ವಿಜಯಪುರ
2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ 7-8ರಿಂದ ఎంಟು ಜನ ಸಂಸದರು ಚುನಾವಣಾ ಕಣದಿಂದ ಹಿಂದೆ ಸರಿಯಲಿದ್ದಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಯಂ’ ಪ್ರೇರಣೆಯಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಹಿಂದೆ ಹೇಳಿದ್ದೆ. ಈಗ ಅದು ಸರಿಯಾಗುತ್ತಿದೆ ಎಂದರು.
ಸದಾನಂದ ಗೌಡ, ದಾವಣಗೆರೆ ಸಿದ್ದೇಶ್ವರ, ಹಾವೇರಿಯ ಉದಾಸಿ ಸೇರಿದಂತೆ ಕೆಲವರು ಸ್ವಯಂ ಪ್ರೇರಣೆಯಿಂದ ಹಿಂದೆ ಸರಿಯಲಿದ್ದಾರೆ ಎಂದ ಅವರು, ಹೊಸಬರಿಗೆ ಅವಕಾಶ ಮಾಡುವ ನಿಟ್ಟಿನಲ್ಲಿ ಹಿಂದೆ ಸರಿಯುತ್ತಿದ್ದಾರೆ ಎಂದರು.
ವಿಜಯಪುರ ಲೋಕಸಭೆಗೆ ಹಾಲಿ ಸಂಸದರು ನನಗೆ ಟಿಕೆಟ್ ಸಿಗುತ್ತದೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗೆ ಹೇಳಿಕೆ ನೀಡಬೇಕಾಗುತ್ತದೆ. ನನಗೆ ಈ ಹಿಂದೆ ಟಿಕೆಟ್ ಸಿಗಲ್ಲ ಎಂದು ಸುದ್ದಿ ಹರಡಿಸಲಾಗಿದ್ದನ್ನು ಸ್ಮರಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯತ್ನಾಳಗೆ ಟಿಕೆಟ್ ಇಲ್ಲ ಎಂದು ಹೇಳಿದರು. ಆದರೆ ನನಗೆ ಟಿಕೆಟ್ ಸಿಗುತ್ತದೆ ಎಂದು ನಾನು ಹೇಳುತ್ತಿದ್ದೆ. ಹಾಗೆ ಹಾಲಿ ಸಂಸದರು ಕೂಡ ನನಗೆ ಟಿಕೆಟ್ ಸಿಗುತ್ತದೆ ಎಂದು ಅದು ಹೇಳುತ್ತಿದ್ದಾರೆ. ಅದರಲ್ಲಿ ತಪ್ಪೇನಿಲ್ಲ ಎಂದರು.
ಹಾಲಿ ಸಂಸದರು ಶಕ್ತಿವಂತರು ಹಾಗೂ ಹಿರಿಯರಿದ್ದಾರೆ. ಬಿಜೆಪಿಯ ನಿಯಮಗಳ ಪ್ರಕಾರ 75ರ ಅಂಡರ್ ವಯಸ್ಸಿನಲ್ಲಿದ್ದಾರೆ. ನಮ್ಮಲ್ಲಿ ಯಾರಿಗೆ ಟಿಕೆಟ್ ಅವಕಾಶ ನೀಡಿದರೂ ನಮ್ಮ ವಿಜಯಪುರ ಲೋಕಸಭಾ’ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳಲಾಗುವುದು ಎಂದು ಯತ್ನಾಳ ಹೇಳಿದರು.