This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

ರಾಜ್ಯ ಮಟ್ಟದ ವುಶು ಚಾಂಪಿಯನ್‌ಶಿಪ್

ನಿಮ್ಮ ಸುದ್ದಿ ಬಾಗಲಕೋಟೆ

ವುಶು ಕ್ರೀಡೆಯೂ ರಕ್ಷಣೆಯೊಂದಿಗೆ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕೆಂದು ಕರ್ನಾಟಕ ರಾಜ್ಯ ವುಶು ಅಸೋಸಿಯೇಶನ್ ಅಧ್ಯಕ್ಷರೂ ಆದ ಶಾಸಕ ಡಾ.ವೀರಣ್ಣ ಚರಂತಿಮಠ ಕರೆ ನೀಡಿದರು.

ಕರ್ನಾಟಕ ವುಶು ಸಂಸ್ಥೆಯು ದಿನಾಂಕ ೦೬ ರಿಂದ ೦೭ ಪೆಬ್ರವರಿ ೨೦೨೧ ರವರೆಗೆ ಗೌರಿಶಂಕರ ಕಲ್ಯಾಣ ಮಂಟಪ, ವಿಧ್ಯಾಗಿರಿ, ಬಾಗಲಕೋಟೆಯಲ್ಲಿ ಕರ್ನಾಟಕ ರಾಜ್ಯ ವುಶು ಚಾಂಪಿಯನ್‌ಶಿಪ್‌ನ್ನು ಆಯೋಜಿಸಿದ್ದು ಅದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತ, ವುಶು ಕ್ರೀಡೆಯನ್ನು ಗ್ರಾಮಾಂತರ ಮಟ್ಟದಲ್ಲಿ ತಾಲೂಕ ಮಟ್ಟದಲ್ಲಿ ಬೆಳೆಸುವ ಕರ‍್ಯ ನಡೆಯಬೇಕು. ಈ ನಿಟ್ಟಿನಲ್ಲಿ ವುಶು ಕ್ರೀಡೆಯನ್ನು ಹೆಚ್ಚು ಜನಪ್ರಿಯಗೊಳಿಸಿ ಹಾಕಿ, ಕ್ರಿಕೇಟ್, ಕಬ್ಬಡ್ಡಿ ಹಾಗೂ ಖೋ-ಖೋ ಆಟದ ತರಹ ಬೆಳೆಸಬೇಕು ಇದಕ್ಕೆ ಎಲ್ಲ ಸಹಾಯ ಸಹಕಾರ ನೀಡುವದಾಗಿ ತಿಳಿಸಿದರು.

ಮಕ್ಕಳು ಚಿಕ್ಕಂದಿನಿಂದಲೇ ಕ್ರಮಬದ್ಧವಾದ ಕ್ರೀಡೆಗಳಲ್ಲಿ ಹೆಚ್ಚುಹೆಚ್ಚಾಗಿ ಭಾಗವಹಿಸಬೇಕು. ಏಕೆಂದರೆ, ಅವರ ಸುತ್ತಲೂ ಅಂತಹ ವಾತಾವರಣ ಇಲ್ಲದೇ ಹೋದರೆ ಅವರುಗಳು ಎಂದೂ ಸದ್ವರ್ತನೆಯ ಗುಣಶೀಲ ನಾಗರಿಕರಾಗಿ ಬೆಳೆಯಲಾರರು ಎಂದ ಶಾಸಕರು ಮುಂದುವರೆದು ಮಾತನಾಡಿ ವುಶು ಕ್ರೀಡೆಯ ಪ್ರಧಾನ ಕಚೇರಿಯನ್ನು ಬಾಗಲಕೋಟೆಯಲ್ಲಿ ಹೊಂದಿದ್ದು ವುಶು ಕ್ರೀಡೆಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ರಾಷ್ಟçಮಟ್ಟದಲ್ಲಿ ಸ್ಪರ್ಧಿಸಿ ಅನೇಕ ಚಿನ್ನ, ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ಕ್ರೀಡೆಯನ್ನು ಬೆಳೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ ಎಂದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಈ ನಿಟ್ಟಿನಲ್ಲಿ ಕ್ರೀಡಾಪಟುಗಳು ಶ್ರಮವಹಿಸಬೇಕೆಂದು ತಿಳಿಸಿದರು.

ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಆರೋಗ್ಯ ಸದೃಢವಾಗಿರುತ್ತದೆ ವುಶು ಕ್ರೀಡೆಯೂ ಮಾನಸಿಕ ಬೆಳವಣಿಗೆಯಲ್ಲಿ ಸಹಕಾರಿಯಾಗಿದೆ ಮಕ್ಕಳ ಕ್ರೀಡೆಗಳ ಸಮರ್ಪಕ ನಿರ್ದೇಶನದಿಂದಲೇ ವಿದ್ಯಾಭ್ಯಾಸ ಆರಂಭವಾಗಬೇಕು. ಇದಕ್ಕೆ ಕಾರಣವಿದೆ, ಬಾಲ್ಯದ ಆಟಗಳಿಗೂ, ಮುಂದೆ ಮಕ್ಕಳು ಬೆಳೆದು ದೊಡ್ಡವರಾದಾಗ ಅವರು ಅನುಸರಿಸಬೇಕಾದ ಕಾನೂನಿನ ಪಾಲನೆ ಅಥವಾ ಶಾಸನ-ಭಂಗಕ್ಕೂ ನಿಕಟ ಸಂಬAಧ ಇದೆ ಎಂದರು.

ಯಾವುದೇ ಆಟವಾಗಿರಲಿ, ವಿನೋದ, ಚಿನ್ನಾಟಕ್ಕೇ ಆಗಿರಲಿ ಅದನ್ನು ಆಡುವುದರಲ್ಲಿ ಅಭಿರುಚಿ, ಇಷ್ಟ, ಉತ್ಸಾಹ ಇರಬೇಕು; ತೊಡಗಿದ ಮೇಲೆ ಮಧ್ಯೆ ಬಿಡದಿರುವಂಥ ದೃಢತೆ ಇರಬೇಕು. ಆಟವೆಂದೊಡನೆ ಸ್ಪರ್ಧಾ ಮನೋಭಾವ ಜೊತೆ ಜೊತೆಗೇ ನೆರಳಾಗಿ ಹಿಂಬಾಲಿಸಿ, ಇಲ್ಲ, ಒಡಗೂಡಿಯೇ ಬಂದಿರುತ್ತೆ. ಇದೇ ‘ಗೆಲ್ಲುಗಾರಿಕೆ’ಯ ಹಂಬಲ ಮುಂದೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಜಗಲಾಸರ್ ಹೇಳಿದರು.

ಈ ಕ್ಷೇತ್ರದಲ್ಲಿ ಆಸಕ್ತಿಯಾಂದಿದ್ದರೆ ಸಾಲದು. ಕೇವಲ ಆಸಕ್ತಿ ಮಾತ್ರ ಇದ್ದವರು ಆಟಗಳ ಬರೀ ನೋಡುಗರಾಗಿ, ಪ್ರೇಕ್ಷಕರಾಗಿ ಉಳಿಯಬೇಕಾಗುತ್ತೆ. ಭಾಗವಹಿಸುವವರಿಗೆ ಶ್ರದ್ಧೆ ಇರಬೇಕು; ಅಭ್ಯಾಸ, ತರಬೇತಿ ಸಖತ್ ಬೇಕು ಎಂದರು.

ವೇದಿಕೆ ಮೇಲೆ ಕರ್ನಾಟಕ ವುಶು ಅಸೋಸಿಯೇಶನ್ ಜಿಲ್ಲಾ ಉಪಾಧ್ಯಕ್ಷರಾದ ಅಶೋಕ ಸಜ್ಜನ (ಬೇವೂರ), ಬವಿವ ಸಂಘದ ಗೌರವ ಕರ‍್ಯದರ್ಶಿ ಮಹೇಶ ಅಥಣಿ, ಅಪ್ಪಣ್ಣ ಅಂಟಿನ, ಮಹೇಶ ಅಂಗಡಿ, ವಿರೇಶ ಅಥಣಿ, ವುಶು ಸಂಸ್ಥೆಯ ಕರ‍್ಯದರ್ಶಿ ಅಶೋಕ ಡಿ.ಮೋಕಾಶಿ, ವಿವೇಕಾನಂದ ಗರಸಂಗಿ, ಕುಮಾರಸ್ವಾಮಿ ಹಿರೇಮಠ (ಚಿತ್ತರಗಿ), ಅವಿನಾಶ ಹಿರೇಮಠ ಸೇರಿದಂತೆ ಇತರರು ಹಾಜರಿದ್ದರು.

ಕರ‍್ಯಕ್ರಮ ನಿರೂಪಣೆಯನ್ನು ಪಾಟೋಳಿ ಗುರುಗಳು ಮಾಡಿದರು. ಸ್ವಾಗತವನ್ನು ರಾಜಶೇಖರ ಹಿರೇಮಠ ಮಾಡಿದರೆ ಕೊನೆಗೆ ವುಶು ಸಂಸ್ಥೆಯ ಖಜಾಂಚಿ ಸಂಗಮೇಶ ಲಾಯದಗುಂದಿ ವಂದಿಸಿದರು.

Nimma Suddi
";