This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಹೈಕೋರ್ಟ್: ವಿಧಾನ ಪರಿಷತ್ ಚುನಾವಣೆ, ರಾಜ್ಯದಲ್ಲಿ ಚುನಾವಣೆಯ 48 ಗಂಟೆ ಮುನ್ನ ಮದ್ಯ ಮಾರಾಟಕ್ಕೆ ಬ್ರೇಕ್

ಹೈಕೋರ್ಟ್: ವಿಧಾನ ಪರಿಷತ್ ಚುನಾವಣೆ, ರಾಜ್ಯದಲ್ಲಿ ಚುನಾವಣೆಯ 48 ಗಂಟೆ ಮುನ್ನ ಮದ್ಯ ಮಾರಾಟಕ್ಕೆ ಬ್ರೇಕ್

ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಮದ್ಯ ಮಾರಾಟಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಬ್ರೇಕ್ ಹಾಕಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಮತದಾನ, ಎಣಿಕೆ‌‌ ದಿನದಂದು ಮಾತ್ರ ಮದ್ಯ ಮಾರಾಟ ನಿರ್ಬಂಧ ಹೇರಿ ಹೊರಡಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದ್ದು, 48 ಗಂಟೆ ಮುನ್ನ ಮದ್ಯ ಮಾರಾಟ ನಿರ್ಬಂಧ ಮುಂದುವರಿಯಲಿದೆ ಎಂದು ಆದೇಶಿಸಿದೆ.

ಮತದಾನ ಮುಕ್ತಾಯದ 48 ಗಂಟೆ ಮುನ್ನ ಮದ್ಯ ಮಾರಾಟ ನಿರ್ಬಂಧಿಸಬಹುದು ಎಂದು ಸರ್ಕಾರದ ಹಕ್ಕು ಪ್ರತಿಪಾದಿಸಿ ಎಎಜಿ ಪ್ರತಿಮಾ ಹೊನ್ನಾಪುರ ವಾದ ಮಂಡಿಸಿದರು. ಆಹಾರ ಪೂರೈಕೆ ಹೊರತುಪಡಿಸಿ ಮದ್ಯ ಮಾರಾಟ ಮಾಡುವಂತಿಲ್ಲ. 48 ಗಂಟೆಗಳ ಮುನ್ನ ಮದ್ಯ ಮಾರಾಟ ನಿರ್ಬಂಧ ಪಾಲಿಸಬೇಕು ಎಂದು ವಿಭಾಗೀಯ ಪೀಠ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ 2024ರ ವಿಭಾಸಭಾ ಚುನಾವಣೆ ಫೆಬ್ರವರಿ 16 ರಂದು ನಿಗದಿಯಾಗಿದ್ದು, ಚುನಾವಣೆಗೂ ಒಂದು ದಿನ ಮುನ್ನ ಸೇರಿ ಒಟ್ಟು 48 ಗಂಟೆಗಳ ಕಾಲ ಬೆಂಗಳೂರು ನಗರದಲ್ಲಿ ಮದ್ಯ ಮಾರಾಟಕ್ಕೆ ನಿಷೇಧಿಸಿರುವುದಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಹೋಟೆಲ್​ಗಳ ಸಂಘಟನೆ ಹೈಕೋರ್ಟ್ ಮೆಟ್ಟಿಲೇರಿತ್ತು. 48 ಗಂಟೆಗಳ ಅವಧಿಗೆ ಮದ್ಯ ಮಾರಾಟ ನಿಷೇಧ ಅನಗತ್ಯವೆಂದು ವಾದ ಮಂಡಿಸಲಾಗಿತ್ತು ಎಂದು ಮಾಹಿತಿ ಬೆಳಕಿಗೆ ಬಂದಿದೆ.

Nimma Suddi
";