ಬಾಗಲಕೋಟೆ
ಪ್ರಸಕ್ತ 2024 ಮಾರ್ಚನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಇಬ್ಬರು, ವಿಜ್ಞಾನ ವಿಭಾಗದಲ್ಲಿ ಇಬ್ಬರು ಸೇರಿ ಒಟ್ಟು 4 ಜನ ವಿದ್ಯಾರ್ಥಿಗಳು 600 ಅಂಕಗಳಿಗೆ 591 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎನ್.ಪಟ್ಟಣಶೆಟ್ಟಿ ತಿಳಿಸಿದ್ದಾರೆ.
ವಾಣಿಜ್ಯ ವಿಭಾಗ
ಇಳಕಲ್ಲನ ಶ್ರೀ ಗುರು ಚೈತನ್ಯ ಪಿಯು ಕಾಲೇಜಿನ ವಿದ್ಯಾರ್ಥಿ ಅನುಶ್ರೀ ಪಟ್ಟಣಶೆಟ್ಟಿ, ಮುಧೋಳನ ಸಾಯಿನಿಕೇತನ ಪಿಯು ಕಾಲೇಜಿನ ಧಾನ್ವಿ ಓಸ್ವಾಲ್, ವಿಜ್ಞಾನ ವಿಭಾಗದಲ್ಲಿ ಬಾಡಗಂಡಿ ಬಾಪೂಜಿ ಪಿಯು ಕಾಲೇಜಿನ ಶ್ವೇತಾ ಹೆಬ್ಬಾಳ, ಯಲ್ಲಟ್ಟಿ ಕೊಣ್ಣೂರ ಪಿಯು ಕಾಲೇಜಿನ ದರ್ಶನ ತೇರದಾಳ 600 ಅಂಕಗಳಿಗೆ 591 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಕಲಾ ವಿಭಾಗ
ಕಲಾ ವಿಭಾಗದಲ್ಲಿ ವಿದ್ಯಾಗಿರಿ ಬಿವಿವ ಸಂಘದ ಪದವಿ ಪೂರ್ವ ಕಾಲೇಜಿನ ಅನಿಶಾಬಾನು ನದಾಪ್ 600ಕ್ಕೆ 590 ಅಂಕ ಪಡೆದು (ಪ್ರಥಮ), ಬಾಗಲಕೋಟೆ ಬಸವೇಶ್ವರ ಪಿಯು ಕಾಲೇಜಿನ ಮೋನಿಕಾ ಪೂಜಾರಿ 600ಕ್ಕೆ 589 ಅಂಕ ಪಡೆದು (ದ್ವಿತೀಯ), ಜಮಖಂಡಿಯ ಬಿಎಚ್‍ಎಸ್ ಕಲಾ ಟಿಜಿಪಿ ಎಸ್‍ಸಿ ಪಿಯು ಕಾಲೇಜಿನ ಉಷಾ ಕರಕುಣ್ಣನವರ 600ಕ್ಕೆ 587 ಅಂಕ ಪಡೆದು (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗ
ಇಳಕಲ್ಲನ ಶ್ರೀ ಗುರು ಚೈತನ್ಯ ಪಿಯು ಕಾಲೇಜಿನ ವಿದ್ಯಾರ್ಥಿ ಅನುಶ್ರೀ ಪಟ್ಟಣಶೆಟ್ಟಿ, ಮುಧೋಳನ ಸಾಯಿನಿಕೇತನ ಪಿಯು ಕಾಲೇಜಿನ ಧಾನ್ವಿ ಓಸ್ವಾಲ್ 600ಕ್ಕೆ 591 ಅಂಕ ಪಡೆದು (ಪ್ರಥಮ), ಸಿದ್ದಾಪೂರ ಪುಷ್ಪಾತಾಯಿ ಪಿಯು ಕಾಲೇಜಿನ ಸುಪ್ರಿತಾ ಗಿರಗಾನ್ವಿ 600ಕ್ಕೆ 590 ಅಂಕ ಪಡೆದು (ದ್ವಿತೀಯ), ಶ್ರೀ ಗುರು ಚೈತನ್ಯ ಪಿಯು ಕಾಲೇಜಿನ ಸಂಪದಾ ಮುಳಗುಂದ, ತೇರದಾಳ ಎಸ್‍ಜೆ ವಿದ್ಯಾಮಂಡಳ ಪಿಯು ಕಾಲೇಜಿನ ಅಕ್ಷತಾ ಸಾರಾಪೂರ 600ಕ್ಕೆ 589 ಅಂಕ ಪಡೆದು (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗ
ಬಾಡಗಂಡಿ ಬಾಪೂಜಿ ಪಿಯು ಕಾಲೇಜಿನ ಶ್ವೇತಾ ಹೆಬ್ಬಾಳ, ಯಲ್ಲಟ್ಟಿ ಕೊಣ್ಣೂರ ಪಿಯು ಕಾಲೇಜಿನ ದರ್ಶನ ತೇರದಾಳ 600ಕ್ಕೆ 591 ಅಂಕ (ಪ್ರಥಮ), ಜಮಖಂಡಿ ತುಂಗಳ ಎಸ್‍ಸಿ ಸಂಯುಕ್ತ ಪಿಯು ಕಾಲೇಜಿನ ನಂದನ ಮಲ್ಲಾಪೂರ, ಸಿಗಿಕೇರಿ ಬೈಪಾಸ್ ರೋಡ ವಾಗ್ದೇವಿ ಸ್ವಯಂತ್ರ ಪಿಯು ಕಾಲೇಜಿನ ವಿಶಾಲಾಕ್ಷಿ ಹಿರೇಮಠ, ಅನಗವಾಡಿ ಬಿಎನ್ ಖೋತ ಎಸ್‍ಸಿ ಪಿಯು ಕಾಲೇಜಿನ ವರ್ಷಾ ಹಿರೇಮಠ, ವಿದ್ಯಾಗಿರಿ ಬಿವಿವಿಎಸ್ ಸ್ವತಂತ್ರ ಪಿಯು ಕಾಲೇಜಿನ ಪ್ರವೀಣ ಕೋಲಕಾರ 600ಕ್ಕೆ 590 ಅಂಕ ಪಡೆದು (ದ್ವಿತೀಯ) ಹಾಗೂ ವಿದ್ಯಾಗಿರಿ ತುಂಗಳ ವಿಜ್ಞಾನ ಪಿಯು ಕಾಲೇಜಿನ ಚೈತನ್ಯಾ ಮುಚ್ಚಂಡಿ 600ಕ್ಕೆ 589 ಅಂಕ ಪಡೆದು (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.