ವಿಜ್ಞಾನಿಗಳ ತಂಡದಿಂದ ಕ್ಷೇತ್ರ ಬೇಟಿ, ಪರಿಶೀಲನೆ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯಲ್ಲಿ ಬೆಳೆದಿರುವ ಹೆಸರು ಮತ್ತು ಸೋಯಾ ಅವರೆಯ ಕ್ಷೇತ್ರಗಳಿಗೆ ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನೊಳಗೊಂಡ ತಂಡವು ಮುಧೋಳ ತಾಲೂಕಿನಲ್ಲಿ ರೈತರು ಬೆಳೆದ ರೋಗಭಾಧಿತ ಹೆಸರು ಮತ್ತು ಸೋಯಾವರೆಯ ಬೆಳೆಗಳ ತಾಕಿಗೆ ಭೇಟಿ ನೀಡಿ ರೈತರಿಗೆ ಹೊಲದಲ್ಲಿಯೇ ಹತೋಟಿ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.
ಹೆಸರು ಮತ್ತು ಸೋಯಾ ಅವರೆ ಬೆಳೆಯಲ್ಲಿನ ಹಳದಿ ನಂಜು ರೋಗವು ಈ ವರ್ಷ ಮುಂಗಾರಿನಲ್ಲಿ ಉಂಟಾದ ಒಣ ಬರದಿಂದ ಹೆಚ್ಚಾಗಿ ಕಂಡು ಬರುತ್ತಿದ್ದು ಹಾಗೂ ಈ ರೋಗವು ಸಸ್ಯ ಹೇನು ಮತ್ತು ಬಿಳಿ ನೋಣಗಳಿಂದ ಹರಡುತ್ತಿದೆ. ಹಳದಿ ನಂಜು ರೋಗದ ಹತೋಟಿಗಾಗಿ ರೋಗಕ್ಕೆ ತುತ್ತಾದ ಸಸ್ಯಗಳನ್ನು ಪ್ರಾರಂಭದ ಹಂತದಲ್ಲಿಯೇ ಗುರುತಿಸಿ ಕಿತ್ತ ಮಣ್ಣಿನಲ್ಲಿ ಹೂಳಬೇಕು.
ಈ ರೋಗವನ್ನು ಹರಡುವ ವಾಹಕಗಳನ್ನು ಹತೋಟಿ ಮಾಡಲು ಪ್ರತಿ ಲೀ. ನೀರಿಗೆ 0.2 ಮಿ.ಲೀ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಅಥವಾ 0.3 ಗ್ರಾ ಥೈಯಾಮಿಥಾಕ್ಷಾಮ್ 25 ಡಬ್ಲೂ.ಜಿ ಅಥವಾ 1 ಮಿ.ಲೀ ಮೊನೋಕ್ರೋಟೊಫಾಸ್ 36 ಎಸ್.ಎಲ್ ಅಥವಾ ಡೈಮಿಥೋಯೇಟ್ 30 ಇ.ಸಿ @1.7 ಮಿ.ಲೀ ಬೆರೆಸಿ ಸಿಂಪಡಿಸಬೇಕು.
ಎಲೆ ತಿನ್ನುವ ಮತ್ತು ಕೊಂಬಿನ ಹುಳುವಿನ ಹತೋಟಿಗಾಗಿ; 1 ಮಿ.ಲೀ ಮೊನೋಕ್ರೋಟೊಫಾಸ್ 36 ಎಸ್.ಎಲ್ ಅಥವಾ 2 ಮಿ.ಲೀ ಕ್ಲೋರ್ಪೈರಿಫಾಸ್ 20 ಇ.ಸಿ ಅಥವಾ ಡೈಮಿಥೋಯೇಟ್ 30 ಇ.ಸಿ @1.7 ಮಿ.ಲೀ ಬೆರೆಸಿ ಸಿಂಪಡಿಸಬೇಕು. ಸೋಯಾ ಅವರೆಯಲ್ಲಿ ಎಲೆ ತಿನ್ನುವ ಕೀಡೆಗಳ ಹತೋಟಿಗೆ 1.7 ಮಿ.ಲೀ. ಡೈಮಿಥೊಯೇಟ್ 30 ಇಸಿ ಅಥವಾ ಅಥವಾ 1.0 ಮಿ.ಲೀ. ಮೊನೊಕ್ರೋಟೊಫಾಸ್ 36 ಎಸ್.ಎಲ್. ಅಥವಾ 2.0 ಮಿ.ಲೀ. ಕ್ವಿನಾಲ್ಫಾಸ್ 20 ಇ.ಸಿ. ಅಥವಾ 0.6 ಗ್ರಾಂ. ಡೈಫ್ಲೂಬೆಂಜೂರಾನ್ 25 ಡಬ್ಲೂ.ಪಿ. ಅಥವಾ 0.25 ಮಿ.ಲೀ. ಫ್ಲೂಬೆಂಡಿಯಾಮೈಡ್ 20% ಡಬ್ಲೂ.ಜಿ. ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಕೀಟದ ಬಾಧೆ ಹೆಚ್ಚಾಗಿ ಕಂಡುಬಂದಲ್ಲಿ 0.2 ಮಿ.ಲೀ. ಕ್ಲೊರ್ಎಂಟ್ರಿನಿಪ್ರೋಲ್ 18.5 ಎಸ್.ಸಿ. ಅಥವಾ 0.5 ಮಿ.ಲೀ. ಲ್ಯಾಂಬ್ಡಾಸೈಲೋಥ್ರಿನ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದರು.
ತಂಡದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಅರ್ಜುನ ಸೂಲಗಿತ್ತಿ ಮತ್ತು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಅಶೋಕ ತಿರಕನ್ನವರ, ಕೃಷಿ ಅಧಿಕಾರಿಗಳಾದ ಲಕ್ಷ್ಮಿ ತೇಲಿ ಮತ್ತು ತಾಂತ್ರಿಕ ಸಹಾಯಕರಾದ ವiಹಾಂತೇಶ ಕುಂಟೋಜಿ ಹಾಗೂ ಆತ್ಮ ಸಿಬ್ಬಂದಿ ಉಪಸ್ಥಿತರಿದ್ದರು.