ನಿಮ್ಮ ಸುದ್ದಿ ಬಾಗಲಕೋಟೆ
ಮಹಿಳಾ ಶಿಕ್ಷಣವಷ್ಟೆ ಅಲ್ಲದೆ ಸಾಮಾಜಿಕ ಅನಿಷ್ಠ ಪದ್ಧತಿಗಳ ವಿರುದ್ಧ ಸಾವಿತ್ರಿಬಾಯಿ ಫುಲೆ ದಿಟ್ಟ ಹೋರಾಟ ನಡೆಸಿದರು ಎಂದು ಶಿಕ್ಷಕಿ ಡಾ.ಎಸ್.ಸಿ.ರಂಜಣಗಿ ತಿಳಿಸಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಬಾವಿ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಿಳಾ ಶಿಕ್ಷಣಕ್ಕೆ ಅಷ್ಟೇ ಅಲ್ಲದೆ ಇತರೆ ಸಾಮಾಜಿಕ ಅನಿಷ್ಟ ಪದ್ಧತಿಗಳಾದ ಸತಿಸಹಗಮನ, ಕೇಶಮುಂಡನ, ಬಾಲ್ಯವಿವಾಹ, ಇವುಗಳ ವಿರುದ್ಧ ಹೋರಾಡಿದ ದಿಟ್ಟ ಹಾಗೂ ಶ್ರೀಮಂತ ಮಹಿಳೆ ಸಾವಿತ್ರಿಬಾಯಿ ಫುಲೆ ಅವರಾಗಿದ್ದರು ಎಂದರು.
ಸ್ತ್ರೀಯರೂ ಕೂಡ ಪುರುಷರಂತೆ ಶಿಕ್ಷಣ ಪಡೆಯಬೇಕೆಂಬ ಮಹದಾಸೆಯಿಂದ ತಮಗೊದಗಿದ ಕಷ್ಟ-ಕಾರ್ಪಣ್ಯಗಳನ್ನು ಲೆಕ್ಕಿಸದೇ ಹೋರಾಡಿ ಮಹಾನ್ ಸ್ತ್ರೀ ಎನಿಸಿಕೊಂಡಿದ್ದಳು ಎಂದು ಹೇಳಿದರು.
ಶಿಕ್ಷಕ ಮೊಹಮ್ಮದ ಇರ್ಫಾನ್, ಹಿರಿಯ ಶಿಕ್ಷಕಿ ಪಿ.ಎಸ್.ಗಿರಿಯಪ್ಪನವರ, ಪ್ರಬಾರಿ ಉಪ-ಪ್ರಾಚಾರ್ಯ ಹನಮಪ್ಪ ಹಾಲನ್ನವರ ಮಾತನಾಡಿ, ಎಲ್ಲ ಹೆಣ್ಣುಮಕ್ಕಳು ಶಿಕ್ಷಣ ಪಡೆಯಬೇಕು, ಹೆಣ್ಣಿನ ಶಿಕ್ಷಣದಿಂದ ಮಾತ್ರ ಮನೆ, ಸಮಾಜ ಮತ್ತು ದೇಶ ಪ್ರಗತಿ ಕಾಣಬಲ್ಲದು ಎಂದು ತಿಳಿಸಿ ಸ್ತಿçà ಶಿಕ್ಷಣಕ್ಕೆ ಸಾವಿತ್ರಿಬಾಯಿ ಫುಲೆ ಅವರ ಕೊಡುಗೆ ಸ್ಮರಿಸಿದರು.
ಸಾವಿತ್ರಿಬಾಯಿ ಫುಲೆ ಜನ್ಮದಿನದ ಅಂಗವಾಗಿ ಶಾಲೆಯಲ್ಲಿ ನಡೆದ ನಾನಾ ಸರ್ದೆಗಳಲ್ಲಿ ವಿಜೇತ ಮಕ್ಕಳಿಗೆ ಪ್ರೊತ್ಸಾಹಕ ಬಹುಮಾನ ವಿತರಿಸಲಾಯಿತು. ಶಿಕ್ಷಕರಾದ ಎಸ್.ಎಸ್.ಬಿಸಲದಿನ್ನಿ, ಎಂ.ಕೆ.ಪೂಜಾರ, ಎನ್‌ಎಂ.ಕುಚನೂರ, ಎಸ್.ಕೆ.ಅಬಕಾರಿ, ಎ.ಬಿ.ಲಮಾಣಿ, ಎಂ.ಸಿ.ಬಸರಕೋಡ, ಎಂ.ಎಸ್.ಪಾಟೀಲ, ಎಂ.ಸಿ.ಚಲವಾದಿ, ಎಸ್.ಎ.ಮುಂಡೆವಾಡಿ, ಆರ್.ಎಸ್.ಜನಿವಾರದ, ಬಿ.ಜಿ.ಸೋನಾರ್ ಇದ್ದರು.