ಮೊದಲ ದಿನ 2260 ಜನರಿಗೆ ಲಸಿಕೆ
ನಿಮ್ಮ ಸುದ್ದಿ ಬಾಗಲಕೋಟೆ
ಕೋವಿಡ್ 2ನೇ ಅಲೆಯಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹೆಚ್ಚು ಹೆಚ್ಚು ಜನರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಉತ್ತೇಜನ ನೀಡಲು 4 ದಿನಗಳ ಕಾಲ ಹಮ್ಮಿಕೊಂಡ ಲಸಿಕಾ ಉತ್ಸವದಲ್ಲಿ ಮೊದಲ ದಿನ ರವಿವಾರದಂದು ಒಟ್ಟು 2260 ಜನ ಲಸಿಕೆ ಪಡೆದರು.
ಕೋವಿಡ್ ಲಸಿಕಾ ಉತ್ಸವ ಎಪ್ರೀಲ್ 14 ವರೆಗೆ ನಡೆಯಲಿದ್ದು, ಮೊದಲ ದಿನ ಮಹಿಳೆಯರಿಗೆ ಆದ್ಯತೆ ನೀಡಲಾಗಿತ್ತು. ರವಿವಾರ 2260 ಜನರ ಪೈಕಿ 1073 ಮಹಿಳೆಯರು ಲಸಿಕೆಯನ್ನು ಪಡೆದ್ದಾರೆ.
45 ವರ್ಷಗಳಿಗೆ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದ್ದು, ಸ್ಥಳದಲ್ಲಿಯೇ ನೊಂದಣಿ ಮಾಡಿಕೊಳ್ಳಲಾಗುತ್ತಿದೆ.
ಬಾದಾಮಿ ತಾಲೂಕಿನಲ್ಲಿ ಲಸಿಕಾ ಉತ್ಸವದ ಮೊದಲ ದಿನ ಒಟ್ಟು ಲಸಿಕೆ ಪಡೆದ 507 ಪೈಕಿ 269 ಜನ ಮಹಿಳೆಯರು ಲಸಿಕೆ ಪಡೆದಿದ್ದಾರೆ. ಬಾಗಲಕೋಟೆ 438 ಪೈಕಿ 197, ಬೀಳಗಿ 369 ಪೈಕಿ 172, ಜಮಖಂಡಿ ತಾಲೂಕಿನಲ್ಲಿ 236 ಪೈಕಿ 78, ಹುನಗುಂದ 441 ಪೈಕಿ 236 ಹಾಗೂ ಮುಧೋಳ ತಾಲೂಕಿನಲ್ಲಿ 269 ಪೈಕಿ 121 ಜನ ಮಹಿಳೆಯರು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.
ಕೋವಿಡ್ ಲಸಿಕಾ ಉತ್ಸವದ ಅಂಗವಾಗಿ ಜಿಲ್ಲೆಯ ಮುಧೋಳ ತಾಲೂಕಾ ಆಸ್ಪತ್ರೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮಳಲಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮೆಟಗುಡ್ಡ, ಜಮಖಂಡಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಕೊಣ್ಣೂರನಲ್ಲಿ ಲಸಿಕಾ ಕೇಂದ್ರಗಳನ್ನು ಬಲೂನುಗಳಿಂದ ಶೃಂಗಾರ ಗೊಳಿಸಿದ್ದರು.