This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಡ್ರಗ್ಸ್ ಮುಕ್ತ ಕರ್ನಾಟಕ : ಪ್ರವೀಣ ಸೂದ್

 

 

ಡ್ರಗ್ಸ್ ಮುಕ್ತ ಕರ್ನಾಟಕ : ಪ್ರವೀಣ ಸೂದ್ ವಿಜಯಪುರ: ರಾಜ್ಯದಲ್ಲಿ ಡ್ರಗ್ ಮಾಫಿಯಾ ದಂಧೆಯನ್ನು ಶೀಘ್ರದಲ್ಲೇ ‌ಮಟ್ಟ ಹಾಕುವ‌ ಮೂಲಕ ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಿಸುವುದಾಗಿ ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್ ಹೇಳಿದರು.

ನಗರದಲ್ಲಿ ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರ ಸೇರಿದಂತೆ ಆಯಾ ವಲಯದಲ್ಲಿ ಈಗಾಗಲೇ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ ಎಂದರು.

ಇನ್ನು ಹಲವೆಡೆ ದಾಳಿ ನಡೆಸಿ ಡ್ರಗ್ ಸೀಜ್ ಮಾಡಲಾಗಿದೆ. ಇನ್ನು ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಐಜಿಪಿ ಗಳಿಗೆ ಹಾಗೂ ಆಯಾ ಜಿಲ್ಲಾ ಎಸ್ಪಿಗಳಿಗೆ ಸೂಚಿಸಿದ್ದಾಗಿ ಸೂದ್ ತಿಳಿಸಿದರು.

ಈ ಮಾಫಿಯಾ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಯುತ್ತಲೇ ಇರುತ್ತದೆ ಎಂದರು.

ಮಹಾರಾಷ್ಟ್ರ, ಆಂಧ್ರಕ್ಕೆ ಹೊಂದಿಕೊಂಡಿರುವ ಯಾವುದೇ ಜಿಲ್ಲೆಯಿರಲಿ. ಗಡಿ ಜಿಲ್ಲೆಗಳಲ್ಲಿ ಡ್ರಗ್ ಒಳ ಬಾರದಂತೆ ಹೇಗೆ ತಡೆಯಬೇಕು ಮತ್ತು ಹೇಗೆ ಹತೋಟಿಗೆ ತರಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು‌

ಪೊಲೀಸ್ ಕಾರ್ಯಾಚರಣೆಗಳ ಬಗ್ಗೆ ತಮಗೆ ಶೀಘ್ರದಲ್ಲೇ ಫಲಿತಾಂಶ ಸಿಗಲಿದೆ ಎಂದರು.

ಡ್ರಗ್ಸ್ ಮುಕ್ತ ರಾಜ್ಯಕ್ಕೆ ತೀರ್ಮಾನ ತೆಗೆದುಕೊಂಡಿದ್ದರಿಂದ ರಾಜ್ಯದಿಂದ ಆದಷ್ಟು ಬೇಗ ಡ್ರಗ್ಸ್ ಅನ್ನು ಹೊರಹಾಕುವುದಾಗಿ ಪ್ರವೀಣ ಸೂದ್ ತಿಳಿಸಿದರು.

";