ನಿಮ್ಮ ಸುದ್ದಿ ಬಾಗಲಕೋಟೆ
ಬೀದಿದೀಪ ನಿರ್ವಹಣೆಯಲ್ಲಿ ನಿಯಮ ಪಾಲಿಸದ ಗುತ್ತಿಗೆದಾರರಿಗೆ ತಿಳಿವಳಿಕೆ ಪತ್ರದ ರೂಪದಲ್ಲಿ ನೋಟೀಸ್ ನೀಡಿದ ಘಟನೆ ಜಿಲ್ಲೆಯ ಅಮೀನಗಡ ಪಟ್ಟಣ ಪಂಚಾಯಿತಿಯಲ್ಲಿ ನಡೆದಿದೆ.
ಬೀದಿದೀಪ ನಿರ್ವಹಣೆಯಲ್ಲಿ ಟೆಂಡರ್ ಷರತ್ತುಗಳನ್ನು ಗುತ್ತಿಗೆದಾರರು ಉಲ್ಲಂಘಿಸಿದ್ದಾರೆ ಎಂಬುದು ಪತ್ರದ ಮೂಲಕ ತಿಳಿದು ಬಂದಿದೆ ಎನ್ನಲಾಗಿದೆ.
ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಬರೆದ ತಿಳಿವಳಿಕೆ ಪತ್ರದ ಸಾರಾಂಶ ಈ ರೀತಿ ಇದೆ.
“ಅಮೀನಗಡ ಪಟ್ಟಣದ ವ್ಯಾಪ್ತಿಯಲ್ಲಿನ ನಂ 1 ರಿಂದ 16 ವಾರ್ಡುಗಳಲ್ಲಿ ಬೀದಿ ದೀಪಗಳ ನಿರ್ವಹಣೆಗೆ ಇ-ಪ್ರೊಕ್ಯೂಮೆಂಟ್ ಮೂಲಕ ಟೆಂಡರ್ ಕರೆಯಲಾಗಿದ್ದು, ಅದರಂತೆ ನಿಗದಿಸಿದ ದಿನಾಂಕದಂದು ಟೆಂಡರ್‌ದಲ್ಲಿ ಭಾಗವಹಿಸಿದ್ದು ಇರುತ್ತದೆ. ಅದರಂತೆ ತಾವು ಒಬ್ಬರೆ ಭಾಗವಹಿಸಿದ್ದು ತಮಗೆ 23/8/2021 ರಂದು ವಾರ್ಡ್ ನಂ 01 ರಿಂದ 16 ವಾರ್ಡ್ ಗಳಲ್ಲಿ ಬೀದಿ ದೀಪಗಳ ನಿರ್ವಹಣೆಗಾಗಿ ಕಛೇರಿ ಆದೇಶ ನೀಡಿದ್ದು ಇರುತ್ತದೆ.
ಆದರೆ ನಮಗೆ ಹಲವಾರು ಭಾರಿ ದೂರವಾಣಿ ಮುಖಾಂತರ ಬೀದಿ ದೀಪಗಳನ್ನು ಸರಿಯಾಗಿ ನಿರ್ವಹಿಸಲಾರದ ಬಗ್ಗೆ ಸಾರ್ವಜನಿಕರು ದೂರು ನೀಡಿರುತ್ತಾರೆ ಎಂದು ತಿಳಿಸಿದ್ದರೂ ಕೂಡ ತಾವು ಸರಿಯಾಗಿ ಸ್ಪಂದಿಸಿರುವದಿಲ್ಲ.
ಇದ್ದರಿಂದ ಕಛೇರಿಯ ಕೆಲಸಕ್ಕೆ ತೊಂದರೆಯುಂಟಾಗಿದ್ದು ಇರುತ್ತದೆ. ಆದರಂತೆ ಟೆಂಡರ್ ನಿಯಮಗಳಂತೆ ಪಟ್ಟಣ ಪಂಚಾಯತ ಕಛೇರಿಯಲ್ಲಿ ನಾವು ಒಬ್ಬ ತಾಂತ್ರಿಕ ಸಿಬ್ಬಂದಿಯನ್ನು ನೇಮಿಸಿರುವುದಿಲ್ಲ. ಈಗ ಬೀದಿ ದೀಪ ಅಳವಡಿಸುವ ಕಾರ್ಮಿಕರು ಸುರಕ್ಷಾ ಪರಿಕರಗಳು ತಾವು ನೀಡಬೇಕಾಗಿದ್ದು, ಇದರಲ್ಲಿ ನಿರ್ಲಕ್ಷ್ಯ ಮಾಡಿ ಅವರ ಜೀವಕ್ಕೆ ಹಾನಿಯಾದರೆ ನೀವೇ ಜವಾಬ್ದಾರರಾಗುತ್ತೀರಿ. ಮೇಲಿನ ಅಂಶಗಳಿಗೆ ಕ್ರಮ ಕೈಗೊಂಡು 7 ದಿನಗಳಲ್ಲಿ ಈ ಕಾರ್ಯಲಯಕ್ಕೆ ವರದಿ ನೀಡಲು ತಿಳಿಸಿದೆ.”
ಮುಖ್ಯಾಧಿಕಾರಿಗಳು ಜ.10 ರಂದು ಈ ತಿಳಿವಳಿಕೆ ಪತ್ರ ನೀಡಿದ್ದಾರೆ.