*ಕೋವಿಡ್ ಸೋಂಕಿತರಿಗೆ ಆಯುಷ್ ಔಷಧ ಕಿಟ್ ವಿತರಣೆಗೆ ಹಸ್ತಾಂತರ*
ನಿಮ್ಮ ಸುದ್ದಿ ಬಾಗಲಕೋಟೆ
ಕೇಂದ್ರ ಪುರಸ್ಕøತ ಯೋಜನೆಯ ರಾಷ್ಟ್ರೀಯ ಆಯುಷ್ ಅಭಿಯಾನದಡಿಯಲ್ಲಿ ಕೋವಿಡ್-19 ಸೋಂಕಿತರಿಗೆ ವಿತರಿಸುವ ನಿಟ್ಟಿನಲ್ಲಿ ಆಯುಷ್ ಔಷಧಿಗಳ ಕಿಟ್‍ಗಳನ್ನು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರಿಗೆ ಜಿಲ್ಲಾ ಆಯುಷ ಅಧಿಕಾರಿ ಡಾ.ಮಲ್ಲಣ್ಣ ತೋಟದ ಗುರುವಾರ ಹಸ್ತಾಂತರಿಸಿದರು.
ಜಿಲ್ಲೆಯಲ್ಲಿರುವ ಕೋವಿಡ್ ಕೇರ ಸೆಂಟರ್‍ಗಳಲ್ಲಿರುವ ಕೋವಿಡ್-19 ಅ-ಸಿಮ್ಟಮೀಟಿಕ್ ಹಾಗೂ ಮೈಲ್ಡ್ ಪಾಸಿಟಿವ್ ರೋಗಿಗಳಿಗೆ ವಿತರಿಸಲು ಭಾರತ ಸರ್ಕಾರದ ಆಯುಷ್ ಮಂತ್ರಾಲಯ ಇತ್ತೀಚಿಗೆ ಹೊರಡಿಸಿರುವ ಮಾರ್ಗಸೂಚಿಗಳ ಅನುಸಾರ ಆಯುಷ್-64, ಅಶ್ವಗಂಧ ಚೂರ್ಣ, ಚವನಪ್ರಾಶ್, ಸಂಶಮನಿ ವಟಿ, ಶರಬತ್-ಎ-ಉನ್ನಬ್ ಈ 5 ಆಯುಷ್ ಔಷಧಿಗಳ ಕಿಟ್‍ಗಳನ್ನು ಹಸ್ತಾಂತರಿಸಿದರು.
ಜಿಲ್ಲೆಗೆ ಪ್ರಥಮ ಹಂತದಲ್ಲಿ 2000 ಆಯುಷ್ ಔಷಧಿ ಕಿಟ್‍ಗಳು ಪೂರೈಕೆಯಾಗಿದ್ದು, ಸಾಂಕೇತಿಕವಾಗಿ ಜಿಲ್ಲಾಧಿಕಾರಿಗಳಿಂದ ಸದರಿ ಔಷಧಿಗಳನ್ನು ವಿತರಿಸಲು ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಆಯುಷ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ.ಚಂದ್ರಕಾಂತ ರಕ್ಕಸಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.