ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಅಮೀನಗಡ ಪಟ್ಟಣದ ಸರಕಾರಿ ಉರ್ದು ಪ್ರೌಢಶಾಲೆಯಲ್ಲಿ (ಆರ್‌ಎಂಎಸ್‌ಎ) ಏಕ್ ಭಾರತ್ ಶ್ರೇಷ್ಠ ಭಾರತ್ ಕ್ಲಬ್ ರಚಿಸಲಾಯಿತು.
ಸಮಾಜ ವಿಜ್ಞಾನ ಶಿಕ್ಷಕ ಎಚ್.ಎ.ಸೌದಾಗರ್ ನೇತೃತ್ವದಲ್ಲಿ ರಚಿತವಾದ ಈ ಕ್ಲಬ್ ಭಾರತದ ನಾನಾ ರಾಜ್ಯಗಳ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದಾಗಿದೆ.
ರಾಜ್ಯಗಳ ಪರಿಚಯದೊಂದಿಗೆ ಅಲ್ಲಿನ ಭೌಗೋಳಿಕ ಪ್ರದೇಶ, ಉಡುಪು, ಜನರ ಆಚಾರ, ವಿಚಾರ, ನದಿ, ಧಾರ್ಮಿಕ ಸ್ಥಳ ಹೀಗೆ ಹಲವು ಆಯಾಮಗಳಲ್ಲಿ ರಾಜ್ಯದ ಪರಿಚಯದೊಂದಿಗೆ ಭಾರತ ದೇಶದಲ್ಲಿನ ನಾವೆಲ್ಲ ಒಂದು ಎಂಬ ಕಲ್ಪನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಉದ್ದೇಶ ಹೊಂದಿದೆ.
ಶಾಲೆಯಲ್ಲಿ ಕ್ಲಬ್ ಉದ್ಘಾಟನೆ ವೇಳೆ ಶಿಕ್ಷಕ ಎಚ್.ಎ.ಸೌದಾಗರ್ ಅವರು, ಉತ್ತರಾಖಂಡ ರಾಜ್ಯದ ಭೌಗೋಳಿಕ ಪ್ರದೇಶ, ನಕಾಶೆ, ಅಲ್ಲಿನ ಧಾರ್ಮಿಕ ಸ್ಥಳಗಳು ಸೇರಿದಂತೆ ಇತರೆ ವಿಷಯಗಳನ್ನು ನಕಾಶೆ, ಚಿತ್ರಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಉತ್ತರಾಖಂಡದ ಜನರ ವೇಷಭೂಷಣ ಧರಿಸಿ ಗಮನ ಸೆಳೆದರು. ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.