ಬಾಗಲಕೋಟೆ
ನಗರದ ಎಂಆರ್‌ಎನ್ ಆಯುರ್ವೇದಿಕೆ ಮೆಡಿಕಲ್ ಆಸ್ಪತ್ರೆ ವತಿಯಿಂದ 78ನೇ ಸ್ವಾತಂತ್ರೋತ್ಸವ ನಿಮಿತ್ತ ಆ.14 ರಂದು ಉಚಿತ ಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ ಎಂದು ಕಾಲೇಜ್‌ನ ಆಡಳಿತಾಕಾರಿ ಡಾ.ಶಿವಕುಮಾರ ಗಂಗಾಲ್ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಡಾ.ಎಂ.ಎA.ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಹಾಗೂ ಎಂಆರ್‌ಎನ್ ಆಯುರ್ವೇದಿಕೆ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸಹಯೋಗದಲ್ಲಿ ಅಂದು ಬೆಳಗ್ಗೆ 8 ಗಂಟೆಯಿAದ ಸಂಜೆ 5 ಗಂಟೆವರೆಗೆ ಕಾಲೇಜ ಆವರಣದಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದರು.
ಶಿಬಿರದಲ್ಲಿ ಉಚಿತವಾಗಿ ಕಣ್ಣಿನ ತಪಾಸಣೆ, ಶಸ್ತçಚಿಕಿತ್ಸೆ ಶಿಬಿರ, ಮೂಲವ್ಯಾದಿ ತಪಾಸಣೆ ಹಾಗೂ ಶಸ್ತçಚಿಕಿತ್ಸೆ ಶಿಬಿರ ನಡೆಯಲಿದೆ. ಇದರೊಂದಿಗೆ ಬಂಜೆತನ ಹಾಗೂ ಸ್ತ್ರೀ ಸಂಬಂತ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಮತ್ತು ನಗರದ ಧನ್ವಂತರಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಸತತ ನಾಲ್ಕನೇ ವಷವೂ ರಕ್ತದಾನ ಶಿಬಿರ ನಡೆಯಲಿದೆ ಎಂದು ಹೇಳಿದರು.
ಪ್ರಾಚಾರ್ಯ ಡಾ.ಪ್ರಹ್ಲಾದ್ ಗಂಗಾವತಿ, ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ವೈದ್ಯರು, ಕಾಲೇಜ್‌ನ ತಜ್ಞ ವೈದ್ಯರು ಭಾಗವಹಿಸಿದ್ದಾರೆ. ಶಿಬಿರದಲ್ಲಿ ಕಣ್ಣಿನ ಶಸ್ತçಚಿಕಿತ್ಸೆಗೆ ಆಯ್ಕೆ ಆದ ಬಿಪಿಎಲ್ ಕಾರ್ಡ್ದಾರರಿಗೆ ಉಚಿತವಾಗಿ ಶಸ್ತçಚಿಕಿತ್ಸೆ ನಡೆಸಲಾಗುವುದು ಎಂದರು.
ಹಿರಿಯ ಪ್ರಾಧ್ಯಾಪಕರಾದ ಡಾ.ಈಶ್ವರ ಪಾಟೀಲ, ಡಾ.ದೀಪಾ ಗಂಗಾಲ ಇದ್ದರು.