This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ನಾಡನುಡಿ ರಕ್ಷಣೆಗೆ ಸರಕಾರ ಬದ್ದ:ಡಿಸಿಎಂ ಕಾರಜೋಳ

ನಾಡನುಡಿ ರಕ್ಷಣೆಗೆ ಸರಕಾರ ಬದ್ದ:ಡಿಸಿಎಂ ಕಾರಜೋಳ
ಬಾಗಲಕೋಟೆ
ಆಧುನಿಕ ತಂತ್ರಜ್ಞಾನದ ನಾಗಾಲೋಟಕ್ಕೆ ತಕ್ಕಂತೆ ಕನ್ನಡ ಭಾಷೆಯ ಸಾಪ್ಟವೇರ್ ಅಭಿವೃದ್ದಿ ಪಡಿಸಿ ಎಲ್ಲ ಕ್ಷೇತ್ರಗಳ ಕುರಿತು ಕನ್ನಡ ಭಾಷೆಯಲ್ಲಿ ಮಾಹಿತಿ ದೊರಕುವಂತೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮ ಸರಕಾರ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ, ಸಂಗೀತದ ಬಗ್ಗೆ ಯುವ ಪೀಳಿಗೆಗೆ ಉತ್ತೇಜನ ನೀಡಲು ಅನೇಕ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಹಿಂದೆ ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದ ಅವಧಿಯಲ್ಲಿ ಅನೇಕ ಗುರುತರವಾದ ಯೋಜನೆಗಳು, ಕಾರ್ಯಕ್ರಮಗಳನ್ನು ರೂಪಿಸಿರುವುದಾಗಿ ತಿಳಿಸಿದರು.
ಈಗಾಗಲೇ ಜಿಲ್ಲೆಗೊಂದು ಸಾಹಿತ್ಯ ಭವನ, ರಂಗಮAದಿರ ನಿರ್ಮಿಸಲಾಗಿದೆ. ಹಂತ ಹಂತವಾಗಿ ತಾಲೂಕಾ ಕೇಂದ್ರಗಳಲ್ಲಿ ಸಾಹಿತ್ಯ ಭವನ ಹಾಗೂ ಗ್ರಾಮ ಪಂಚಾಯತಿ ಕೇಂದ್ರಗಳಲ್ಲಿ ಸಾಂಸ್ಕೃತಿಕ ಭವನಗಳ ನಿರ್ಮಾಣ ಮಾಡುವುದು ನಮ್ಮ ಸರಕಾರದ ಗುರಿಯಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ೧೩೦ ರಂಗಮAದಿರ ನಿರ್ಮಿಸಲಾಗಿದೆ. ಸಂಕಷ್ಟದಲ್ಲಿದ್ದ ಕಲಾವಿದರ ಪರಿಸ್ಥಿತಿ ಮನಗಂಡು ಮಾಸಾಶನವನ್ನು ೧೦೦೦ ರೂ.ಗಳಿಂದ ೧೫೦೦ ರೂ.ಗಳಿಗೆ ಹೆಚ್ಚಿಸಲಾಗಿದೆ. ೧೨೩೦ ಕಲಾವಿದರಿಗೆ ಮಾಶಾಸನ ಮಂಜೂರು ಮಾಡಲಾಗಿದೆ ಎಂದರು.
ಕೊರೊನಾ ವೈರಸ್ ಹರಡುವಿಕೆಯಿಂದ ಜರ್ಝರಿತಗೊಂಡ ರಾಜ್ಯದ ಜನರಿಗೆ ಅತಿವೃಷ್ಟಿಯಿಂದ ಮತ್ತೊಮ್ಮೆ ಅಘಾತವಾಗಿದೆ. ಜಿಲ್ಲೆಯ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಭೀಕರ ಪ್ರವಾಹದಿಂದ ೩೧ ಗ್ರಾಮಗಳು ಪ್ರವಾಹ ಹಾಗೂ ಮಳೆಯಿಂದ ಬಾಧಿತಗೊಂಡಿವೆ. ಬಾಧಿತಗೊಂಡ ಒಟ್ಟು ೨೭೦ ಕುಟುಂಬಗಳಿಗೆ ತಲಾ ೧೦ ಸಾವಿರದಂತೆ ಒಟ್ಟು ೨೭ ಲಕ್ಷ ರೂ. ತುರ್ತು ಪರಿಹಾರ ನೀಡಲಾಗಿದೆ.
ಅಕ್ಟೋಬರ ಮಾಹೆಯಲ್ಲಿ ಸಂಭವಿಸಿದ ಹೆಚ್ಚಿನ ಮಳೆಯಿಂದ ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದ ೨೫೦ ಮನೆ, ಹುನಗುಂದ ಪಟ್ಟಣದ ೭೦ ಮನೆ ಸೇರಿ ಒಟ್ಟು ೩೨೦ ಮನೆಗಳಿಗೆ ಹಳ್ಳದ ನೀರು ನುಗ್ಗಿ ಹಾನಿಯಾಗಿದ್ದು, ತುರ್ತು ಪರಿಹಾರ ತಲಾ ಕುಟುಂಬಕ್ಕೆ ೧೦ ಸಾವಿರದಂತೆ ಒಟ್ಟು ೩೨ ಲಕ್ಷ ರೂ.ಗಳ ಪರಿಹಾರ ವಿತರಿಸಲಾಗಿದೆ. ಹಾನಿಯ ಜಂಟಿ ಸಮೀಕ್ಷೆ ಪ್ರಗತಿಯಲ್ಲಿದ್ದು, ಸಮೀಕ್ಷೆ ಕಾರ್ಯ ಪೂರ್ಣಗೊಂಡ ಮೇಲೆ ಎಲ್ಲ ಫಲಾನುಭವಿಗಳ ಮಾಹಿತಿಯನ್ನು ತಂತ್ರಾAಶದಲ್ಲಿ ಅಳವಡಿಸಲು ಕ್ರಮವಹಿಸಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ಕನ್ನಡಾಂಭೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ಅರ್ಪಿಸಿದರು. ಇದೇ ಸಂದರ್ಭದಲ್ಲಿ ಪೊಲೀಸ್ ವಾರಿರ‍್ಸ್ಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಒ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಮ್.ಗಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ೨೧ ಜನ ಮಹನೀಯರನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ಪಿ.ಸಿ.ಗದ್ದಿಗೌಡ, ಶಾಸಕ ವೀರಣ್ಣ ಚರಂತಿಮಠ ಸನ್ಮಾನಿಸಿದರು. ಚಂದ್ರಶೇಖರ ಹಲಕಾವಟಿ, ಪ್ರೀಯಾಂಕ ಭಜಂತ್ರಿ (ಸಂಗೀತ), ಹನಮಪ್ಪ ಭಜಂತ್ರಿ, ಸಂಗವ್ವ ಪೂಜಾರಿ, ಮಕಬುಲ್ಲಸಾಬ ನದಾಫ, ಮಲ್ಲಪ್ಪ ಹೂಗಾರ (ಜಾನಪದ), ಮಂಜುನಾಥ ಸಂಗನಾಳ (ನಾಟಕ), ಜಗದೀಶ ಭಜಂತ್ರಿ (ಚಿತ್ರಕಲೆ), ಪ್ರಹ್ಲಾದ ಭೋಯಿ, ಮೆಹಬೂಬ ಆಗ್ರಾ (ಸಮಾಜ ಸೇವೆ), ಅರವಿಂದ ಮಂಗಳೂರ (ಸಹಕಾರಿ), ಆನಂದ ಮೊಕಾಶಿ, ಯಲ್ಲಪ್ಪ ಲೋಗಾಂವಿ (ಕೃಷಿ), ಹನಮಪ್ಪ ಎಮ್ಮಟ್ಟಿ (ಸಾಹಿತ್ಯ), ಜಿ.ಎಚ್.ವೆಂಕಟೇಶ (ಮುದ್ರಣ ಮಾಧ್ಯಮ), ಸಿದ್ದು ದುತ್ತರಗಾಂವಿ (ದೃಶ್ಯ ಮಾಧ್ಯಮ), ಗೋವಿಂದನೇಶ ಬಾಡಗಂಡಿ (ವಿಜ್ಞಾನ), ಸುರೇಶ ಬಡಿಗೇರ, ಯಲ್ಲವ್ವ ಲಂಕೇಮ್ಮನವರ, ಶ್ರೀಶೈಲ ಗಣಾಚಾರಿ (ಚೌಡಕಿ ಪದ), ಬಸಪ್ ಪಾಣಿಶೆಟ್ಟಿ (ಸಮಾಜ ಸೇವೆ).

ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಣೆ
ಜೂನ್/ಜುಲೈ-೨೦೨೦ ರಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ ಮೂರು ವಿದ್ಯಾರ್ಥಿಗಳಿಗೆ ಹಾಗೂ ಬಾಗಲಕೋಟೆ ತಾಲೂಕ ಮಟ್ಟದಲ್ಲಿ ಹೆಚ್ಚು ಅಂಕ ಪಡೆದ ಮೂರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಸುನಿತಾ ಕುಂಬಾರ (೬೨೫/೬೧೭), ದ್ವಿತೀಯ ಅಮ್ರತಾ ಸಾರಂಗಿ (೬೨೫/೬೧೬), ತೃತೀಯ ಸಾಧಿಕ್ ಮುದ್ದಾಪೂರ (೬೨೫/೬೧೨), ಬಾಗಲಕೋಟೆ ತಾಲೂಕಾ ಮಟ್ಟದಲ್ಲಿ ಪ್ರಥಮ ಮಹಾಂತೇಶ ಮುಧೋಳ (೬೨೫/೫೯೦), ದಿನೇಶ ಬಡಿಗೇರ (೬೨೫/೫೮೬), ಸುದರ್ಶನ ಕಟ್ಟಿಮನಿ (೬೨೫/೫೮೫) ಅವರಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.ರ‍್ಯಾಂಕ್ ಪಡೆದ ಇಬ್ಬರಿಗೆ ತಲಾ ೧ ಲಕ್ಷ ರೂ. ನಗದು ಬಹುಮಾನ
ಪ್ರಸಕ್ತ ಸಾಲಿನ ಆಯವ್ಯಯ ಘೋಷಣೆಯಂತೆ ಸ್ವಾಂತ್ರ‍್ಯ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗಣ್ಣ ಮತ್ತು ಬಾಲಣ್ಣ ಇವರ ಹೆಸರಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ರ್ಯಾಂಕ್ ಪಡೆದ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ತಲಾ ೧ ಲಕ್ಷ ರೂ.ಗಳ ನಗದು ಪ್ರಶಸ್ತಿಯನ್ನು ಪರಿಶಿಷ್ಟ ಜಾತಿಯ ಬೀಳಗಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಅಮಿತ ಸಾಗರ, ಪರಿಶಿಷ್ಟ ಪಂಗಡದ ಸೂಳೇಭಾವಿಯ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿ ಬಿಂದುಶ್ರೀ ಚಂದ್ರಗಿರಿ ಅವರಿಗೆ ನೀಡಲಾಯಿತು.
ವಿಕಲಚೇತನರಿಗೆ ಸಲಕರಣೆ ವಿತರಣೆ
ವಿಕಲಚೇತನರ ಇಲಾಖೆಯಿಂದ ಬಾಗಲಕೋಟೆ ಮತ್ತು ಮುಧೋಳ ತಾಲೂಕಿನ ವಿಕಲಚೇತನರಿಗೆ ೧ ವಿದ್ಯುತ್ ಚಾಲಿಕ ಗಾಲಿ ಕುರ್ಚಿ, ೧೦ ಶ್ರವಣ ಸಾಧನ, ೨ ವ್ಹೀಲ್ ಚೇರ್, ೫ ಯಂತ್ರಚಾಲಿಕ ದ್ವಿಚಕ್ರವಾಹನ, ೨ ಸ್ಟಿಕ್, ೧ ವಾಕರಗಳನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ ವಿತರಿಸಿದರು.

Nimma Suddi
";