ನಿಮ್ಮ ಸುದ್ದಿ ಬಾಗಲಕೋಟೆ
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಶತಮಾನೋತ್ಸವ ಆಚರಣೆಯ ಅಂಗವಾಗಿ ಬಡ ಕೂಲಿ ಕಾರ್ಮಿಕರು, ಬಸ್‌ಸ್ಟಾö್ಯಂಡ್ ಹಮಾಲರು, ಮನೆಗಕೆಲಸಕ್ಕೆ ತೆರಳುವ ಮಹಿಳೆಯರು, ಹಾಗೂ ಟಾಂಗಾ ಓಡಿಸುವವರಿಗೆ ಆಹಾರ ಕಿಟ್ ವಿತರಿಸಲಾಯಿತು.
ನಗರದ ಮೆಳ್ಳಿಗೇರಿ ಟವರ್ಸ್ ಆವರಣದಲ್ಲಿ ಶುಕ್ರವಾರ ನೂರಕ್ಕೂ ಹೆಚ್ಚು ಜನರಿಗೆ ೧೦ ಕೆಜಿ ಅಕ್ಕಿ, ೧ ಕೆಜಿ ಅಡುಗೆ ಎಣ್ಣೆ, ಸಕ್ಕರೆ, ಬೇಳೆ, ಗೋಹಿಟ್ಟು, ರವೆ ಸೇರಿದಂತೆ ಇನ್ನಿತರ ಸಾಮಗ್ರಿ ಒಳಗೊಂಡ ಆಹಾರಕಿಟ್‌ನ್ನು ಬಡವರಿಗೆ ಹಂತಹಂತವಾಗಿ ವಿತರಿಸಲಾಯಿತು.
ಆಹಾರ ಕಿಟ್ ವಿತರಿಸಿ ಮಾತನಾಡಿದ ರೆಡ್‌ಕ್ರಾಸ್‌ನ ಜಿಲ್ಲಾ ಸಭಾಪತಿ ಆನಂದ ಜಿಗಜಿನ್ನಿ, ರೆಡ್‌ಕ್ರಾಸ್ ಸಂಸ್ಥೆ ಪ್ರಕೃತಿ ವಿಕೋಪ, ಕೋವಿಡ್-೧೯ ಹಾಗೂ ಇತರೆ ತುರ್ತು ಸಂದರ್ಭಗಳಲ್ಲಿ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದೆ. ಯುವ ಜನರಿಗೆ ಪ್ರಥಮ ಚಿಕಿತ್ಸೆ ಹಾಗೂ ಬೇಸಿಕ್ ಲೈಫ್ ಸಪೋರ್ಟ್ ತರಬೇತಿ ಶಿಬಿರ ಜಿಲ್ಲೆಯಾದ್ಯಂತ ಆಯೋಜಿಸಿದೆ ಎಂದರು.
ಕೋವಿಡ್-೧೯ ಮೂರನೆ ಅಲೆ ಈಗಾಗಲೇ ಆರಂಭವಾಗಿದ್ದು ಜನರು ಎಚ್ಚರಿಕೆಯಿಂದ ಇದ್ದು ಸರಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಮಾಸ್ಕ್ ಹಾಕಿಕೊಳ್ಳದೆ ಹೊರ ಬರಬೇಡಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಲ್ಲರಿಗೂ ಮಾಸ್ಕ್ ವಿತರಿಸಲಾಯಿತು. ಸಂಸ್ಥೆಯ ಸದಸ್ಯರಾದ ಪ್ರವೀಣ ಹಿರೇಕುಂಬಿ, ಸತೀಶ ಬೇತಾಳ, ರಾಮ ಮುಂದಡಾ, ರವಿ ಕುಮಟಗಿ, ಶ್ರೀನಿವಾಸ ಪೂಜಾರಿ, ಸ್ಪೂರ್ತಿ ರಾಜು, ದೀಪಾ ಶೀಲವಂತರ, ಸವಿತಾ ಬಣ್ಣಿದಿನ್ನಿ, ಕವಿತಾ ಕೆಂಚಪ್ಪನವರ, ವಿಠೋಬಾ ಕರ್ಣೇ ಇತರರು ಇದ್ದರು.