4 ಜನ ಗುಣಮುಖ, 4 ಹೊಸ ಪ್ರಕರಣಗಳು ದೃಡ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯಲ್ಲಿ ಕೋವಿಡ್ನಿಂದ 4 ಜನ ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಹೊಸದಾಗಿ 4 ಕೊರೊನಾ ಪ್ರಕರಣಗಳು ಗುರುವಾರ ದೃಡಪಟ್ಟಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 35046 ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 34686 ಜನ ಕೋವಿಡ್ನಿಂದ ಗುಣಮುಖರಾಗಿದ್ದಾರೆ. 2052 ಸ್ಯಾಂಪಲ್ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 718354 ಸ್ಯಾಂಪಲ್ ಪರೀಕ್ಷಿಸಲಾಗಿದ್ದು. ಅದರಲ್ಲಿ 680655 ನೆಗಟಿವ್ ಪ್ರಕರಣ, ಹಾಗೂ 323 ಮೃತ ಪ್ರಕರಣಗಳು ವರದಿಯಾಗಿರುತ್ತದೆ.
ಇನ್ನು 37 ಮಾತ್ರ ಸಕ್ರಿಯ ಪ್ರಕರಣಗಳು ಇದ್ದು, ಇಲ್ಲಿವರೆಗೆ ಒಟ್ಟು 498 ಸ್ಯಾಂಪಲ್ಗಳು ಮಾತ್ರ ರಿಜೆಕ್ಟ ಆಗಿರುತ್ತವೆ.
ಹೊಸದಾಗಿ ಬಾಗಲಕೋಟೆ ತಾಲೂಕಿನಲ್ಲಿ 544 ಸ್ಯಾಪಲ್ ಪರೀಕ್ಷೆಯಿಂದ 1, ಬಾದಾಮಿ 269 ಪರೀಕ್ಷೆಯಿಂದ 0, ಬೀಳಗಿ 169 ಸ್ಯಾಂಪಲ್ ಪರೀಕ್ಷೆಯಿಂದ 0, ಜಮಖಂಡಿ 475 ಪರೀಕ್ಷೆಯಿಂದ 3, ಮುಧೋಳದಲ್ಲಿ 240 ಜನರ ಪರೀಕ್ಷೆಯಿಂದ 0 ಹಾಗೂ ಹುನಗುಂದಲ್ಲಿ 257 ಸ್ಯಾಂಪಲ್ ಪರೀಕ್ಷೆಯಿಂದ 0 ಜನರಲ್ಲಿ ಸೋಂಕು ದೃಡಪಟ್ಟಿವೆ. ಪಾಜಿಟಿವಿಟಿ ಪ್ರಮಾಣ ಶೇ 0.26 ಇರುತ್ತದೆ.
ಹೊಸದಾಗಿ ದೃಡಪಟ್ಟ 4 ಕೋವಿಡ್ ಪ್ರಕರಣಗಳಲ್ಲಿ 2 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಉಳದಿ ಇಬ್ಬರು ಹೋಮ್ ಐಸೋಲೇಷನದಲ್ಲಿ ಇದ್ದಾರೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಜಮಖಂಡಿ ತಾಲೂಕಿನಲ್ಲಿ ಶೇ. 0.63 ರಷ್ಟು ಕಂಡುಬಂದರೆ ಅತೀ ಕಡಿಮೆ ಶೇ.0 ರಷ್ಟು ಬೀಳಗಿ, ಬಾದಾಮಿ, ಮುಧೋಳ ತಾಲೂಕಿನಲ್ಲಿ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.