ನಿಮ್ಮ ಸುದ್ದಿ ಬಾಗಲಕೋಟೆ
ವೃತ್ತಿಯಲ್ಲಿ ಶ್ರದ್ದೆ, ಸೇವಾ ಮನೋಭಾವ ಹಾಗೂ ವಚನಗಳ ಮೂಲಕ ಸಮಾಜ ತಿದ್ದುವಲ್ಲಿ ಕಾಯಕ ಶರಣರ ಕೊಡುಗೆ ಅಪಾರ. ಕಾಯಕ ಶರಣರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಇಳಕಲ್‌ನ ಎಸ್‌ವಿಎಮ್ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಶ್ರೀಮತಿ ಪ್ರತಿಭಾ ನರೇಂದ್ರ ಅಲೆಗಾಂವಿ ಹೇಳಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಸೋಮವಾರದಂದು ಸಂಗಮೇಶ್ವರ ಸಮುದಾಯ ಭವನದಲ್ಲಿ ಶಿವಶಿಂಪಿ ಸಮಾಜದಿಂದ ಜರುಗಿದ ಕುಲಗುರು ಶಿವದಾಸಿಮಯ್ಯ ಜಯಂತ್ಯೋತ್ಸವ ಹಾಗೂ ನಿವೃತ್ತ ಯೋಧರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಶಿವಸಿಂಪಿ ಸಮಾಜವು ಆರ್ಥಿಕ, ಶೈಕ್ಷಣಿಕ ಸಾಮಾಜಿಕವಾಗಿ ಹಿಂದುಳಿದಿದ್ದು, ಪ್ರತಿಯೊಬ್ಬರೂ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಕಾಯಕದಲ್ಲಿಯೇ ತನ್ನ ಜೀವನ ಸಾಗಿಸಿದ ಶಿವದಾಸಿಮಯ್ಯ ಅವರು ನಡೆದು ಬಂದ ಹಾದಿಯನ್ನು ಸವಿವರವಾಗಿ ತಿಳಿಸಿದರು.
ಸಮಾಜದ ಮುಖಂಡ ವೀರಣ್ಣ ಯಡ್ರಾಮಿ ಮಾತನಾಡಿ, ಕಾಯಕದ ಮೂಲಕ ದೇವರನ್ನು ಕಾಣುವಂತಾಗಬೇಕು ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಹೆಚ್ಚು ಪ್ರಸ್ತುತ ಪಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಇದೇ ವೇಳೆ ನಿವೃತ್ತ ಯೋಧರಾದ ಸಂತೋಷ ಹನಮಪ್ಪ ಕತ್ತಿ, ಶಂಕ್ರಪ್ಪ ನಾಗಪ್ಪ ಬ್ಯಾಳಿ, ಮಹಾಂತಯ್ಯ.ಪಿ.ಹಿರೇಮಠ, ಯಲ್ಲಪ್ಪ ನೀಲಪ್ಪ ಸೂಳಿಕಲ್ಲ, ಬಸವರಾಜ ಅಡಿವೇಪ್ಪ ಅಕ್ಕಿ, ನಂದಪ್ಪ ಲಕ್ಷಮ್ಮಪ್ಪ ಭದ್ರಶಟ್ಟಿ ಇವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ಪರವಾಗಿ ಮಾತನಾಡಿದ ನಿವೃತ್ತ ಯೋಧ ಸಂತೋಷ ಕತ್ತಿ, ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕೃತಿ, ದೇಶಾಭಿಮಾನ ಜೊತೆಗೆ ಅವರವರ ಗುರಿ ತಲುಪಲು ಪ್ರೋತ್ಸಾಹ ನೀಡಬೇಕು. ಪ್ರತಿಯೊಬ್ಬ ಮಗನು ತಮ್ಮ ತಂದೆ-ತಾಯಿಗಳನ್ನು ಪ್ರೀತಿ, ವಿಶ್ವಾಸ ಗೌರವ ದೊಂದಿಗೆ ನೋಡಿಕೊಳ್ಳಬೇಕು. ಎಂದರು.
ಶಿವಸಿಂಪಿ ಸಮಾಜದ ಅಧ್ಯಕ್ಷ ಅಂದಪ್ಪ ಕುಬೇರಪ್ಪ ತಾಳಿಕೋಟಿ, ಉಪಾಧ್ಯಕ್ಷ ಸಂತೋಷ ಬಸವರಾಜ ಐಹೊಳ್ಳಿ, ಕಾರ್ಯದರ್ಶಿ ಶ್ರೀಕಾಂತ ಮಲ್ಲಪ್ಪ ತುಂಗಳದ, ಬಟ್ಟೆ ವ್ಯಾಪಾರಿ ಉದ್ಯಮಿ ಮುತ್ತಪ್ಪ.ಎಸ್.ಐಹೊಳ್ಳಿ, ಶಂಕರ್ ಐಹೊಳ್ಳಿ, ಶೇಖಣ್ಣ ಇಲಕಲ್ಲ, ಮಲ್ಲಣ್ಣ ಶೀರಸಿ, ಆರ್.ಕೆ.ಗೌಡರ, ನಾಗಪ್ಪ ವಂದಾಲ, ಮಹಾಂತೇಶ ಐಹೊಳ್ಳಿ, ಆನಂದ ಐಹೊಳ್ಳಿ, ಆನಂದ ಗೌಡರ ಸೇರಿದಂತೆ ಇತರರು ಇದ್ದರು.