This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ಎಂಜಿನಿಯರ್ ಹುದ್ದೆ ಬಿಟ್ಟು ಕೃಷಿಯತ್ತ ಕಣ್ಣು

ನಿಮ್ಮ ಸುದ್ದಿ ಬಾಗಲಕೋಟೆ

ಎಂಜಿನಿಯರ್ ವೃತ್ತಿಗೆ ವಿದಾಯ ಹೇಳಿ ಐದು ಎಕರೆ ಜಮೀನಿನಲ್ಲಿ ಮಾವು ಬೆಳೆ ಮೂಲಕ ಉತ್ತಮ ಆದಾಯ ಕಂಡುಕೊAಡವರು ಬಾಗಲಕೋಟೆ ಜಿಲ್ಲೆಯ ಇಳಕಲ್ ನಿವಾಸಿ ಪ್ರಸನ್ನ ಕಟ್ಟಿ.

ಮಾವು ಬೆಳೆಯನ್ನು ಪ್ರಮುಖ ಬೆಳೆಯಾಗಿಟ್ಟುಕೊಂಡು ಹನಿ ನೀರಾವರಿ ಮೂಲಕ ತೋಟಗಾರಿಕೆ ಬೆಳೆಯೊಂದಿಗೆ ಅರಣ್ಯ ಕೃಷಿಯಲ್ಲೂ ನಾನಾ ಬೆಳೆ ಬೆಳೆದು ಆದಾಯದ ಭದ್ರತೆ ಕಂಡುಕಂಡಿದ್ದಾರೆ.

ಕೃಷಿ ಕುಟುಂಬದ ಹಿನ್ನೆಲೆಯಿದ್ದರೂ ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಎಂಜಿನಿಯರ್‌ನಲ್ಲಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಗಳಿಸಿ ರಾಜ್ಯವೂ ಸೇರಿದಂತೆ ಹೊರರಾಜ್ಯದಲ್ಲಿ ೨೧ ವರ್ಷ ಬಹುರಾಷ್ಟ್ರಿಯ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದವರು. ಕೈತುಂಬ ಆದಾಯವಿದ್ದರೂ ಸಂತೃಪ್ತ ಜೀವನ ಸಾಗಿಸಬೇಕು, ನಿಸರ್ಗದೊಂದಿಗೆ ನಾವಿರಬೇಕು ಎಂಬ ಚಿಂತನೆಯೊಂದಿಗೆ ಕುಷ್ಟಗಿ ತಾಲೂಕಿನ ಹನಮಸಾಗರದಲ್ಲಿ ೨೦೧೫ರಲ್ಲಿ ೮.೫ ಎಕರೆ ಜಮೀನು ಖರೀದಿಸಿದರು.

ಬರಡು ಭೂಮಿಯಾಗಿದ್ದ ಅದನ್ನು ಒಂದೂವರೆ ವರ್ಷದಲ್ಲಿ ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಿದರು.

ನೀರಾವರಿ ತಜ್ಞ ದೇವರಾಜ ರಡ್ಡಿ ಅವರ ಮಾರ್ಗದರ್ಶನದಲ್ಲಿ ಸಾಗಿ ಬೋರವೆಲ್‌ಗೆ ನೀರು ಮರು ಪೂರಣ ವ್ಯವಸ್ಥೆ ಮೂಲಕ ೨೦೧೭ರಲ್ಲಿ ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ೮.೫ ಎಕರೆಯಲ್ಲಿ ೫ ಎಕರೆ ಪ್ರದೇಶದಲ್ಲಿ ಗರಿಷ್ಟ ಸಾಂದ್ರತೆಯ ಮಾವು ಬೇಸಾಯ ಕೈಗೊಂಡಿದ್ದಾರೆ.

ರಾಜ್ಯದಲ್ಲೇ ಮೊದಲ ಬಾರಿಗೆ ಎಂಬಂತೆ ಗುಜರಾತ್‌ನ ಜಂಬೋ ಕೇಸರಿ ಮಾವು ತಳಿಯ ೪ ಸಾವಿರ ಸಸಿಗಳನ್ನು ೩ ಅಡಿ ಅಂತರದಲ್ಲಿ ಬೆಳೆದಿದ್ದಾರೆ. ಬೆಳೆ ಬೆಳೆದ ೪ನೇ ವರ್ಷಕ್ಕೆ ಫಸಲಿನ ನಿರೀಕ್ಷೆ ಇದ್ದರೂ ಎರಡನೇ ವರ್ಷಕ್ಕೆ ೪೦೦-೫೦೦ ಕಾಯಿಗಳು ದೊರೆತರೆ ೩ನೇ ವರ್ಷಕ್ಕೆ ಅಂದರೆ ೨೦೨೦ಕ್ಕೆ ೬೦ ಕ್ವಿಂಟಲ್ ಮಾವಿನ ಹಣ್ಣಿನ ಫಸಲು ಕಂಡಿದ್ದಾರೆ.

೨೦೨೦ರಲ್ಲಿ ದೇಶದಲ್ಲೇ ಮಾವು ಉತ್ಪಾದನೆ ಕಡಿಮೆ ಇತ್ತು, ಜತೆಗೆ ಕೊರೊನಾ ಹಾವಳಿ. ಇಂತಹ ಅವಯಲ್ಲೂ ಬೆಳೆದ ಮಾವುಗಳಿಗೆ ಮಾರುಕಟ್ಟೆ ಸೃಷ್ಠಿಸಿದ್ದಾರೆ. ಎಫ್‌ಪಿಒ ಹಾಗೂ ಸರಕಾರಿ ಸಾಧನಗಳನ್ನು ಉಪಯೋಗಿಸಿಕೊಂಡು ಮುಂಬೈನ ಮಾರುಕಟ್ಟೆಯೊಂದಿಗೆ ಸಂಪರ್ಕ ಸಾಸಿ ಕೆಜಿಗೆ ೭೫ ರೂ. ನಂತೆ ೬೦ ಕ್ವಿಂಟಾಲ್ ಮಾವು ಮಾರಾಟ ಮಾಡಿದ್ದಾರೆ.

ಸದ್ಯ ಮತ್ತೆ ಮಾವು ಹೂ ಬಿಟ್ಟಿದ್ದು ಈ ವರ್ಷ ೧೦೦ ಕ್ವಿಂಟಾಲ್, ೬ನೇ ವರ್ಷಕ್ಕೆ ೨೦೦ ಕ್ವಿಂಟಾಲ್ ಬೆಳೆಯ ನಿರೀಕ್ಷೆ ಹೊಂದಿದ್ದು ೧೫ ವರ್ಷದವರೆಗೆ ಆದಾಯ ತರುವ ಬೆಳೆ ಇದಾಗಿದೆ.

ಮಾವು ಬೆಳೆಯೊಂದಿಗೆ ಪರಿಸರ ಸಂರಕ್ಷಣೆಗಾಗಿ ೧೦೦ ಹುಣಸೆ ಗಿಡ, ೩೦೦ ಹೆಬ್ಬೇವು ಗಿಡ ಬೆಳೆದು ಹಸಿರು ಅರಣ್ಯಕ್ಕೆ ಸಾಕ್ಷಿಯಾಗಿದ್ದಾರೆ. ಅರ್ಧ ಎಕರೆ ಪ್ರದೇಶದಲ್ಲಿ ಕೃಷಿ ಹೊಂಡವನ್ನೂ ನಿರ್ಮಿಸಿದ್ದಾರೆ. ಕೃಷಿ ಸಾಧನೆಗೆ ನೂರಾರು ರೈತರು ಜಮೀನಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.

ಮತ್ತಷ್ಟು ಕೃಷಿ ಚಟುವಟಿಕೆಗಾಗಿ ೨೦೧೮ರಲ್ಲಿ ೭.೫ ಎಕರೆ ಜಮೀನು ಖರೀದಿಸಿದ ಪ್ರಸನ್ನ ಅವರು, ಅಲ್ಲೂ ಸಹ ೧,೨೫೦ ನುಗ್ಗೆ, ೨೫೦ ಹುಣಸೆ, ೫೦ ಅಲ್ಪಾನ್ಸೋ ತಳಿಯ ಮಾವು ಬೆಳೆದಿದ್ದಾರೆ. ಮಧ್ಯಪ್ರದೇಶ ಮೂಲಕ ತೊಗರಿ ಬೆಳೆ ಬೆಳೆದಿದ್ದು ರಾಸಾಯನಿಕವಿಲ್ಲದ ಬೆಳೆ ಬೆಳೆದು ಅದನ್ನು ನಾವೇ ಉಪಯೋಗಿಸಬೇಕು. ನಮ್ಮಲ್ಲೆ ದೊರೆಯುವ ಚಿಕ್ಕ ಪುಟ್ಟ ಮಶಿನರಿ ಬಳಸಿಕೊಂಡು ಕಾರ್ಮಿಕರ ಬಳಕೆ ಕಡಿಮೆ ಮಾಡಿ ಹೆಚ್ಚಿನ ಆದಾಯ ಗಳಿಸಬಹುದು ಎಂದು ಮುಂದೆ ಸಾಗುತ್ತಿದ್ದಾರೆ.

“ಕೃಷಿ ಬದುಕಿಗೆ ನೆಮ್ಮದಿ ನೀಡುತ್ತದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸರಿಯಾದ ಮಾರುಕಟ್ಟೆ ವ್ಯವಸ್ಥೆ, ತಜ್ಞರ ಮಾರ್ಗದರ್ಶನದೊಂದಿಗೆ ಮುನ್ನಡೆದರೆ ತಿಂಗಳಿಗೆ ಕನಿಷ್ಟವೆಂದರೂ ೧ ಲಕ್ಷ ರೂ. ಆದಾಯ ಗಳಿಸಬಹುದು.”
-ಪ್ರಸನ್ನ ಕಟ್ಟಿ, ಕೃಷಿಕ

Nimma Suddi
";