ಜಿಲ್ಲೆಯಲ್ಲಿ ೨೦೩ ಮತಗಟ್ಟೆ, ೩೪೨೮ ಮತದಾರರು
ನಿಮ್ಮ ಸುದ್ದಿ ಬಾಗಲಕೋಟೆ
ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ತಿಗೆ ಡಿಸೆಂಬರ ೧೦ ರಂದು ಬೆಳಿಗ್ಗೆ ೮ ರಿಂದ ಸಂಜೆ ೪ ಗಂಟೆವರೆಗೆ ಮತದಾನ ನಡೆಯಲಿದ್ದು, ಮತದಾನಕ್ಕೆ ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದೆ.
ಜಿಲ್ಲೆಯಲ್ಲಿ ೨೦೩ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ೩೪೨೮ ಮತದಾರರು ಮತದಾನ ಮಾಡಲಿದ್ದಾರೆ.
ಬುಧವಾರ ಜಿಲ್ಲೆಯಲ್ಲಿ ಆಯಾ ತಾಲೂಕಾ ಕೇಂದ್ರಗಳಲ್ಲಿ ಸ್ಥಾಪಿಸಲಾದ ಮಸ್ಟರಿಂಗ್ ಕೇಂದ್ರದಿಂದ ಚುನಾವಣೆಗೆ ನೇಮಕಗೊಂಡ ಸಿಬ್ಬಂದಿಗಳು ಮತದಾನಕ್ಕೆ ಬೇಕಾದ ಎಲ್ಲ ರೀತಿಯ ಸಾಮಗ್ರಿಗಳನ್ನು ತೆಗೆದುಕೊಂಡು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿದರು.
ಮತದಾನಕ್ಕೆ ೨೦೩ ಮತಗಟ್ಟೆಗಳಿಗೆ ಒಟ್ಟು ಪಿಆರ್ಓ ೨೫೦, ಎಪಿಆರ್ಓ ೨೫೦, ಪಿಓ ೨೫೦, ೩೪೯ ಪೊಲೀಸ್ ಸಿಬ್ಬಂದಿ ಹಾಗೂ ೨೨೭ ಮೈಕ್ರೋ ಆಬ್ಜರವರ್ಗಳನ್ನು ನೇಮಿಸಲಾಗಿದೆ. ಮತಗಟ್ಟೆ ತೆರಳುವ ಸಿಬ್ಬಂದಿಗಳಿಗೆ ಒಟ್ಟು ೬೯ ಬಸ್ಗಳ ವ್ಯವಸ್ಥೆ ಮಾಡಲಾಗಿತ್ತು.
ಪರಿಷತ್ ಚುನಾವಣೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ೩೪೨೮ ಮತದಾರರಿದ್ದು, ಹುನಗುಂದ ತಾಲೂಕಿನಲ್ಲಿ ನಗರ ೨೩, ಗ್ರಾಮೀಣ ೨೩೪ ಸೇರಿ ಒಟ್ಟು ೨೫೭ ಮತದಾರರಿದ್ದರೆ, ಇಲಕಲ್ಲ ತಾಲೂಕಿನಲ್ಲಿ ನಗರ ೩೨, ಗ್ರಾಮೀಣ ೨೭೪ ಒಟ್ಟು ೩೦೬, ಗುಳೇದಗುಡ್ಡ ನಗರ ೨೩, ಗ್ರಾಮೀಣ ೧೫೫, ಒಟ್ಟು ೧೭೮, ಬಾದಾಮಿ ನಗರ ೪೪, ಗ್ರಾಮೀಣ ೪೭೩, ಒಟ್ಟು ೫೧೭, ಬಾಗಲಕೋಟೆ ನಗರ ೪೨, ಗ್ರಾಮೀಣ ೪೦೭, ಒಟ್ಟು ೪೪೯, ಬೀಳಗಿ ನಗರ ೨೪, ಗ್ರಾಮೀಣ ೩೬೫ ಒಟ್ಟು ೩೮೯, ಮುಧೋಳ ನಗರ ೩೮, ಗ್ರಾಮೀಣ ೩೯೪ ಒಟ್ಟು ೪೩೨, ರಬಕವಿ-ಬನಹಟ್ಟಿ ನಗರ ೮೪, ಗ್ರಾಮೀಣ ೩೧೯ ಒಟ್ಟು ೪೦೩, ಜಮಖಂಡಿ ನಗರ ೩೬ ಗ್ರಾಮೀಣ ೪೬೧ ಒಟ್ಟು ೪೯೭ ಮತದಾರರಿದ್ದಾರೆ.