ಸೂಳೇಬಾವಿ ರಾಮಯ್ಯಸ್ವಾಮಿ ಪ್ರೌಢಶಾಲೆ ಗರಿಮೆ
ನಿಮ್ಮ ಸುದ್ದಿ ಬಾಗಲಕೋಟೆ
೨೦೨೦ರ ಎಸ್ಸೆಸ್ಸೆಲ್ಸಿ ವರ್ಗದಲ್ಲಿ ಬೋಧನಾ ಪರಿಶ್ರಮದಲ್ಲಿ ಸಾಧನೆಗೈದ ಹುನಗುಂದ ತಾಲೂಕಿನ ಪ್ರೌಢಶಾಲೆಗಳಲ್ಲಿ ಸೂಳೇಬಾವಿಯ ರಾಮಯ್ಯಸ್ವಾಮಿ ಪ್ರೌಢಶಾಲೆ ಶಿಕ್ಷಕರು ಹೆಚ್ಚಿನ ಸರಾಸರಿ ಅಂಕ ಗಳಿಸಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಎಸ್ಸೆಸ್ಸೆಲ್ಸಿಯ ೬ ವಿಷಯಗಳಲ್ಲಿ ಸೂಳೇಬಾವಿ ರಾಮಯ್ಯಸ್ವಾಮಿ ಪ್ರೌಢಶಾಲೆ ನಾಲ್ವರು ಶಿಕ್ಷಕರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಶಿಕ್ಷಕರಾದ ಟಿ.ಬಿ.ಭಜಂತ್ರಿ (ಪ್ರಥಮ ಭಾಷೆ), ಎಫ್.ಎ.ಖಾಜಿ (ದ್ವಿತೀಯ ಭಾಷೆ), ಎಂ.ಜಿ.ಈಟಿ (ತೃತೀಯ ಭಾಷೆ), ಜಿ.ಕೆ.ದೂಪದ (ಸಮಾಜವಿಜ್ಞಾನ) ವಿಷಯದಲ್ಲಿ ಸರಾಸರಿ ಹೆಚ್ಚು ಅಂಕ ಗಳಿಸಿ ಸಾಧನೆಗೈದಿದ್ದಾರೆ.
ಇಳಕಲ್ ತಾಲೂಕಿನ ಗುಡೂರ ಗ್ರಾಮದ ಮಹಾತ್ಮಾಗಾಂ ಪ್ರೌಢಶಾಲೆಯ ಶಿಕ್ಷಕ ಆರ್.ವಿ.ಮಂತ್ರಿ (ಗಣಿತ), ಇಳಕಲ್‌ನ ಸಿದ್ಧಾರ್ಥ ಪ್ರೌಢಶಾಲೆಯ ರಾಜಶೇಖರ ಹಳ್ಳೂರ (ವಿಜ್ಞಾನ) ವಿಷಯದಲ್ಲಿ ಶಿಕ್ಷಣ ಪರಿಶ್ರಮ ಗೌರವಕ್ಕೆ ಪಾತ್ರರಾದರೆ, ಅಮೀನಗಡದ ಸಂಗಮೇಶ್ವರ ಪಪೂ ಕಾಲೇಜ್‌ನ ವಿದ್ಯಾರ್ಥಿನಿ ಆಯೇಶಾ ಬೇವೂರ ೬೦೪ ಅಂಕದೊಂದಿಗೆ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಧಾರವಾಡದ ಡಾ.ಎಚ್.ಎಫ್.ಕಟ್ಟಿಮನಿ ಪ್ರೌಢಶಿಕ್ಷಣ ಪ್ರತಿಷ್ಠಾನ, ಧಾರವಾಡದ ಆಯುಕ್ತರ ಕಚೇರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಬಾಗಲಕೋಟೆಯಿಂದ ಜ.೪ರಂದು ಬಾಗಲಕೋಟೆಯ ಬವಿವ ಸಂಘದ ಮಿನಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧನೆಗೈದ ಶಿಕ್ಷಕರಿಗೆ ಗೌರವ ಸಮರ್ಪಿಸಲಾಯಿತು.