾಡಿರುವ ನೀರಾವರಿ ಕೆಲಸಗಳು ಅಭಿವೃದ್ಧಿಯನ್ನು ಸಾರಿ ಹೇಳುತ್ತಿವೆ ಎಂದು ಹೇಳಿದರು. ಅಲ್ಲದೇ, ರೇಡಿಯಾಲಾಜಿಸ್ಟ್ ಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

ಐ ಆರ್ ಎ ಐ ರಾಷ್ಟ್ರೀಯ ಅಧ್ಯಕ್ಷ ಡಾ. ಉಮೇಶ ಕೃಷ್ಣಮೂರ್ತಿ ಮಾತನಾಡಿ, ರೆಡಿಯಾಲಜಿ ಕ್ಷೇತ್ರದಲ್ಲಿ ಭಾರತಕ್ಕೆ ವಿಶ್ವಮಾನ್ಯತೆ ಸಿಗುತ್ತಿದ್ದು, ದೇಶದ ರೇಡಿಯಾಲಜಿಸ್ಟ್ ಗಳು ಈಗ ವಿಶ್ವಾದ್ಯಂತ ಗಮನ ಸೆಳೆಯುತ್ತಿದ್ದಾರೆ. ವಿದೇಶಿ ವೈದ್ಯಕೀಯ ಸಂಸ್ಥೆಗಳು ನಮ್ಮೊಂದಿಗೆ ಒಡಂಬಡಿಕೆಗೆ ಮುಂದಾಗುತ್ತಿವೆ ಎಂದು ಹೇಳಿದರು.

ಅಷ್ಟೇ ಅಲ್ಲ, ಐ ಆರ್ ಎ ಐ ಕಾರ್ಯಾಗಾರ ಮತ್ತು ತರಬೇತಿ ಶಿಬಿರಗಳನ್ನು ಆಯೋಜಿಸುವ ಮೂಲಕ ರೇಡಿಯಾಲಾಜಿ ಸ್ನಾತಕೋತ್ತರ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ಹೆಚ್ಚು ಒತ್ತು ನೀಡುತ್ತಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಭಾರತದ 800 ರೆಡಿಯಾಜಿಸ್ಟ್ ತಜ್ಞರು ರಚಿಸಿರುವ ಆರೋಗ್ಯ ಸಂಬಂಧಿ ಲೇಖನಗಳನ್ನು 6 ಸಂಪುಟಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಿದೆ ಅಲ್ಲದೇ, ಮಹಿಳೆಯರ ಸಬಲೀಕರಣಕ್ಕಾಗಿ ದೇಶದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ವಿಭಾಗ ಪ್ರಾರಂಭಿಸಿ ಮಹಿಳೆಯರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.

ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿ, ಡಾ. ಎಂ. ಬಿ. ಪಾಟೀಲ ಮಾರ್ಗದರ್ಶನದಲ್ಲಿ ವಿವಿ ಅತ್ಯುತ್ತಮ ಕೆಲಸ ಮಾಡುತ್ತಿದೆ. ವೈದ್ಯಕೀಯ ಕ್ಷೇತ್ರಕ್ಕೆ ಅಗತ್ವವಾಗಿರುವ ಎಲ್ಲ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ವೈದ್ಯ ವಿದ್ಯಾರ್ಥಿಗಳಿಗೆ ಜಗತ್ತಿನ ಹೊಸ ಹೊಸ ತಂತ್ರಜ್ಞಾನಗಳ ತರಬೇತಿ ನೀಡಲಾಗುತ್ತಿದೆ. ಮಾನವೀಯ ಕಳಕಳಿ ಹೊಂದಿರುವ ಮೌಲ್ಯಗಳನ್ನು ಹೇಳಿಕೊಡುವ ಮೂಲಕ ಯುವ ವೈದ್ಯರಿಗೆ ರೋಗಿಗಳೊಂದಿಗೆ ಉತ್ತಮ ಸಂವಹನ ನಡೆಸಲು ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮ್ಮೇಳನದ ಅಂಗವಾಗಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಡಾ. ರಂಗನಾಥ ಮತ್ತು ಡಾ. ಎಂ. ಎಂ. ಪಾಟೀಲ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೇ, ಡಾ. ಎಸ್. ಕೆ. ಜೋಶಿ, ಡಾ. ಎಚ್. ಟಿ. ನಾರಾಯಣ, ಡಾ. ಶ್ರೀನಿವಾಸ ಬಾಬು, ಡಾ. ಇಂದುಶೇಖರ, ಡಾ. ಗಣೇಶ, ಡಾ. ಪಿ. ಬಿ. ಶೆಟ್ಟಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಜೊತೆಗೆ ಕೆಎಂಸಿ ವೀಕ್ಷಕ ಡಾ. ಕೃಷ್ಣಪ್ಪ ಅವರಿಗೆ ಸನ್ಮಾನ ಮಾಡಲಾಯಿತು. ಡಾ. ಸಂತೋಷ ಕುಲಗೋಡ ಅವರಿಗೆ ಎಂಟರಪೇರನರ್ ರೇಡಿಯಾಲಾಜಿಸ್ಟ್ ಹಾಗೂ ಡಾ. ಮಲ್ಲಿಕಾರ್ಜುನ ಅವರಿಗೆ ಬಡ್ಡಿಂಗ್ ಎಂಟರಪೇರನರ್ ರೇಡಿಯಾಲಾಜಿಸ್ಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೇ, ಡಾ. ಉಮೇಶ ಕೃಷ್ಣಮೂರ್ತಿ, ಡಾ. ಪ್ರವೀಣ ಹಾಗೂ ಡಾ. ಮಹೇಶ ಬನ್ನೂರ ಅವರಿಗೆ ಪ್ರಶಂಸಾ ಪತ್ರ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಇ ವಿವಿಯ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಐ ಆರ್ ಎ ಐ ರಾಜ್ಯ ಕಾರ್ಯದರ್ಶಿ ಡಾ. ರವಿ ಎನ್. ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಡಾ. ಪ್ರವೀಣ ಜಿ. ಯು, ನೂತನ ಅಧ್ಯಕ್ಷ ಡಾ. ಸಂಪಂಗಿರಾಮಯ್ಯ, ಡಾ. ಬಾಲಕೃಷ್ಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಘಟನಾ ಅಧ್ಯಕ್ಷ ಡಾ. ರಾಜಶೇಖ ಮುಚ್ಚಂಡಿ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಪಾಟೀಲ ವಂದಿಸಿದರು.

 

ಈಗ ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ

*1.ರೇಡಿಯಾಲಜಿ ಸಮ್ಮೇಳನ:* ವಿಜಯಪುರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿವಿಯಲ್ಲಿ ನಡೆದ ರಾಜ್ಯ 38ನೇ ರೇಡಿಯಾಲಜಿ- ಐ ಆರ್ ಐ ಎ ಸಮ್ಮೇಳನವನ್ನು ಸಚಿವ ಎಂ. ಬಿ. ಪಾಟೀಲ ಉದ್ಗಾಟಿಸಿದರು. ಈ ಸಂದರ್ಭದಲ್ಲಿ ಡಾ. ವೈ. ಎನ್. ಜಯರಾಜ, ಡಾ. ಆರ್. ಎಸ್. ಮುಧೋಳ, ಡಾ. ಡಾ. ಪಿ. ಬಾಲಕೃಷ್ಣ ಶೆಟ್ಟಿ ಡಾ. ಉಮೇಶ ಕೃಷ್ಣಮೂರ್ತಿ, ಡಾ. ರಾಜಶೇಖರ ಮುಚ್ಚಂಡಿ, ಡಾ. ಶಿವಾನಂದ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

*2. ರೇಡಿಯಾಲಜಿ ಸಮ್ಮೇಳನ:* ವಿಜಯಪುರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿವಿಯಲ್ಲಿ ನಡೆದ ರಾಜ್ಯ 38ನೇ ರೇಡಿಯಾಲಜಿ- ಐ ಆರ್ ಐ ಎ ಸಮ್ಮೇಳನವನ್ನು ಉದ್ಘಾಟಿಸಿ ಸಚಿವ ಎಂ. ಬಿ. ಪಾಟೀಲ ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ವೈ. ಎನ್. ಜಯರಾಜ, ಡಾ. ಆರ್. ಎಸ್. ಮುಧೋಳ, ಡಾ. ಡಾ. ಪಿ. ಬಾಲಕೃಷ್ಣ ಶೆಟ್ಟಿ ಡಾ. ಉಮೇಶ ಕೃಷ್ಣಮೂರ್ತಿ, ಡಾ. ರಾಜಶೇಖರ ಮುಚ್ಚಂಡಿ, ಡಾ. ಶಿವಾನಂದ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

*3.ರೇಡಿಯಾಲಜಿ ಸಮ್ಮೇಳನ:* ವಿಜಯಪುರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿವಿಯಲ್ಲಿ ನಡೆದ ರಾಜ್ಯ 38ನೇ ರೇಡಿಯಾಲಜಿ- ಐ ಆರ್ ಐ ಎ ಸಮ್ಮೇಳನದಲ್ಲಿ ಡಾ. ಎಸ್. ಕೆ. ಜೋಶಿ, ಡಾ. ಎಚ್. ಟಿ. ನಾರಾಯಣ, ಡಾ. ಶ್ರೀನಿವಾಸ ಬಾಬು, ಡಾ. ಇಂದುಶೇಖರ, ಡಾ. ಗಣೇಶ, ಡಾ. ಪಿ. ಬಿ. ಶೆಟ್ಟಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಚಿವ ಎಂ. ಬಿ. ಪಾಟೀಲ, ಡಾ. ವೈ. ಎನ್. ಜಯರಾಜ, ಡಾ. ಆರ್. ಎಸ್. ಮುಧೋಳ, ಡಾ. ಡಾ. ಪಿ. ಬಾಲಕೃಷ್ಣ ಶೆಟ್ಟಿ ಡಾ. ಉಮೇಶ ಕೃಷ್ಣಮೂರ್ತಿ, ಡಾ. ರಾಜಶೇಖರ ಮುಚ್ಚಂಡಿ, ಡಾ. ಶಿವಾನಂದ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

*4.ರೇಡಿಯಾಲಜಿ ಸಮ್ಮೇಳನ:* ವಿಜಯಪುರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿವಿಯಲ್ಲಿ ನಡೆದ ರಾಜ್ಯ 38ನೇ ರೇಡಿಯಾಲಜಿ- ಐ ಆರ್ ಐ ಎ ಸಮ್ಮೇಳನದಲ್ಲಿ ಡಾ. ರಂಗನಾಥ ಮತ್ತು ಡಾ. ಎಂ. ಎಂ. ಪಾಟೀಲ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಚಿವ ಎಂ. ಬಿ. ಪಾಟೀಲ, ಡಾ. ವೈ. ಎನ್. ಜಯರಾಜ, ಡಾ. ಆರ್. ಎಸ್. ಮುಧೋಳ, ಡಾ. ಡಾ. ಪಿ. ಬಾಲಕೃಷ್ಣ ಶೆಟ್ಟಿ ಡಾ. ಉಮೇಶ ಕೃಷ್ಣಮೂರ್ತಿ, ಡಾ. ರಾಜಶೇಖರ ಮುಚ್ಚಂಡಿ, ಡಾ. ಶಿವಾನಂದ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

";