ಮನೆಗೆ ತೆರಳಿ ಲಸಿಕೆಗೆ ಪ್ರೇರಣೆ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಲಸಿಕೆ ಮೇಳದ ಅಂಗವಾಗಿ ಸ್ಥಳೀಯ ಪಪಂ ಆಡಳಿತ, ಆರೋಗ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮನೆಮನೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರಣೆ ನೀಡಿದ್ದಾರೆ.
ಕೋವಿಡ್ ಲಸಿಕೆ ಅರ್ಹ ಎಲ್ಲರಿಗೂ ತಲುಪುವ ನಿಟ್ಟಿನಲ್ಲಿ ಹಾಗೂ ಲಸಿಕಾಕರಣ ವೇಗಗೊಳಿಸುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪ್ರತಿ ಬುಧವಾರ ಲಸಿಕೆ ಮೇಳ ಆಯೋಜಿಸಲಾಗುತ್ತಿದೆ. ಜನತೆ ಮೊದಲೇ ಸೂಚಿಸಿದ ಲಸಿಕೆ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯುತ್ತಿದ್ದಾರೆ.
ಆದರೆ ಇನ್ನೂ ಹಲವರು ಕೋವಿಡ್ ಮೊದಲ ಲಸಿಕೆಯನ್ನೇ ಪಡೆದಿಲ್ಲದಿರುವ ಮಾಹಿತಿ ಪಡೆದ ಸ್ಥಳೀಯ ಅಕಾರಿಗಳು ಸೆ.೧೫ರಂದು ನಡೆದ ಮೇಳದ ದಿನದಂದು ವಾರ್ಡ್ ನಂ.೭ರಲ್ಲಿನ ಮನೆ ಮನೆಗೆ ತೆರಳಿ ಲಸಿಕೆ ಪಡೆಯದವರ ಮಾಹಿತಿ ಪಡೆದು ಕುಟುಂಬ ಸದಸ್ಯರಿಗೆ ತಿಳಿವಳಿಕೆ ಹೇಳುವಲ್ಲಿ ನಿರತರಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಕೋವಿಡ್ ೩ನೇ ಅಲೆ ತಡೆಯುವ ನಿಟ್ಟಿನಲ್ಲಿ ಅರ್ಹ ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆಯಬೇಕು. ತಾವೂ ಸುರಕ್ಷಿತವಾಗುವುದರೊಂದಿಗೆ ಕುಟುಂಬದ ಇತರೆ ಸದಸ್ಯರನ್ನು ಕೋವಿಡ್‌ನಿಂದ ಕಾಪಾಡುವ ಜವಾಬ್ದಾರಿ ಇದೆ ಎಂದರು.
ಕಂದಾಯ ನಿರೀಕ್ಷಕ ಜಂಬುನಾಥ ಚಿನಿವಾಲರ, ಪಪಂ ಸಮುದಾಯ ಸಂಘಟನಾ ಅಕಾರಿ ಭೂತಪ್ಪ.ಡಿ., ಎಂ.ಆರ್.ಕೆರೂರ, ಗ್ರಾಮಲೆಕ್ಕಿಗ ಸುರೇಶ ಹುದ್ದಾರ, ಆರೋಗ್ಯ ಇಲಾಖೆ ಪ್ರಸನ್ನ ಜಮಖಂಡಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಪಪಂ ಸಿಬ್ಬಂದಿ ಇದ್ದರು.