ಗ್ರಾಪಂ ಮಟ್ಟದಲ್ಲಿ ಶಿಕ್ಷಣ ಪಡೆ ರಚನೆ
ಶಾಲೆಗಳಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ಮಾಡಲು ಶಿಕ್ಷಣ ಇಲಾಖೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದೊಂದಿಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮ ಶಿಕ್ಷಣ ಪಡೆ ರಚಿಸಿದೆ.
ಗ್ರಾಪಂ ಅಧ್ಯಕ್ಷ ಅಥವಾ ಆಡಳಿತಾಧಿಕಾರಿ ಶಿಕ್ಷಣ ಪಡೆಯ ಅಧ್ಯಕ್ಷರಾಗಿರುತ್ತಾರೆ. ಎಸ್ಡಿಎಂಸಿ ಸದಸ್ಯರು, ಶಾಲಾ ಮುಖ್ಯಗುರು, ಶಿಕ್ಷಣ ಸಂಯೋಜಕರು, ಅಂಗನವಾಡಿ ಕೇಂದ್ರದ ಮಹಿಳಾ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ, ಗ್ರಂಥಾಲಯ ಮೇಲ್ವಿಚಾರಕ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ನಿವೃತ್ತ ಶಿಕ್ಷಕರಿಬ್ಬರು, ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಸದಸ್ಯರಾಗಿರುತ್ತಾರೆ. ಪಿಡಿಒ ಸದಸ್ಯ ಕಾರ್ಯದರ್ಶಿಯಾಗಿರಲಿದ್ದಾರೆ.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲು ಕಾರ್ಯಪ್ರವೃತ್ತರಾಗಬೇಕಿದೆ. ಗ್ರಾಮ ಶಿಕ್ಷಣ ರಜಿಸ್ಟರ್ ನಿರ್ವಹಿಸಬೇಕು. ವಿದ್ಯಾಗಮ ಯೋಜನೆಗಾಗಿ ಸೂಕ್ತ ಸ್ಥಳ ಕಲ್ಪಿಸಬೇಕು. ಮಾಸ್ಕ್ ವಿತರಿಸಬೇಕು. ಅವಶ್ಯವಿದ್ದಲ್ಲಿ ದೂರದರ್ಶನ ವ್ಯವಸ್ಥೆ ಮಾಡಬೇಕು. ಹೊಸ ಶಿಕ್ಷಣ ನೀತಿಯ ಬಗ್ಗೆಯೂ ಚರ್ಚಿಸಬೇಕು ಎಂಬ ಹತ್ತು ಹಲವು ಸೂಚನೆಗಳನ್ನು ಶಿಕ್ಷಣ ಪಡೆಗೆ ನೀಡಲಾಗಿದೆ.
Nimma Suddi > State News > ಗ್ರಾಮ ಮಟ್ಟದಲ್ಲಿ ಶಿಕ್ಷಣ ಪಡೆ ರಚನೆ
ಗ್ರಾಮ ಮಟ್ಟದಲ್ಲಿ ಶಿಕ್ಷಣ ಪಡೆ ರಚನೆ
Nimma Suddi Desk.13/09/2020
posted on
Leave a reply
Related News
ಹಿಂದೂಗಳೇ ಎಚ್ಚರವಾಗಿರಿ
18/11/2024
ಕನಕದಾಸರ ಜಯಂತಿ
18/11/2024
ರಕ್ಕಸಗಿ ಪಿಕೆಪಿಎಸ್:ಸನ್ಮಾನ
11/11/2024
ಕನ್ನಡ ಸ್ವರಗಳ ಮೂಲಕ ಸ್ವಚ್ಛತೆ ಜಾಗೃತಿ
07/11/2024