ನಿಮ್ಮ ಬಾಗಲಕೋಟೆ
ಜಿಲ್ಲೆಯಲ್ಲಿ ಕೋವಿಡ್‍ನಿಂದ 15 ಜನ ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಹೊಸದಾಗಿ 2 ಕೊರೊನಾ ಪ್ರಕರಣಗಳು ಬುಧವಾರ ದೃಡಪಟ್ಟಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 35027 ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 34584 ಜನ ಕೋವಿಡ್‍ನಿಂದ ಗುಣಮುಖರಾಗಿದ್ದಾರೆ.
1798 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 704195 ಸ್ಯಾಂಪಲ್ ಪರೀಕ್ಷಿಸಲಾಗಿದ್ದು. ಅದರಲ್ಲಿ 666770 ನೆಗಟಿವ್ ಪ್ರಕರಣ, ಹಾಗೂ 317 ಮೃತ ಪ್ರಕರಣಗಳು ವರದಿಯಾಗಿರುತ್ತದೆ.
ಇನ್ನು 126 ಮಾತ್ರ ಸಕ್ರಿಯ ಪ್ರಕರಣಗಳು ಇದ್ದು, ಇಲ್ಲಿವರೆಗೆ ಒಟ್ಟು 498 ಸ್ಯಾಂಪಲ್‍ಗಳು ಮಾತ್ರ ರಿಜೆಕ್ಟ ಆಗಿರುತ್ತವೆ.
ಹೊಸದಾಗಿ ಬಾಗಲಕೋಟೆ ತಾಲೂಕಿನಲ್ಲಿ 892 ಸ್ಯಾಪಲ್ ಪರೀಕ್ಷೆಯಿಂದ 0, ಬಾದಾಮಿ 406 ಪರೀಕ್ಷೆಯಿಂದ 0, ಬೀಳಗಿ 161 ಸ್ಯಾಂಪಲ್ ಪರೀಕ್ಷೆಯಿಂದ 0, ಜಮಖಂಡಿ 536 ಪರೀಕ್ಷೆಯಿಂದ 2, ಮುಧೋಳದಲ್ಲಿ 315 ಜನರ ಪರೀಕ್ಷೆಯಿಂದ 0 ಹಾಗೂ ಹುನಗುಂದಲ್ಲಿ 456 ಸ್ಯಾಂಪಲ್ ಪರೀಕ್ಷೆಯಿಂದ 0 ಜನರಲ್ಲಿ ಸೋಂಕು ದೃಡಪಟ್ಟಿವೆ. ಪಾಜಿಟಿವಿಟಿ ಪ್ರಮಾಣ ಶೇ 0.07 ಇರುತ್ತದೆ.
ಹೊಸದಾಗಿ ದೃಡಪಟ್ಟ 2 ಕೋವಿಡ್ ಪ್ರಕರಣಗಳಲ್ಲಿ 2 ಜನ ಹೋಮ್ ಐಸೋಲೇಷನದಲ್ಲಿ ಇದ್ದಾರೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಬೀಳಗಿ ತಾಲೂಕಿನಲ್ಲಿ ಶೇ. 0.37 ರಷ್ಟು ಕಂಡುಬಂದರೆ ಅತೀ ಕಡಿಮೆ ಶೇ.0 ರಷ್ಟು ಬಾಗಲಕೋಟೆ, ಬಾದಾಮಿ, ಹುನಗುಂದ, ಬೀಳಗಿ, ಮುಧೋಳ ತಾಲೂಕಿನಲ್ಲಿ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.