ನಿಮ್ಮ ಸುದ್ದಿ ಬಾಗಲಕೋಟೆ
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿಯವರು ಆಕ್ಸಿಜನ್ ಪ್ಲ್ಯಾಂಟ್‍ನ್ನು ಬಾಗಲಕೋಟೆ ಜಿಲ್ಲೆಗೆ ಮಂಜೂರು ಮಾಡಲು ಎಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ರೆಮ್‍ಡಿಸಿವಿರ್ ಇಂಜೆಕ್ಷನ್‍ಗಳನ್ನು ಹೆಚ್ಚು ಪೂರೈಸುವಂತೆ ಕೇಂದ್ರ ಸಚಿವರಾದ ಡಿ.ವಿ ಸದಾನಂದಗೌಡರಿಗೆ ಸಭೆಯಲ್ಲಿ ವಿನಂತಿ ಮಾಡಿಕೊಂಡಿದ್ದು, ಮೂರು ದಿನಗಳಲ್ಲಿ ಅವುಗಳನ್ನು ಪೂರೈಸುವ ಭರವಸೆಯನ್ನು ನೀಡಿದ್ದಾರೆ. ಬೆಳಗಾವಿ ಜಲ್ಲೆಗೂ 4 ಆಕ್ಸಿಜನ್ ಪ್ಲ್ಯಾಂಟ್ ನೀಡುವಂತೆ ಬೇಡಿಕೆಯಿಟ್ಟಿದ್ದು, ಎಲ್ಲರೂ ಸಹಕಾರ ಮಾಡುವ ಭರವಸೆಯನ್ನು ನೀಡಿದ್ದಾರೆ.
ಕೋವಿಡ್ ರೋಗಿಗಳ ಸಮಸ್ಯೆ ನಿವಾರಣೆಗಾಗಿ ಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಮನ್‍ರಾದ ವೀರಣ್ಣ ಚರಂತಿಮಠ ಅವರು ನಿಜಲಿಂಗಪ್ಪ ಮೇಡಿಲಕ್ ಕಾಲೇಜಿನ ಆಸ್ಪತ್ರೆಯಲ್ಲಿ 500 ಬೆಡ್‍ಗಳನ್ನು ನೀಡುವುದರ ಜೊತೆಗೆ 130ಕ್ಕೂ ಹೆಚ್ಚು ಆಕ್ಸಿನೆಟೆಡ್ ಬೆಡ್‍ಗಳನ್ನು ಕೊಟ್ಟಿದ್ದಾರೆ. ಹಾಗೂ 240 ಹೆಚ್ಚುವರಿ ಆಕ್ಸಿನೆಟೆಡ್ ಬೆಡ್ ಗಳನ್ನು ನೀಡಲು ಎಲ್ಲ ರೀತಿಯ ತಯಾರಿಗಳನ್ನು ಮಾಡುತ್ತಿದ್ದಾರೆ. ಅವರಿಗೆ ಸರಕಾರ ಹಾಗೂ ಸಾರ್ವಜನಿಕರ ಪರವಾಗಿ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು.
ಇವತ್ತು ಆಕ್ಸಿಜನ್ ಪೂರೈಕೆ ಕಡಿಮೆಯಿದು,್ದ ಬಾಗಲಕೋಟೆ ಜಿಲ್ಲೆಗೆ ಸರಾಸರಿ 8 ಕೆ.ಎಲ್ ದಷ್ಟು ಲಭ್ಯವಿತ್ತು. ಆದರೆ ಸರ್ಕಾರ ಈಗ ಅದನ್ನು 13 ಕೆ.ಎಲ್‍ಗೆ ಹೆಚ್ಚುವರಿ ಮಾಡಿದೆ. ಅದೇ ರೀತಿಯಾಗಿ ಬೆಳಗಾವಿ ಜಿಲ್ಲೆಗೆ ಸರಾಸರಿ 16 ಕೆ.ಎಲ್ ಇದ್ದದ್ದನ್ನು 24 ಕೆ.ಎಲ್‍ಗೆ ಹೆಚ್ಚುವರಿ ಮಾಡಿದ್ದರಿಂದ ಹೆಚ್ಚು ಐಸಿಯು ಬೆಡ್‍ಗಳನ್ನು, ಆಕ್ಸಿನೆಟೆಡ್ ಬೆಡ್ಗಳನ್ನು ಸಿದ್ಧಪಡಿಸಿ ಕೋವಿಡ್ ನಿರ್ವಹಣೆ ಮಾಡುವಲ್ಲಿ ಅನೂಕೂಲವಾಗಿದೆ ಎಂದು ತಿಳಿಸಿದ್ದಾರೆ.