ಬಾಗಲಕೋಟೆ
ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಬೆಳಗಾವಿ ಮಿಲಿಟರಿ ಕ್ಯಾಂಟೀನನಿಂದ ತಂದಿರುವ 750 ಒಐ ಅಳತೆಯುಳ್ಳ ವಿವಿಧ ಬ್ರ್ಯಾಂಡಿನ ಒಟ್ಟು 29.25 ಲೀಟರಿನ ಒಟ್ಟು 39 ಮಧ್ಯಮ ಬಾಟಲಿಗಳನ್ನು ಅಬಕಾರಿ ಇಲಾಖೆಯ ತಂಡ ರವಿವಾರ ದಾಳಿ ಮಾಡಿ ಜಪ್ತಿ ಮಾಡಿದೆ.
ಬೆಳಗಾವಿ ಅಪರ ಅಬಕಾರಿ ಆಯುಕ್ತ ಡಾ.ವೈ.ಮಂಜುನಾಥ, ಅಬಕಾರಿ ಜಂಟಿ ಆಯುಕ್ತ ಫಿರೋಜಖಾನ್ ಖಿಲ್ಲೇದಾರ, ಬಾಗಲಕೋಟೆ ಅಬಕಾರಿ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ, ಅಬಕಾರಿ ಉಪ ಅಧೀಕ್ಷಕ ಭಜಂತ್ರಿ ಮಾರ್ಗದರ್ಶನದಲ್ಲಿ ಅಬಕಾರಿ ಇಲಾಖೆಯ ತಂಡ ಖಚಿತ ಮಾಹಿತಿ ಮೇರೆಗೆ ನವನಗರದ ಬಸ್ ನಿಲ್ದಾಣದಲ್ಲಿ ದಾಳಿ ನಡೆಸಿ ಆರೋಪಿ ಬೆಳಗಾವಿ ಮಾರುತಿ ನಗರದ ನಿವಾಸಿ ಶಿವಪ್ಪ ಮಾದರ ವಿರುದ್ದ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ಶಿವಾನಂದ ಹೂಗಾರ, ಅಜಯ ಉಮದಿ ಹಾಗೂ ಅಬಕಾರಿ ಉಪ-ನಿರೀಕ್ಷಕರು ಮತ್ತು ಸಿಬ್ಬಂದಿಗಳು ಹಾಜರಿದ್ದರು.