ನಾಡಿನ ಚಿತ್ತ ಅಮೀನಗಡದ ಕೊರೊನಾ ಜಾಗೃತಿ ಚಿತ್ರದತ್ತ
ನಿಮ್ಮ ಸುದ್ದಿ ಬಾಗಲಕೋಟೆ
ಕಳೆದ ಮಾರ್ಚ್ ನಲ್ಲಿ ದೇಶದ ಅತಿದೊಡ್ಡ ಮಾಸ್ಕ್ ಮಾಡುವ ಮೂಲಕ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿದ್ದ ಬಾಗಲಕೋಟೆ ಜಿಲ್ಲೆಯ ಅಮೀನಗಡ ಪಟ್ಟಣ ಇದೀಗ ಮತ್ತೊಮ್ಮೆ ಅತಿ ದೊಡ್ಡ ಕೊರೊನಾ ಜಾಗೃತಿಯ ರಸ್ತೆ ಚಿತ್ರಗಳನ್ನು ಬಿಡಿಸುವ ಮೂಲಕ ಮತ್ತೊಮ್ಮೆ ದೇಶ ಮತ್ತು ರಾಜ್ಯದ ಗಮನವನ್ನು ಸೆಳೆಯುತ್ತಿದೆ.
ಹೌದು ಅಮೀನಗಡದ ಸ್ನೇಹಿತರು ಸೇರಿ ಆರಂಭಿಸಿರುವ ನಿಯೋಜಿತ ರಾಜಗುರು ಪತ್ತಿನ ಸಹಕಾರ ಸಂಘದ ವತಿಯಿಂದ ತನ್ನ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಯಡಿ ಈ ಕಾರ್ಯಕ್ಕೆ ಮುಂದಾಗಿದೆ ಎನ್ನುತ್ತಾರೆ ಸಂಘದ ಮುಖ್ಯ ಪ್ರವರ್ತಕ ಸುರೇಶ್ ಕಾಯಿ.
ಚೆನ್ನೈನ ಎಸ್. ವಿ. ಮತ್ತು ಬೆಂಗಳೂರಿನ ಇಬ್ಬನಿ ಫೌಂಡೇಶನ್ ಜೊತೆಗೂಡಿ ಸೋಮವಾರ ಅಮೀನಗಡದ ಇನ್ನೂರಕ್ಕೂ ಹೆಚ್ಚು ಕೊರೊನಾ ಫ್ರಂಟ್ ಲೈನ್ ವಾರಿಯರ್ಸ್ಗ ಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ಗಮನ ಸೆಳೆಯುವ ನಿಟ್ಟಿನಲ್ಲಿ 100ಕ್ಕೂ ಹೆಚ್ಚು ಅಡಿ ಉದ್ದನೆಯ ಕಾರ್ಟೂನ್ ಚಿತ್ರಗಳ ಮೂಲಕ ಜಾಗೃತಿಯ ಸಂದೇಶ ವನ್ನು ನಾಡಿನಾದ್ಯಂತ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ ದೇಶದ ಅತಿ ದೊಡ್ಡ ಮಾಸ್ಕ್ ನಿರ್ಮಿಸಿ ಗಮನ ಸೆಳೆದಿದ್ದ ಸಂಸ್ಥೆಯ ನಿರ್ದೇಶಕ ಮಂಜುನಾಥ್ ಬಂಡಿ.
ಅಮೀನಗಡ ಸೇರಿದಂತೆ ಹುನಗುಂದ ಮತ್ತು ಇಲಕಲ್ಲ ತಾಲೂಕಿನ ತುಂಬಾ ಕರೋಣ ಮುಂಚೂಣಿಯ ಕಾರ್ಯಕರ್ತರಿಗೆ 2000ಕ್ಕೂ ಹೆಚ್ಚು ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಮಾಡಲು ಸ್ಥಳೀಯ ಮತ್ತು ಚೆನ್ನೈನ ಸಂಸ್ಥೆ ಜೊತೆಗೂಡಿ ಈ ಕಾರ್ಯಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ ಇಬ್ಬನಿ ಫೌಂಡೇಶನ್ ಬೆಂಗಳೂರುನ ಶಿವಕುಮಾರ್.
ಬಾಗಲಕೋಟೆಯ ಖ್ಯಾತ ಕಲಾವಿದ ಅಸ್ಲಾಂ ಕಲಾದಗಿ ಮತ್ತು ಸ್ಥಳೀಯ ಕಲಾವಿದ ರವಿಕುಮಾರ್ ಬಂಡಿಯವರ ಕುಂಚದಲ್ಲಿ ಮೂಡಿ ಬಂದ ಚಿತ್ರಗಳು ಪಟ್ಟಣದ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರ ಗಮನ ಸೆಳೆಯುತ್ತಿವೆ..
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷ ಸಂಗಪ್ಪ ತಳವಾರ, ಅಮೀನಗಡ ಕಂದಾಯ ನಿರೀಕ್ಷಕ ಜಂಬಣ್ಣ ಚನಿವಾಲರ್, ಪಿ.ಕೆ.ಪಿ ಎಸ್. ಬ್ಯಾಂಕ್ ನ ನಿಂಗರಾಜ ರಾಮವಾಡಗಿ, ಸಂಸ್ಥೆಯ ನಿರ್ದೇಶಕರುಗಳಾದ ಪುಂಡಲೀಕ್ ತೆಗ್ಗಿನಮನಿ, ಸಿ. ಎಲ್. ಜಾಲಿಹಾಳ್, ಅಶೋಕ್ ಬಡಿಗೇರ್, ಎಸ್. ಎಸ್. ಕಂಬಳಿ, ನಾಗೇಂದ್ರ ಸಾ ನಿರಂಜನ್, ಶಿವಕುಮಾರ್ ಆನೆಹೊಸೂರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.