This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

ಆತಂಕದಲ್ಲಿ ಅಮೀನಗಡ ಜನ

ಸದ್ದಿಲ್ಲದೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಕೊರೊನಾ ೨ನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಆತಂಕಕ್ಕೀಡು ಮಾಡಿದೆ.

ಮೊದಲ ಅಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಕೊವೀಡ್ ಪಾಸಿಟಿವ್ ದೃಢಪಡುತ್ತಲೇ ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆಯಿಂದ ಎಚ್ಚರಿಕೆ ನೀಡಿ ಆ ಪ್ರದೇಶವನ್ನು ಕಟ್ಟುನಿಟ್ಟಾಗಿರುವಂತೆ ವ್ಯವಸ್ಥೆ ಮಾಡುತ್ತಿದ್ದರು. ಹೀಗಾಗಿ ಆಗ ಸೋಂಕಿತರ ಸಂಖ್ಯೆ ನಿಯಂತ್ರಣದಲ್ಲಿತ್ತು.

ಆದರೆ ೨ನೇ ಅಲೆಯ ಹೊಡೆತ ತೀವ್ರತೆ ಇದ್ದರೂ ಜನರಲ್ಲಿ ಯಾವುದೇ ಭಯವಿಲ್ಲದಂತಾಗಿದೆ. ಪಟ್ಟಣದಲ್ಲಿ ಈಗಾಗಲೇ ೩೦ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದರೆ ಮೂವರು ಕೋವಿಡ್‌ಗೆ ಮರಣ ಹೊಂದಿದ್ದಾರೆ ಎಂಬ ಮಾಹಿತಿಯಿದ್ದು ಇದು ಜನರಲ್ಲಿ ಮತ್ತಷ್ಟು ಆತಂಕ ಮೂಡುವಂತೆ ಮಾಡಿದೆ.

ಕೋವಿಡ್ ಸೋಂಕು ದೃಢಪಟ್ಟವರ ಕುಟುಂಬಸ್ಥರು ಇತ್ತೀಚೆಗೆ ಪಕ್ಕದ ಮನೆಯವರಿಗೂ ಗೊತ್ತಾಗದಂತೆ ಮಾಹಿತಿ ಮುಚ್ಚಿಟ್ಟು ತಾವೂ ಸಹ ಎಲ್ಲೆಂದರಲ್ಲೆ ಓಡಾಡುತ್ತಿದ್ದಾರೆ. ಇದು ಸಮುದಾಯಕ್ಕೆ ಪ್ರಸರಣವಾದರೂ ಅಚ್ಚರಿಯಿಲ್ಲದಂತಾಗಿದೆ. ಗೊತ್ತಾದರೂ ಸಹ ಏನೂ ಆಗಿಲ್ಲವೆಂಬಂತೆ ವರ್ತಿಸುತ್ತಿದ್ದು ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಸರಕಾರದ ನಿಯಮ ಮೀರುತ್ತಿದ್ದಾರೆ ಎಂಬ ಆರೋಪವೂ ಇದ್ದು ಗಮನಿಸಬೇಕಾದ ಸ್ಥಳೀಯ ಆಡಳಿತ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಮಾತಾಗಿದೆ.

ಸರಕಾರದ ನೂತನ ನಿಯಮದಂತೆ ತರಕಾರಿ, ಹಣ್ಣು ಮಾರಾಟಕ್ಕೆ ಬೆಳಗ್ಗೆಯಿಂದ ಸಂಜೆವರೆಗೆ ಅವಕಾಶವಿದ್ದರೂ ಎಂಜಿ ರಸ್ತೆ ಹಾಗೂ ರಾಜ್ಯ ಹೆದ್ದಾರಿ ಅಕ್ಕಪಕ್ಕದಲ್ಲಿ ನಿರಾತಂಕವಾಗಿ ಒಂದೆಡೆ ಕುರಿತು ವ್ಯಾಪಾರ ಆರಂಭಿಸಿರುತ್ತಾರೆ. ಪಟ್ಟಣದ ಕೆಲ ಆಯಕಟ್ಟಿನ ಸ್ಥಳದಲ್ಲಿ ಮನೆಯೊಳಗೆ ಕಿರಾಣಿ ಅಂಗಡಿಗಳಿದ್ದು ಸಂಜೆವರೆಗೆ ಗುಟ್ಕಾ ಸೇರಿದಂತೆ ಇನ್ನಿತರ ವ್ಯಾಪಾರದಲ್ಲಿ ತೊಡಗಿದ್ದು ಇದು ಜನ ಸಂಚಾರ ಹೆಚ್ಚಾಗಲು ಕಾರಣವಾಗಿದೆ.

ಕೂಡಲೆ ಪಪಂ ಆಡಳಿತ, ಪೊಲೀಸ್ ಇಲಾಖೆ ಸಿಬ್ಬಂದಿ ಆರೋಗ್ಯ ಇಲಾಖೆಯ ಸಮನ್ವಯದೊಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟ ಕುಟುಂಬ ಸದಸ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕಿದೆ. ಜತೆಗೆ ಅಂತ್ಯಕ್ರಿಯೆ ಅವಯಲ್ಲಿ ನಿಗಾ ವಹಿಸಬೇಕಾದ ಅನಿವಾರ್ಯತೆ ಬಂದೊದಗಿದೆ.

ಜನರೂ ಸಹ ಬ್ಯಾಂಕ್ ಪಾಸ್‌ಬುಕ್, ಔಷಧ ಚೀಟಿ, ಪಂಚಾಯಿತಿ ಕೆಲಸ, ಕುಡಿವ ನೀರು ಎಂಬ ವಿನಾಕಾರಣ ಸಬೂಬು ಹೇಳದೆ ಅವಶ್ಯಕತೆ ಇದ್ದರೆ ಮಾತ್ರ ಹೊರ ಬಂದು ಕೊರೊನಾ ಹಿಮ್ಮೆಟ್ಟಿಸಲು ಸಹಕಾರ ನೀಡಬೇಕಾದ ಅನಿವಾರ್ಯತೆ ಪಟ್ಟಣದ ಜನತೆಗೆ ಬಂದೊದಗಿದೆ.

 

Nimma Suddi
";