ಬಾಗಲಕೋಟೆ
ಬಿಜೆಪಿಯಲ್ಲಿ ಐದನೇ ಬಾರಿ ಗೆಲುವಿಗಾಗಿ ರ್ಸ್ಪಸಿರುವ ಹಾಗೂ ಮೊದಲ ಬಾರಿ ಗೆಲುವಿಗಾಗಿ ರ್ಸ್ಪಸಿರುವ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಮಧ್ಯೆ ಇದ್ದ ನೇರ ಹಣಾಹಣಿಗೆ ಮಂಗಳವಾರ ಮತದಾನ ನಡೆಯಿತು.
ಜಿಲ್ಲೆಯ ಅಮೀನಗಡ ಪಟ್ಟಣದಲ್ಲಿ ಒಟ್ಟು ೧೪ ಮತಗಟೆಗಳಲ್ಲಿ ೬,೦೨೭ ಪುರುಷ ಮತದಾರರು ಹಾಗೂ ೬,೩೭೩ ಮಹಿಳಾ ಮತದಾರರು ಸೇರಿ ಒಟ್ಟು ೧೨೪೦೦ ಮತದಾರರು ಮತದಾನದ ಅರ್ಹತೆ ಪಡೆದಿದ್ದರು. ಸಂಜೆ ೬ ಗಂಟೆವರೆಗೆ ನಡೆದ ಮತದಾನದಲ್ಲಿ ೪,೪೦೧ ಪುರುಷ ಹಾಗೂ ೪,೨೧೪ ಮಹಿಳಾ ಮತದಾರರು ಸೇರಿ ಒಟ್ಟು ೮,೬೧೫ ಮತದಾರರು ಮತ ಚಲಾಯಿಸಿದರು. ಒಟ್ಟು ಮತದಾನ ಶೇ.೬೮.೫೭ ರಷ್ಟಾಯಿತು.
ಬಹುತೇಕ ಮತದಾರರು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಗ್ರಾಮೀಣ ಪ್ರದೇಶದ ಜನತೆ ಹೊಲಮನೆ ಕೆಲಸ ಸೇರಿದಂತೆ ಇನ್ನಿತರ ಕೂಲಿ ಕೆಲಸಕ್ಕೆ ತೆರಳುವ ಮತದಾರರು ಬೆಳಗ್ಗೆಯೇ ಮತಗಟ್ಟೆಗಳತ್ತ ತೆರಳಿ ತಮ್ಮ ಹಕ್ಕು ಚಲಾಯಿಸಿದರು. ಕೆಲ ಮತಗಟ್ಟೆಗಳಲ್ಲಿ ಸರತಿ ಕಂಡು ಬಂದರೆ ಮತ್ತೆ ಕೆಲ ಕಡೆ ಮತದಾರರಿಗಾಗಿ ಸಿಬ್ಬಂದಿ ಕಾಯುವಂತಾಯಿತು. ಮಧ್ಯಾಹ್ನ ಬಿಸಿಲಿಗೆ ಬೆಂಡಾದ ಮತದಾರರು ಮತಗಟ್ಟೆಯತ್ತ ಸುಳಿಯಲಿಲ್ಲ. ಮಧ್ಯಾಹ್ನ ಒಂದು ಗಂಟೆ ಕಾಲ ಮತಗಟ್ಟೆಗಳು ಬಿಕೋ ಎನ್ನುವಂತಿದ್ದು ಸಂಜೆ ೪ ಗಂಟೆ ನಂತರ ಸಂಖ್ಯೆ ಹೆಚ್ಚಾಗಿತ್ತು.
ಮತಗಟ್ಟೆ ಕೇಂದ್ರಗಳ ಬಳಿ ಅಲ್ಲಲ್ಲಿ ಪಕ್ಷದ ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ವಿನಂತಿಸುತ್ತಿದ್ದರು. ಕೆಲವೆಡೆ ಮತದಾನದ ನಿಷೇತ ಪ್ರದೇಶದಲ್ಲಿ ಪಕ್ಷದ ಕಾರ್ಯಕರ್ತರು ಪ್ರಚಾರ, ಮತಗಟ್ಟೆವರೆಗೂ ತೆರಳಿ ತಮ್ಮ ಪಕ್ಷಕ್ಕೆ ಮತ ಚಲಾಯಿಸುವಂತೆ ವಿನಂತಿಸುತ್ತಿರುವುದು ಕಂಡು ಬಂದು ವಾಗ್ವಾದವೂ ನಡೆಯಿತು.