ನಿಮ್ಮ ಸುದ್ದಿ ಬಾಗಲಕೋಟೆ
ಎರಡುವರೆ ದಶಕದ ಸೇವಾ ಅವಧಿಯಲ್ಲಿ ನಿರಂತರವಾಗಿ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಸಂಘ ಸಂಸ್ಥೆಯೊಂದಿಗೆ ಸರ್ವ ಜನಾಂಗದ ಸಮಾಜದೊಂದಿಗೆ ಉತ್ತಮ ಸಂಬAಧ ಹೊಂದಿ ಸಮಯದ ಮಿತಿ ಇಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಆರ್.ಜಿ. ಸನ್ನಿಯವರಿಗೆ ರಾಜ್ಯಮಟ್ಟದ ಉಪಾಧ್ಯಕ್ಷ ಸ್ಥಾನ ದೊರತಿದ್ದು ಸಂದ ಗೌರವ ಎಂದು ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶಂಕರರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದ ಸಂಗಮೇಶ್ವರ ವಿದ್ಯಾವರ್ಧಕ ಸಂಘದಿಂದ ಆರ್.ಜಿ.ಸನ್ನಿಯವರು ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರಯುಕ್ತ ಸನ್ಮಾನ ನೆರವೇರಿಸಿದರು. ಜಿಲ್ಲೆಯ ಹಲವಾರು ಸಂಘದೊಂದಿಗೆ ತಮ್ಮನ್ನು ಗುರುತಿಸಿಕೊಂಡು ಶೈಕ್ಷಣಿಕ ಸಾಮಾಜಿಕ, ಸಾಂಸ್ಕೃತಿಕ ಧಾರ್ಮಿಕ ರಂಗದಲ್ಲಿ ತಮ್ಮನ್ನು ತೊಡಗಿಸಿ ಶಿಕ್ಷಕರಾದವರು ಹೀಗೂ ಕಾರ್ಯ ಮಾಡಬಹುದೆಂದು ಮಾದರಿಯಾದವರು ಎಂದು ನುಡಿದರು.
ಈ ಸಂದರ್ಭದಲ್ಲಿ ಸಂಘದ ಚೇರಮನ್ನರಾದ ಐ.ಎಸ್.ಲಿಂಗದಾಳ ಕಾಲೇಜ್ ಕಮೀಟಿ ಚೇರಮನ್ನರಾದ ಸಿ.ಡಿ.ಇಲಕಲ್ಲ. ಇಂಗ್ಲೀಷ್ ಮೀಡಿಯಂ ಸ್ಕೂಲ್ ಚೇರಮನ್ನರಾದ ಆರ್.ಕೆ. ಗೌಡರ ಪ್ರಾಥಮಿಕ ಶಾಲೆಯ ಚೇರಮನ್ನರಾದ ಎಮ್.ವಿ.ಹಾದಿಮನಿ ನಿರ್ದೇಶಕರಾದ ಎ.ಕೆ. ತಾಳಿಕೋಟಿ, ಎಸ್.ಎಸ್.ವಸ್ತçದ ಪಾಚಾರ್ಯರಾದ ಎಮ್.ಎನ್.ವಂದಾಲ, ಬಿ.ಬಿ.ಹೊಸಮನಿ, ಎಮ್.ಆರ್.ಹಿರೇಮಠ ಉಪಪ್ರಾಚಾರ್ಯರಾದ ವಿ.ಎಮ್.ವಸ್ತçದ, ಮುಖ್ಯಗುರುಗಳಾದ ಎಸ್.ಎಸ್.ಹಿರೇಮಠ ಇತರರು ಉಪಸ್ಥಿತರಿದ್ದರು.