ನಿಮ್ಮ ಸುದ್ದಿ ಬಾಗಲಕೋಟೆ
ಗರ್ಭಿಣಿಯರು ಕೈಗೆಟಕುವ ತರಕಾರಿ, ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನುವುದರಿಂದ ಅಪೌಷ್ಟಿಕತೆ ಹೋಗಲಾಡಿಸಬಹುದು ಎಂದು ಇಳಕಲ್ ತಾಪಂ ಅಧ್ಯಕ್ಷೆ ಶಾರದಾ ಗೋಡಿ ಹೇಳಿದರು.
ಇಳಕಲ್ ತಾಲೂಕಿನ ಉಪನಾಳ (ಎಸ್‌ಸಿ) ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗರ್ಭೀಣಿಯರು ತಮ್ಮ ಆರೋಗ್ಯ ನೋಡಿಕೊಳ್ಳುವುದರೊಂದಿಗೆ ಬೆಳೆಯವ ಮಗುವಿಗೂ ಉತ್ತಮ ಪೌಷ್ಠಿಕ ಆಹಾರ ನೀಡಿದಂತಾಗಿ ಮಕ್ಕಳು ಸದೃಡತೆಯಿಂದ ಬೆಳೆಯಲು ಸಹಾಯವಾಗುತ್ತದೆ ಎಂದು ಹೇಳಿದರು.
ತಾಪಂ ಸದಸ್ಯ ಮಂಜುನಾಥ ಗೌಡರ ಮಾತನಾಡಿ, ಗರ್ಭಿಣಿಯರು, ಬಾಣಂತಿಯರು, ಶಿಶು ಸೇರಿದಂತೆ ಅಪೌಷ್ಠಿತೆಯಿಂದ ಬಳಲುತ್ತಿರುವುದನ್ನು ತಡೆಗಟ್ಟಿ ಆರೋಗ್ಯವಂತ ಶಿಶುವಿನ ಬೆಳವಣಿಗೆಗೆ ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆ ಮೂಲಕ ಅಪೌಷ್ಠಿತೆ ಹೋಗಲಾಡಿಸಲು ಪ್ರಯತ್ನಿಸುತ್ತಿದೆ ಎಂದರು.
ಅಂಗನವಾಡಿ ಮೇಲ್ವಿಚಾರಕಿ ರಾಜೇಶ್ವರಿ ಗೌಡರ, ಮಹಿಳೆಯರು ಅಪೌಷ್ಠಿಕತೆಯಿಂದ ಬಳಲುವುದನ್ನು ಆರಂಭಿಕ ಹಂತದಲ್ಲೇ ತಡೆದು ತಾಯಿ ಹಾಗೂ ಮಗುವಿನ ಕಾಳಜಿಗಾಗಿ ಪೋಷಣ್ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.
ಚಿಕನಾಳ ಗ್ರಾಪಂ ಅಧ್ಯಕ್ಷೆ ಸುಮಿತ್ರ ಜಂಬಲದಿನ್ನಿ, ಸದಸ್ಯರಾದ ಮಂಜುಳಾ ಹಳೇಪಡಿ, ದಶರತ ನಾಗರಾಳ, ಅಂಗನವಾಡಿ ಕಾರ್ಯಕರ್ತೆ ಕಲಾವತಿ ದೇಶಪಾಂಡೆ, ಸಹಾಯಕಿ ಯಲ್ಲವ್ವ ಹರದೊಳ್ಳಿ, ಎಸ್ಡಿಎಂಸಿ ಅಧ್ಯಕ್ಷ ಯಮನಪ್ಪ ಹೊಸೂರ, ಮುಖ್ಯಗುರು ಮಹಾಂತೇಶ ತಿಪ್ಪಣ್ಣವರ, ಹಿರಿಯರಾದ ಶಂಕ್ರಯ್ಯ ಹಿರೇಮಠ, ಮಲ್ಲಪ್ಪ ಹರದೊಳ್ಳಿ, ಬಸವರಾಜ ಮರಾಠಿ, ಯಮನಪ್ಪ ಡೊಳ್ಳಿನ, ಶೇಖಪ್ಪ ಹರದೊಳ್ಳಿ, ಸಂಗನಗೌಡ ಗೌಡರ, ವಿಜಯಕುಮಾರ ಹಳ್ಳೂರ ಸೇರಿದಂತೆ ಗ್ರಾಮದ ಗರ್ಭಿಣಿಯರು, ತಾಯಂದಿರು, ಮಕ್ಕಳು ಇದ್ದರು.
ಅಭಿಯಾನದಲ್ಲಿ ೬ ತಿಂಗಳಿನಿಂದ ಮೂರು ವರ್ಷಗಳ ಮಕ್ಕಳಿಗೆ ಅಣ್ಣ ಪ್ರಾಷಣ ಮಾಡಿಸಲಾಯಿತು.