This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಯುವಪಡೆ ಹಿಂದು ಧರ್ಮ ರಕ್ಷಣೆಗೆ ಮುಂದಾಗಿ

ಗುಡೂರಲ್ಲಿ ಶಿವಾಜಿ ಜಯಂತ್ಯುತ್ಸವ

ನಿಮ್ಮ ಸುದ್ದಿ ಬಾಗಲಕೋಟೆ

ಪ್ರಸ್ತುತ ಭಾರತದಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗುತ್ತಿದ್ದು ಶಿವಾಜಿ ಮಹಾರಾಜರು ಮಾಡಿದಂತ ಕಾರ್ಯಗಳ ಮೂಲಕ ಇಂದಿನ ಯುವಪಡೆ ಹಿಂದು ಧರ್ಮ ರಕ್ಷಿಸಲು ಮುಂದಾಗಬೇಕು ಎಂದು ಹಿಂದು ಜಾಗರಣ ವೇದಿಕೆ ರಾಜ್ಯ ಸಂಚಾಲಕ ಶಿವಾನಂದ ಬಡಿಗೇರ ಕರೆ ನೀಡಿದರು.

ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರ (ಎಸ್‌ಸಿ) ಗ್ರಾಮದಲ್ಲಿ ಛತ್ರಪತಿ ಶಿವಾಜಿ ಜಯಂತಿ ಉತ್ಸವ ಸಮಿತಿಯಿಂದ ಶಿವಾಜಿ ಮಹಾರಾಜರ ೩೯೪ನೇ ಜಯಂತಿ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕರರಾಗಿ ಅವರು ಮಾತನಾಡಿದರು. ಶಿವಾಜಿಯಂತಹ ಪುತ್ರ ನಮ್ಮ ಮನೆಯಲ್ಲಿ ಜನಿಸಿದರೆ ಮುಸ್ಲಿಂರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಧೋರಣೆಯಿಂದ ಇಂದು ಹಿಂದುಗಳ ಅಲ್ಪಸಂಖ್ಯಾತರಾಗುತ್ತಿದ್ದೇವೆ. ದೇಶದ ೭೨೦ ಜಿಲ್ಲೆಗಳಲ್ಲಿ ೧೮೦ರಲ್ಲಿ ಹಿಂದುಗಳೇ ಅಲ್ಪಸಂಖ್ಯಾತರಾಗಿದ್ದಾರೆ ಎಂದು ಹೇಳಿದರು.

ನಿನ್ನೆ ಮೊನ್ನೆ ಜನಿಸಿದ ಇಸ್ಲಾಂ ಹಾಗೂ ಕ್ರಿಶ್ಚಿಯನ್ ಸಮುದಾಯವನ್ನು ಹಿಂದು ಧರ್ಮದೊಂದಿಗೆ ಸಮೀಕರಿಸುವುದು ಸರಿಯಲ್ಲ. ೧,೪೦೦ ವರ್ಷಗಳ ಹಿಂದೆ ಉದಯಿಸಿದ ಇಸ್ಲಾಂ ಈ ದೇಶದ ಸಂಸ್ಕೃತಿಯಲ್ಲ, ಕ್ರೆöÊಸ್ತ ಮತವೂ ಉದಯವಾಗಿ ೨೦೨೧ ವರ್ಷಗಳಾಗಿವೆ. ಹೀಗಿರುವಾಗ ಸನಾತದ ಧರ್ಮವಾದ ಹಿಂದು ಧರ್ಮದೊಂದಿಗೆ ಇವೆರಡೂ ಹೇಗೆ ಸಮನಾಗುತ್ತವೆ? ಎಂದು ಪ್ರಶ್ನಿಸಿದ ಅವರು ಜಗತ್ತಿನಲ್ಲಿ ಧರ್ಮ ಎಂಬುದಿದ್ದರೆ ಅದು ಹಿಂದು ಮಾತ್ರ. ಇಸ್ಲಾಂ ಒಂದು ಧರ್ಮವಲ್ಲ, ಬದಲಾಗಿ ಅದೊಂದು ಅಭಿಪ್ರಾಯವಷ್ಟೇ ಎಂದು ತಿಳಿಸಿದರು.

ದುಬೈನಲ್ಲಿ ಶೇ.೩೦ರಷ್ಟು ಹಿಂದುಗಳಿದ್ದಾರೆ ಆದರೆ ಅಲ್ಲಿ ಯಾವುದೇ ಕೋಮು ಗಲಭೆ ಆಗುವುದಿಲ್ಲ. ಆದರೆ ಭಾರತದಲ್ಲಿ ಶೇ.೧೫ರಷ್ಟು ಇಸ್ಲಾಂಮಿಗಳಿದ್ದರೂ ಕೋಮು ಗಲಭೆ ಉಂಟಾಗುತ್ತಿವೆ. ಇದು ಜಗತ್ತಿಗೆ ಮಾರಕವಾಗಿದ್ದು ದೇಶದ ಪ್ರತಿ ಹಿಂದುವಿನ ಮನೆಯಲ್ಲಿ ಮತ್ತೊಮ್ಮೆ ಶಿವಾಜಿ ಅಂತಹ ಶೂರರು ಜನಿಸಿ ಬರಬೇಕಿದೆ ಎಂದರು.

ಸ್ವಾಮಿ ವಿವೇಕಾನಂದ ಸಂಸ್ಥೆ ಅಧ್ಯಕ್ಷ ಮುತ್ತು ಮುರಡಿ, ಇಂದಿನ ಪರಿಸ್ಥಿತಿಯಲ್ಲಿ ದೂರದಿಂದ ಬೆಟ್ಟ ನೋಡುವವರು ಬೇಕಾಗಿಲ್ಲ, ಬದಲಾಗಿ ಬೆಟ್ಟವನ್ನು ಪುಡಿ ಪುಡಿ ಮಾಡುವ ಕೆಚ್ಚೆದೆಯ ಯುವ ಸಮೂಹ ಬೇಕಾಗಿದೆ. ದೇಶದಲ್ಲಿ ಧರ್ಮ, ಸಂಸ್ಕೃತಿ ಉಳಿದಿದೆ ಎಂದು ಅದು ಹಿಂದು ಧರ್ಮದಿಂದ ಮಾತ್ರ. ಯೌವನವನ್ನು ಹಾಳು ಮಾಡಿಕೊಳ್ಳದೆ ದೇಶ ಸೇವೆಗೆ ಸಮರ್ಪಿಸಿಕೊಳ್ಳಿ ಎಂದರು.

ಸಾನ್ನಿಧ್ಯ ವಹಿಸಿದ್ದ ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮೀಜಿ, ನೀಲಾನಗರದ ಕುಮಾರ ಮಹಾರಾಜರು ಮಾತನಾಡಿದರು. ಉತ್ಸವ ಸಮಿತಿ ಅಧ್ಯಕ್ಷ ಶ್ರೀರಾಮ ಬಸವಾ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ರಾಜು ದಾನಿ, ರಾಜು ನಾಡಗೌಡರ, ಶಶಿಧರ ಮ್ಯಾಗೇರಿ, ನಿತೀಶ ರಾಜಪುರೋಹಿತ, ಚಿದಾನಂದ ಗಣಾಚಾರಿ, ಮಹೇಶ ಪವಾರ್, ಮಧು ಧಲಭಂಜನ, ಚೋಳಯ್ಯ ಸಾಲಿಮಠ, ಮುತ್ತು ಯರಕದ, ಶಿವು ವಾಲ್ಮೀಕಿ, ಸಚಿನ ಪಾಪನಾಳ ಇತರರು ಇದ್ದರು.

Nimma Suddi
";