ತೆಲಂಗಾಣ ಗಡಿಯ ಕೃಷ್ಣಾ ನದಿಯಲ್ಲಿ ಪತ್ತೆಯಾದ ವಿಷ್ಣುವಿನ ದಶಾವತಾರದ ಮೂರ್ತಿಗಳ ಅಸಲಿ ಸತ್ಯ ಬಯಲಾಗಿದೆ. ತೆಲಂಗಾಣದ ಪುರಾತತ್ವ ಇಲಾಖೆಯ ಸಂಶೋಧನೆ ವೇಳೆ ಆ ಮೂರ್ತಿಗಳು ನೂರಾರು ವರ್ಷಗಳ ಹಳೆಯ ಇತಿಹಾಸವನ್ನ ಬಿಚ್ಚಿಟ್ಟಿದ್ದು, ರಾಜ್ಯದ ಪುರಾತ್ವ ಕೂಡ ಇತಿಹಾಸ ಕೆದಕುತ್ತಿವೆ ಎಂದು ಮಾಹಿತಿ ತಿಳಿದು ಬಂದಿದೆ.
ಫೇಬ್ರವರಿ 5 ನೇ ತಾರಿಕು ರಾಯಚೂರು ಹಾಗೂ ತೆಲಂಗಾಣ ಗಡಿಯಲ್ಲಿರೊ ಕೃಷ್ಣಾ ನದಿಯಲ್ಲಿ ವಿಷ್ಣುವಿನ ದಶಾವತರಾದ ವಿಗ್ರಹಗಳು ಹಾಗೂ ಶಿವಲಿಂಗ ಪತ್ತೆಯಾಗಿದ್ದು,ತಾಲ್ಲೂಕಿನ ದೇವಸುಗುರು ಗ್ರಾಮ ಹಾಗೂ ತೆಲಂಗಾಣದ ಗಡಿ ಭಾಗದ ಜನ ವಿಗ್ರಹ ಪತ್ತೆ ಬೆನ್ನಲ್ಲೇ ಅಖಾಡಕ್ಕೆ ಇಳಿದಿದ್ರು. ವಿಗ್ರಹ ನಮಗೆ ಸೇರಿದ್ದು ಅಂತ ಎರಡು ರಾಜ್ಯಗಳ ಗಡಿ ಭಾಗದ ಜನ ವಾದ ಮಾಡಿದ್ರು.ಈ ಭಾಗದಲ್ಲಿ ಒಂದೊಂದು ರೀತಿಯ ಐತಿಹಾಸಿಕ ಹಿನ್ನೆಲೆ ಹಾಗೂ ವೈಶಿಷ್ಟ್ಯವಿರೊ ಬಗ್ಗೆ ಇತಿಹಾಸ ತಜ್ಞರು ಹೇಳಿದ್ರು.
11 ನೇ ಶತಮಾನದ ಕಲ್ಯಾಣ ಚಾಲುಕ್ಯರಿಗೆ ಸೇರಿದ ವಿಗ್ರಹಗಳಿವು ಅಂತ ಹೇಳಲಾಗಿತ್ತು. ಅಷ್ಟೇ ಅಲ್ಲ ವಿಗ್ರಹ ಸಿಕ್ಕ ಸ್ಥಳ ಹಾಗೂ ರಾಯಚೂರಿನಲ್ಲಿ ಸುಮಾರು 163 ಯುದ್ಧಗಳು ನಡೆದಿದ್ದು, ಪತ್ತೆಯಾದ ವಿಗ್ರಹಗಳಿಂದ ಮಣ್ಣಲ್ಲಿ ಮಣ್ಣಾಗಿ ಹೋಗಿರೊ ಅದೆಷ್ಟೋ ಐತಿಹಾಸ ಸತ್ಯ ಹೊರಬರಹುದು ಅಂತ ಜನ ನಿರೀಕ್ಷಿಸಿದ್ರು. ಅದರಂತೆ ಈಗ ಪುರಾತತ್ವ ಇಲಾಖೆ ಸಂಶೋಧನೆ ವೇಳೆ ವಿಗ್ರಹಗಳ ಇತಿಹಾಸ ರಿವೀಲ್ ಆಗಿದೆ.ಕೃಷ್ಣಾ ನದಿಯಲ್ಲಿ ಸಿಕ್ಕ ವಿಗ್ರಹಗಳ ಪೈಕಿ ಎರಡನ್ನ ತೆಲಂಗಾಣ ಪುರಾತತ್ವ ಇಲಾಖೆ ವಶಕ್ಕೆ ಪಡೆದಿತ್ತು.
ರಾಜ್ಯದ ಪುರಾತತ್ವ ಇಲಾಖೆ ಒಂದು ವಿಗ್ರಹ ಪಡೆದಿತ್ತು. ಆ ಪೈಕಿ ಬಾರ್ಡರ್ನಲ್ಲಿ ತೆಲಂಗಾಣದ ವ್ಯಾಪ್ತಿಗೆ ವಿಗ್ರಹ ಸಿಕ್ಕಿರೊ ಹಿನ್ನೆಲೆ ಅವುಗಳ ಬಗ್ಗೆ ಗಮನಹರಿಸುವಂತೆ ರಾಯಚೂರು ಜಿಲ್ಲಾಡಳಿತ ತೆಲಂಗಾಣ ಪುರಾತತ್ವ ಇಲಾಖೆಗೆ ಸೂಚಿಸಿದ್ದು, ಆ ಪೈಕಿ ತೆಲಂಗಾಣ ಪುರಾತ್ವ ಇಲಾಖೆ ನಡೆಸಿದ ಪ್ರಾಥಮಿಕ ಸಂಶೋಧನೆ ವೇಳೆ ವಿಷ್ಣುವಿನ ದಶಾವತಾರದ ವಿಗ್ರಹ ಹಾಗೂ ಮತ್ತೊಂದು ವಿಗ್ರಹದ ಇತಿಹಾಸದ ಕೆಲ ಮಾಹಿತಿ ಸಿಕ್ಕಿದ್ದು, ಈ ಮೂರ್ತಿಗಳು ಸುಮಾರು 400-500 ವರ್ಷಗಳ ಹಳೆಯ ಮೂರ್ತಿಗಳು ಇರಬಹುದು ಅಂತ ಸ್ಪಷ್ಟಪಡಿಸಿದ್ದು ಬೆಳಕಿಗೆ ಬಂದಿದೆ.