ನಿಮ್ಮ ಸುದ್ದಿ ಬಾಗಲಕೋಟೆ
ಜಗತ್ತಿನಲ್ಲೇ ನಮ್ಮ ಸಂವಿಧಾನ ಶ್ರೇಷ್ಠ ಹಾಗೂ ಮಾದರಿ ಸಂವಿಧಾನವಾಗಿದೆ ಎಂದು ಹುನಗುಂದ ತಾಲೂಕಿನ ಅಮೀನಗಡ ನಾಡಕಚೇರಿಯ ಉಪತಹಸೀಲ್ದಾರ್ ಎಸ್.ವಿ.ಕುಂದರಗಿ ತಿಳಿಸಿದರು.
ಅಮೀನಗಡದ ನಾಡಕಚೇರಿ ಆವರಣದಲ್ಲಿ ಗಣರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಭಾರತ ದೇಶದ ಸಂವಿಧಾನವು ಜಾರಿಗೆ ಬಂದು ೭೧ ವರ್ಷಗಳಾದವು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ೧೯೫೦ ಜ.೨೬ರಂದು ನಮ್ಮ ದೇಶದ ಸಂವಿಧಾನ ಅಂಗೀಕರಿಸಲಾಯಿತು. ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ನೇಮಕವಾಗಿದ್ದ ಸಮಿತಿಯ ಶ್ರಮದ ಫಲವಾಗಿ ಈ ಸಂವಿಧಾನ ಮೂಡಿ ಬಂದಿದೆ ಎಂದರು.
ಜಗತ್ತಿನಲ್ಲಿ ನಮ್ಮ ಸಂವಿಧಾನವು ಶ್ರೇಷ್ಠ ಹಾಗೂ ಮಾದರಿಯ ಸಂವಿಧಾನವಾಗಿದೆ. ಪ್ರತಿ ವರ್ಷವೂ ಅತ್ಯಂತ ವೈಭವದಿಂದ ಆಚರಿಸುವ ಈ ರಾಷ್ಟೀಯ ಹಬ್ಬವನ್ನು ರಜಾದಿನ ಎಂದು ತಿಳಿಯದೇ ಎಲ್ಲರೂ ಅತ್ಯಂತ ಸಂತೋಷದಿಂದ ಆಚರಿಸಬೇಕೆಂದು ಕರೆ ನೀಡಿದರು.
ಕಂದಾಯ ನಿರೀಕ್ಷಕ ಜಂಬುನಾಥ ಚಿನಿವಾಲರ, ಗ್ರಾಮಲೆಕ್ಕಿಗರಾದ ಸುರೇಶ ಹುದ್ದಾರ, ಡಿ.ಎಸ್.ಯತ್ನಟ್ಟಿ, ರಾಜು ಹಗ್ಗದ, ಶರಣು ಇಟಗಿ, ಸಾವಿತ್ರಿ ಸಜ್ಜನ, ಗ್ರಾಮ ಸೇವಕರಾದ ಶಂಕ್ರಪ್ಪ ಕತ್ತಿ, ಹನಮಂತ ವಾಲಿಕಾರ, ಆಸಂಗೆಪ್ಪ ವಾಲಿಕಾರ, ನೀಲಪ್ಪ ಪೂಜಾರ, ಕೆಂಚಮ್ಮ ನರಿ, ಸತ್ಯಪ್ಪ ಬಾರಕೇರ, ಸಂಗಣ್ಣ ತೋಪಲಕಟ್ಟಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಇದ್ದರು.