This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ಇಲಕಲ್ಲಿನಲ್ಲಿ ರಾಜ್ಯಮಟ್ಟದ ವ್ಯಸಮುಕ್ತ‌ ದಿನಾಚರಣೆ

ವ್ಯಸನಮುಕ್ತ ದಿನಾಚರಣೆ ಸರಕಾರಿ ಕಾರ್ಯಕ್ರಮವಾಗಲಿ : ಹೊರಟ್ಟಿ

ನಿಮ್ಮ ಸುದ್ದಿ ಬಾಗಲಕೋಟೆ

ಇಳಕಲ್ಲಿನ ಡಾ.ವಿಜಯ ಮಹಾಂತ ಶ್ರೀಗಳ ಜನ್ಮದಿನವಾದ ಆಗಸ್ಟ 1ನ್ನು ರಾಜ್ಯಾದ್ಯಂತ ವ್ಯಸನಮುಕ್ತ ದಿನವನ್ನಾಗಿ ಸರಕಾರದಿಂದಲೇ ಆಚರಿಸುವಂತಾಗಬೇಕೆಂದು ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ತಿಳಿಸಿದರು.

ಇಲಕಲ್ಲಿನ ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಅನುಭವನ ಮಂಟಪದಲ್ಲಿ ರಾಜ್ಯ ಮದ್ಯಪಾನ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ರಾಜ್ಯಮಟ್ಟದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಇಲಕಲ್ಲಿನ ಡಾ.ಮಹಾಂತ ಶ್ರೀಗಳ ಮಠ ರಾಜ್ಯಕ್ಕೆ ಮಾದರಿಯಾಗಿದೆ. ಹುಟ್ಟು ಆಕಷ್ಮಿಕ, ಸಾವು ಖಚಿತ ಎಂಬಂತೆ ಇದರ ಮಧ್ಯೆ ನಾವೇನು ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ನಾವು ಮಾಡಿದ ಕಾರ್ಯಗಳು ಹೆಜ್ಜೆ ಗುರುತಾಗಿ ಉಳಿಯಬೇಕು. ಅಂತಹ ಕಾರ್ಯವನ್ನು ಲಿಂಗೈಕ್ಯ ಡಾ.ಮಹಾಂತ ಶಿವಯೋಗಿಗಳು ಮಾಡಿದ್ದಾರೆ. ಡಾ.ಮಹಾಂತ ಸ್ವಾಮೀಜಿಗಳ ಕಾರ್ಯದ ಮೂಲಕ ರಾಜ್ಯದಲ್ಲೇ ಇಳಕಲ್ ಶ್ರೀಮಠ ಹಾಗೂ ಸ್ವಾಮೀಜಿಗಳು ಹೆಸರು ಗಳಿಸಿದ್ದಾರೆ ಎಂದು ಹೇಳಿದರು.

ಸಮಾಜವನ್ನು ವ್ಯಸನಮುಕ್ತಗೊಳಿಸುವಲ್ಲಿ ತಾಯಂದಿರ ಪಾತ್ರ ಮುಖ್ಯವಾಗಿದ್ದು, ಮಕ್ಕಳನ್ನು ಡಾಕ್ಟರ್, ಎಂಜಿನಿಯರ್ ಆಗಲಿ ಎಂಬ ಆಸೆಯನ್ನು ತೊರೆದು ಅವರಲ್ಲಿ ಉತ್ತಮ ಸಂಸ್ಕಾರ ಬೆಳೆಸಬೇಕು. ಇಂತಹ ಕಾರ್ಯಕ್ಕೆ ತಾಯಂದಿರು ಮನಸ್ಸು ಮಾಡಿದರೆ ಇಡೀ ಸಮುದಾಯವನ್ನು ವ್ಯಸನಮುಕ್ತ ಮಾಡುವ ಮೂಲಕ ಮಹಾಂತಪ್ಪಗಳ ಜೋಳಿಗೆಗೆ ಬಲ ತುಂಬಿದಂತಾಗುತ್ತದೆ. ಶ್ರೀಗಳ ಜನ್ಮದಿನವಾದ ಆಗಸ್ಟ 1 ಚಾರಿತ್ರ್ಯ ಬರೆಯುವ ದಿನವಾಗಿದ್ದು, ದಿನಾಚರಣೆ ಭಾಷಣಕ್ಕೆ ಸೀಮಿತವಾಗದೆ ಅದನ್ನು ಎಲ್ಲರೂ ಕಾರ್ಯರೂಪಕ್ಕೆ ತರೋಣ. ಶ್ರೀಗಳ ಮಾರ್ಗದರ್ಶನದಲ್ಲಿ ಸಾಗೋಣ ಎಂದು ಸಮುದಾಯಕ್ಕೆ ಕರೆ ನೀಡಿದರು.

ಹುನ್ನೂರ ಮದರಖಂಡಿಯ ಬಸವಜ್ಞಾನ ಗುರುಕುಲದ ಈಶ್ವರ ಮಂಟೂರ ಶ್ರೀಗಳು ಮಾತನಾಡಿ ವ್ಯಸನಮುಕ್ತ ಸಮಾಜ ನಿರ್ಮಾಣ ಕಾರ್ಯದಲ್ಲಿ ಮಹಾಂತ ಶ್ರೀಗಳ ಪಾತ್ರ ಮುಖ್ಯವಾಗಿದ್ದು, ಅವರ ಈ ಕಾರ್ಯಕ್ಕೆ ನಾವೆಲ್ಲರೂ ಪಣತೊಡುವ ಅಗತ್ಯವಿದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ದೇವದಾಸಿ ಮಹಿಳೆಯರ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿದ್ದಾರೆ. ಒಂದಲ್ಲ ಎರಡಲ್ಲ ಹಲವಾರು ಸಮಾಜ ಕಾರ್ಯಗಳಲ್ಲಿ ತೊಗಡಿಕೊಂಡಿದ್ದರು. ವಿದೇಶಿ ಮಹಿಳೆ ಭೇಟಿ ಸಂದರ್ಭದಲ್ಲಿಯೂ ಕೂಡಾ ಅವರಿಂದ ಯಾವುದೇ ಫಲಾಪೇಕ್ಷೆಯನ್ನು ಪಡೆಯದೇ ತಮ್ಮಲ್ಲಿರುವ ವ್ಯಸನಿಗಳನ್ನು ಜೋಳಿಗೆ ಹಾಕಲು ತಿಳಿಸಿದರು ಎಂದರು.

ಶಿರೂರಿನ ವಿಜಯಮಹಾಂತೇಶ ತೀರ್ಥ ಶಾಖಾ ಮಠದ ಡಾ.ಬಸವಲಿಂಗ ಸ್ವಾಮಿಗಳು, ಇಲಕಲ್ಲ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮಿಗಳು, ನಿಡಸೋಶಿ ಸಿದ್ದ ಸಂಸ್ಥಾನ ಮಠದ ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಗಳು ಮಾತನಾಡಿದರು. ಲಿಂಗಸಗೂರಿನ ವಿಜಯಮಹಾಂತೇಶ ಶಾಖಾ ಮಠದ ಸಿದ್ದಲಿಂಗ ಸ್ವಾಮಿಗಳು, ಬಸವಬೆಳವಿಯ ಚರಂತೇಶ್ವರ ಮಠದ ಶರಣಬಸವ ಸ್ವಾಮಿಗಳು ಸಾನಿದ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಇಲಕಲ್ಲ ನಗರಸಭೆಯ ಅಧ್ಯಕ್ಷೆ ಶೋಭಾ ಅಮದಿಹಾಳ, ರಾಜ್ಯ ಮಾವು ಅಭಿವೃದ್ದಿ ಹಾಗೂ ಮಾರುಕಟ್ಟೆ ನಿಗಮದ ಮಾಜಿ ನಿರ್ದೇಶಕ ಜಿ.ಎಸ್.ಗೌಡರ, ರಾಜ್ಯ ಮಧ್ಯಪಾನ ಸಂಯಮ ಮಂಡಳಿಯ ಕಾಂiÀರ್iದರ್ಶಿ ಎ.ಹನುಮನರಸಯ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ದೇವರಾಜಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Nimma Suddi
";