ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಯಿಂದ ಮೇಲ್ದರ್ಜೆಗೇರಿಸಲಾದ ಪಟ್ಟಣ ಪಂಚಾಯಿತಿಗಳಿಗೆ ಪ್ರಭಾರ ಮುಖ್ಯಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಜಿಲ್ಲೆಯ ಲೋಕಾಪುರ ಹಾಗೂ ಶಿರೂರ ಗ್ರಾಪಂಗಳು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರಿವೆ. ಸಾರ್ವಜನಿಕ ಆಡಳಿತದ ಹಿತದೃಷ್ಠಿಯಿಂದ ಲೋಕಾಪೂರ ಪಟ್ಟಣ ಪಂಚಾಯಿತಿಗೆ ಮುಖ್ಯಾಧಿಕಾರಿ ಹುದ್ದೆಯ ಪ್ರಭಾರವನ್ನು ಮುಧೋಳ ನಗರಸಭೆ ಪೌರಾಯುಕ್ತ ಸುನೀಲ ಪಾಟೀಲ ಹಾಗೂ ಶಿರೂರ ಪಟ್ಟಣ ಪಂಚಾಯಿತಿಗೆ ಮುಖ್ಯಾಧಿಕಾರಿ ಹುದ್ದೆ ಪ್ರಭಾರವನ್ನು ಜಮಖಂಡಿ ನಗರಸಭೆಯ ಕಚೇರಿ ವ್ಯವಸ್ಥಾಪಕ ಐ.ಜಿ.ಕೊಣ್ಣೂರ ಅವರಿಗೆ ವಹಿಸಿಕೊಳ್ಳಲು ಡಿಸಿ ಆದೇಶಿಸಿದ್ದಾರೆ.